ಹಳೆ ನವರಂಗ್ ಥಿಯೇಟರ್ ವೈಭವ ಇನ್ನು ನೆನಪು ಮಾತ್ರ!

Published : Aug 31, 2019, 01:06 PM IST
ಹಳೆ ನವರಂಗ್ ಥಿಯೇಟರ್ ವೈಭವ ಇನ್ನು ನೆನಪು ಮಾತ್ರ!

ಸಾರಾಂಶ

ಬೆಂಗಳೂರಿನ ಐತಿಹಾಸಿಕ ಥಿಯೇಟರ್ ಗಳಲ್ಲಿ ನವರಂಗ್ ಕೂಡಾ ಒಂದು. ಸುಮಾರು 60 ವರ್ಷಗಳ ಇತಿಹಾಸ ಈ ಚಿತ್ರಮಂದಿರಕ್ಕಿದೆ. ರಾಜ್ ಕುಮಾರ್ ಅಷ್ಟೂ ಸಿನಿಮಾಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆ ಇದರದ್ದು. ಈ ವೈಭವ ಇನ್ನು ನೆನಪು ಮಾತ್ರವಾಗಿ ಉಳಿಯಲಿದೆ. 

ಬೆಂಗಳೂರು (ಆ. 31): ಸಿಲಿಕಾನ್ ಸಿಟಿಯ ಐತಿಹಾಸಿಕ ಥಿಯೇಟರ್ ಗಳು ಒಂದೊಂದೇ ಮುಚ್ಚುತ್ತಿವೆ. ಮೆಜೆಸ್ಟಿಕ್, ಸಾಗರ್, ಕಲ್ಪನಾ, ಕೈಲಾಶ್, ಕೆಂಪೇಗೌಡ, ಕಪಾಲಿ ಚಿತ್ರಮಂದಿರಗಳು ಈಗಾಗಲೇ ಕ್ಲೋಸ್ ಆಗಿವೆ. ಆ ಸಾಲಿಗೆ ನವರಂಗ್ ಚಿತ್ರಮಂದಿರ ಸೇರಿದೆ. 

ರಾಜಾಜಿನಗರ ರಾಜ್ ಕುಮಾರ್ ರಸ್ತೆಯಲ್ಲಿರುವ ನವರಂಗ್ ಥಿಯೇಟರ್ 59 ವರ್ಷಗಳ ಇತಿಹಾಸ ಇರುವ ಫೇಮಸ್ ಥಿಯೇಟರ್. ಈಗ ಈ ಕಟ್ಟಡ ಹಳೆತಾಗಿದ್ದು ಇದನ್ನು ರಿಪೇರಿ ಮಾಡಲಾಗುತ್ತಿದ್ದು ಮಲ್ಟಿಪ್ಲೆಕ್ಸ್ ರೀತಿಯಲ್ಲಿ ತಲೆ ರ ಎತ್ತಲಿದೆ.  

‘ಇತ್ತೀಚಿಗೆ ಮಲ್ಟಿಪ್ಲೆಕ್ಸ್ ಗಳು  ಹೆಚ್ಚು ಹೆಚ್ಚು ಬರುತ್ತಿರುವುದಿಂದ ನಮಗೆ ಲಾಭ ಬರುತ್ತಿಲ್ಲ. ಹಾಗಾಗಿ ನಾವು ಇದನ್ನು ಮಲ್ಟಿಪ್ಲೆಕ್ಸ್ ರೀತಿ ಬದಲಾವಣೆ ಮಾಡುವ ಅನಿವಾರ್ಯತೆ ಎದುರಾಗಿದೆ. ಥಿಯೇಟರನ್ನು ಕೆಡವಿ ಶಾಪಿಂಗ್ ಮಾಲ್ ಮಾಡಲು ಕೆಲವರು ಸಲಹೆ ನೀಡಿದರು. ಆದರೆ ಇದು ನಮ್ಮ ತಂದೆಯ ಕನಸು. ಅದನ್ನು ಕೆಡವಲು ಮನಸ್ಸಿಲ್ಲ. ಹಾಗಾಗಿ ಇದಕ್ಕೆ ಹೊಸ ರೂಪ ಕೊಡಲಿದ್ದೇವೆ’ ಎಂದು ಮಾಲಿಕ ಮೋಹನ್ ತಿಳಿಸಿದ್ದಾರೆ. ಮರು ನವೀಕರಣ ಮಾಡಲು ಸುಮಾರು 2 ಕೋಟಿ ರೂ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ರಿನೋವೇಶನ್ ಕೆಲಸ ಮುಗಿಯುವವರೆಗೂ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.  

ರಾಜ್ ಕುಮಾರ್ ಕುಟುಂಬದ ಅಷ್ಟೂ ಸಿನಿಮಾಗಳನ್ನು ಪ್ರದರ್ಶನ ಮಾಡಿದ ಕರ್ನಾಟಕದ ಏಕೈಕ ಥಿಯೇಟರ್ ನವರಂಗ್. ಮರುನವೀಕರಣಕ್ಕೂ ಮುನ್ನ ತೆರೆ ಕಂಡ ಕೊನೆ ಸಿನಿಮಾ ಅಭಿಷೇಕ್ ಅಂಬರೀಶ್ ಅವರ ಅಮರ್ ಸಿನಿಮಾ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಸಿನಿಮಾ ನೋಡಿದವರು ಏನಂದ್ರು?
ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!