ನಟ ಸುದೀಪ್‌ ಬಗ್ಗೆ ಹೇಳಿಕೆ ನೀಡದಂತೆ ನಿರ್ಮಾಪಕ ಕುಮಾರ್‌, ಸುರೇಶ್‌ಗೆ ಆದೇಶ ನೀಡಿದ ಕೋರ್ಟ್‌

Published : Aug 21, 2023, 07:07 PM ISTUpdated : Aug 21, 2023, 07:46 PM IST
ನಟ ಸುದೀಪ್‌ ಬಗ್ಗೆ ಹೇಳಿಕೆ ನೀಡದಂತೆ ನಿರ್ಮಾಪಕ ಕುಮಾರ್‌, ಸುರೇಶ್‌ಗೆ ಆದೇಶ ನೀಡಿದ ಕೋರ್ಟ್‌

ಸಾರಾಂಶ

ನಟ ಸುದೀಪ್‌ ಬಗ್ಗೆ ನಿರ್ಮಾಪಕ ಎಂ.ಎನ್. ಕುಮಾರ್‌ ಮತ್ತು ಸುರೇಶ್‌ ಯಾವುದೇ ಹೇಳಿಕೆ ನೀಡದಂತೆ ನ್ಯಾಯಾಲಯದಿಂದ ಮಧ್ಯಂತರ ಆದೇಶ ಹೊರಡಿಸಲಾಗಿದೆ.

ಬೆಂಗಳೂರು (ಆ.21): ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಕಿಚ್ಚ ಸುದೀಪ್‌ ಮತ್ತು ಅವರ ಕುಟುಂಬದ ವಿರುದ್ಧ ನಿರ್ಮಾಪಕ ಕೆ.ಸಿ.ಎನ್‌ ಕುಮಾರ್‌ ಮತ್ತು  ಎಂ.ಎನ್. ಸುರೇಶ್‌ ಅವರು ಯಾವುದೇ ಹೇಳಿಕೆ ನೀಡದಂತೆ ನ್ಯಾಯಾಲಯದಿಂದ ಮಧ್ಯಂತರ ಆದೇಶವನ್ನು ಹೊರಡಿಸಲಾಗಿದೆ.

ನಟ ಸುದೀಪ್ ಮತ್ತು ನಿರ್ಮಾಪಕ ಎಂಎನ್ ಕುಮಾರ್ ಕಾಲ್ ಶೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ಮಾಡಿದ 9ನೇ ಸಿಟಿ ಸಿವಿಲ್ ಕೋರ್ಟ್‌ ಸುದೀಪ್ ಪರ ಮಧ್ಯಂತರದ ಆದೇಶ ನೀಡಿದೆ. ಪ್ರತಿವಾದಿಗಳು ಕೆಸಿಎನ್‌ ಕುಮಾರ್ ಹಾಗೂ ಎಂ.ಎನ್. ಸುರೇಶ್‌ (KCN Kumar and MN Suresh) ಸುದೀಪ್ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಆದೇಶ ಹೊರಡಿಸಲಾಗಿದೆ. ಇನ್ನು ಸುದೀಪ್‌ ಅವರು 10 ಕೋಟಿ ರೂ. ಪಡೆದುಕೊಮಡಿದ್ದು, ಕಾಲ್‌ ಶೀಟ್‌ ನೀಡುತ್ತಿಲ್ಲ ಎಂದು ನಿರ್ಮಾಪಕ ಕೆಸಿಎನ್‌ ಕುಮಾರ್ ಮತ್ತು ಎಂ.ಎನ್. ಸುರೇಶ್‌ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರ್‌ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಐಪಿಎಸ್‌ ಡಿ. ರೂಪಾ ಮೌದ್ಗಿಲ್‌ಗೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌: ಐಎಎಸ್‌ ರೋಹಿಣಿ ಸಿಂಧೂರಿಗೆ ಗೆಲುವು

ಇನ್ನು ಕುಮಾರ್ ಹಾಗೂ ಸುರೇಶ್ ಅವರು ಕೇವಲ ನಟ ಸದೀಪ್‌ ಮಾತ್ರವಲ್ಲದೇ ಅವರ ಕುಟುಂಬದ ಬಗ್ಗೆಯೂ ಬಹಿರಂಗ ಹೇಳಿಕೆ ನೀಡದಂತೆ ನಿರ್ಬಂಧ ಹೇರಲಾಗಿದೆ. ಇನ್ನು ಮಾಧ್ಯಮಗಳ ಮುಂದೆಯೂ ಯಾವುದೇ ಹೇಳಿಕೆ ನೀಡಬಾರದೆಂದು ಆದೇಶ ಹೊರಡಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಅಕ್ಟೋಬರ್ 9ಕ್ಕೆ ವಿಚಾರಣೆ ಮುಂದೂಡಿದೆ.

ಸ್ವತಃ ಕೋರ್ಟ್‌ಗೆ ಹಾಜರಾಗಿದ್ದ ಕಿಚ್ಚ ಸುದೀಪ್‌: ಕಳೆದ ಬಾರಿ ನಡೆದ ವಿಚಾರಣೆಗೆ ಸ್ವತಃ ಹಾಜರಾದ ಸುದೀಪ್‌, ಎಂ.ಎನ್‌. ಕುಮಾರ್‌ ಮತ್ತು ಎಂ.ಎನ್‌. ಸುರೇಶ್‌ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ತಮಗೆ ಹಣದ ನೆರವು ನೀಡಿರುವುದಾಗಿ ಅವರು ಸುದ್ದಿಗೋಷ್ಠಿ ನಡೆಸಿ ಸುಳ್ಳು ಹೇಳಿದ್ದಾರೆ. ಇದರಿಂದ ಹಲವರು ತಮ್ಮನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ 22 ವರ್ಷಗಳಿಂದ ಚಿತ್ರರಂಗದಲ್ಲಿ ಕಷ್ಟಪಟ್ಟು ಗಳಿಸಿದ್ದ ತಮ್ಮ ಹೆಸರು ಹಾಗೂ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂಬುದು ಸೇರಿದಂತೆ ಖಾಸಗಿ ದೂರಿನಲ್ಲಿ ಉಲ್ಲೇಖಿಸಿರುವ ವಿಚಾರಗಳ ಬಗ್ಗೆ ಪ್ರಮಾಣೀಕೃತ ಹೇಳಿಕೆ ದಾಖಲಿಸಿ, ಕೆಲವೊಂದು ದಾಖಲೆ ಒದಗಿಸಿದ್ದರು.

ನಟ ಸುದೀಪ್‌, ನಿರ್ಮಾಪಕ ಕುಮಾರ್‌ ನಡುವೆ ರವಿಚಂದ್ರನ್‌ ರಾಜಿ ಸಂಧಾನ

ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಿರ್ಮಾಪಕರು ಕ್ಷಮೆ ಕೋರಿದರೆ ಅವರನ್ನು ಕ್ಷಮಿಸುವಿರಾ? ಅವರೊಂದಿಗೆ ರಾಜೀ ಸಂಧಾನ ಮಾಡಿಕೊಳ್ಳುವಿರಾ ಎಂದು ಸುದೀಪ್‌ಗೆ ಕೇಳಿದರು. ಈ ಪ್ರಶ್ನೆಗೆ ಸುದೀಪ್‌ ಯಾವುದೇ ಹೇಳಿಕೆ ನೀಡದಿದ್ದರೂ, ಅವರ ಪರ ವಕೀಲರು ಉತ್ತರಿಸಿ, ಪ್ರಕರಣದಲ್ಲಿ ನಿರ್ಮಾಪಕರೊಂದಿಗೆ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ. ಈ ರೀತಿ ಮಾನಹಾನಿ ಮಾಡಿದವರಿಗೆ ಪಾಠ ಕಲಿಸಬೇಕಿದೆ ಎಂದು ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ದೃಷ್ಟಿಬೊಟ್ಟು' ಮೂಲಕ ಕನ್ನಡಿಗರ ಮನಗೆದ್ದ ಅರ್ಪಿತಾ ಮೋಹಿತೆ ಈಗ ತೆಲುಗು ಸೀರಿಯಲ್ ನಾಯಕಿ
ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?