ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪೈಲ್ವಾನ್’ ಕನ್ನಡ ಆವತರಣಿಕೆಯ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ.
ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಕನ್ನಡದ ಜತೆಗೆ ಇದು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಅಲ್ಲೂ ಸೆನ್ಸಾರ್ ಪ್ರಕಿಯೆ ಮುಗಿಸಬೇಕಿದೆ.
ರಿಲೀಸಾಗಿದೆ ಸುದೀಪ್ ಸಿನಿಮಾದ ಹೈವೋಲ್ಟೇಜ್ ಟ್ರೇಲರ್!
ಸದ್ಯಕ್ಕೆ ಚಿತ್ರತಂಡ ಅದೇ ಕೆಲಸದಲ್ಲಿ ಬ್ಯುಸಿ ಆಗಿದೆ. ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ಕೆಆರ್‌ಜಿ ಸ್ಟುಡಿಯೋ ಕನ್ನಡದಲ್ಲಿ ವಿತರಣೆಯ ಹಕ್ಕು ಪಡೆದಿದೆ. ಹಾಗೆಯೇ ತೆಲುಗಿನಲ್ಲಿ ವರಾಹಿ ಸಂಸ್ಥೆ ವಿತರಣೆ ಮಾಡುತ್ತಿದೆ.
ಕನ್ನಡ ಚಿತ್ರವನ್ನು ಬಾಲಿವುಡ್ ನಲ್ಲಿ ಪ್ರಮೋಶನ್ ಮಾಡಿದ ಕಿಚ್ಚ ಸುದೀಪ್
ಹಿಂದಿ, ತಮಿಳು ಹಾಗೂ ಮಲಯಾಳಂ ವಿತರಣೆಯ ಹಕ್ಕು ಝೀ ಸ್ಟುಡಿಯೋಸ್ ಪಾಲಾಗಿದೆ. ಉಳಿದಂತೆ ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ ಪ್ರೈಮ್ ಮೀಡಿಯಾ ಸಂಸ್ಥೆ ಯ ಮೂಲಕ ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಪೈಲ್ವಾನ್ ಬಿಡುಗಡೆ ಆಗುತ್ತಿದೆ.