'This Fool, This Idiot...': ಇಂಗ್ಲಿಷ್‌ನಲ್ಲಿ ಬಾಲಯ್ಯಗೆ ಬೈದ ಸಿಲ್ಕ್ ಸ್ಮಿತಾ: ನಂತರ ಏನಾಯ್ತು?

Published : Jul 10, 2026, 06:20 PM IST
Balakrishna

ಸಾರಾಂಶ

Silk Smitha: ಫಿಲ್ಮ್ ಇಂಡಸ್ಟ್ರಿ ಒಂದು ರೀತಿ ಸಾಗರವಿದ್ದಂತೆ. ಇಲ್ಲಿ ಅದೆಷ್ಟೋ ಮರೆಯಲಾಗದ ಘಟನೆಗಳು ನಡೆಯುತ್ತವೆ. ಅಂತಹದ್ದೇ ಒಂದು ಸ್ವಾರಸ್ಯಕರ ಘಟನೆಯನ್ನು ನಂದಮೂರಿ ಬಾಲಕೃಷ್ಣ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಶೂಟಿಂಗ್ ಸೀರಿಯಸ್ ಆಗಿ ನಡೀತಿತ್ತು. ಬಾಲಕೃಷ್ಣ ಹಾಗೂ ಸಿಲ್ಕ್ ಸ್ಮಿತಾ ನಡುವಿನ ದೃಶ್ಯ. ಆದರೆ ಇದ್ದಕ್ಕಿದ್ದಂತೆ ಸಿಲ್ಕ್, ಬಾಲಯ್ಯಗೆ ಬೈಯಲು ಶುರು ಮಾಡಿದರು. ಬಾಯಿಗೆ ಬಂದಂತೆ ಬೈದರು. ಸೆಟ್‌ನಲ್ಲಿದ್ದವರೆಲ್ಲಾ ಶಾಕ್. ನಿರ್ದೇಶಕರು ತಕ್ಷಣ ಬ್ರೇಕ್ ಕೊಟ್ಟು ಏನ್ ಮಾಡಿದ್ರು ಗೊತ್ತಾ? ಫಿಲ್ಮ್ ಇಂಡಸ್ಟ್ರಿ ಒಂದು ರೀತಿ ಸಾಗರವಿದ್ದಂತೆ. ಇಲ್ಲಿ ಅದೆಷ್ಟೋ ಮರೆಯಲಾಗದ ಘಟನೆಗಳು ನಡೆಯುತ್ತವೆ.

ಅಂತಹದ್ದೇ ಒಂದು ಸ್ವಾರಸ್ಯಕರ ಘಟನೆಯನ್ನು ನಂದಮೂರಿ ಬಾಲಕೃಷ್ಣ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. 'ಆದಿತ್ಯ 369' ಚಿತ್ರೀಕರಣದ ವೇಳೆ ಸಿಲ್ಕ್ ಸ್ಮಿತಾ ತಮಗೆ ಇಂಗ್ಲಿಷ್‌ನಲ್ಲಿ ಬೈದಿದ್ದನ್ನು ನೆನಪಿಸಿಕೊಂಡರು. 'ಆದಿತ್ಯ 369' ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಕೇವಲ ಐಟಂ ಸಾಂಗ್‌ಗೆ ಸೀಮಿತವಾಗಿರಲಿಲ್ಲ. ಸಿಂಹನಂದಿನಿ ಎಂಬ ಪಾತ್ರವನ್ನೂ ನಿಭಾಯಿಸಿದ್ದರು.

ಒಂದು ದೃಶ್ಯದಲ್ಲಿ ಅವರು ಬಾಲಕೃಷ್ಣರ ಕೃಷ್ಣ ಕುಮಾರ್ ಪಾತ್ರವನ್ನು ನೋಡಿ "ಈ ನೀಚುಡು, ಈ ದುರ್ಮಾರ್ಗುಡು" ಎಂದು ತೆಲುಗಿನಲ್ಲಿ ಡೈಲಾಗ್ ಹೇಳಬೇಕಿತ್ತು. ಆದರೆ ಆಗ ಸಿಲ್ಕ್‌ಗೆ ತೆಲುಗು ಸರಿಯಾಗಿ ಬರುತ್ತಿರಲಿಲ್ಲ. ಟೇಕ್ ಶುರುವಾದಾಗ ಸಿಲ್ಕ್ ಸ್ಮಿತಾ ಆ ತೆಲುಗು ಡೈಲಾಗ್ ಮರೆತುಬಿಟ್ಟರು. ಭಾವೋದ್ವೇಗದಿಂದ ನಟಿಸಬೇಕಿದ್ದ ಆ ದೃಶ್ಯದಲ್ಲಿ, ಅವರು ಇಂಗ್ಲಿಷ್‌ನಲ್ಲಿ "This fool, This idiot, This bastard, This rascal" ಎಂದು ಬಾಲಕೃಷ್ಣರತ್ತ ನೋಡಿ ಕೂಗಿದರು.

ಸೆಟ್‌ನಲ್ಲಿದ್ದವರೆಲ್ಲಾ ದಂಗಾದರು

ನಂತರ ಏನೂ ಅರಿಯದವರಂತೆ ನಿರ್ದೇಶಕರತ್ತ ತಿರುಗಿ "ಡೈರೆಕ್ಟರ್ ಗಾರು.. ಓಕೆನಾ?" ಎಂದು ಕೇಳಿದರು. ಸ್ಟಾರ್ ನಟ ಬಾಲಕೃಷ್ಣಗೆ ಸಿಲ್ಕ್ ಸ್ಮಿತಾ ಇಂಗ್ಲಿಷ್‌ನಲ್ಲಿ ಬೈಯುವುದನ್ನು ಕೇಳಿ ಸೆಟ್‌ನಲ್ಲಿದ್ದವರೆಲ್ಲಾ ದಂಗಾದರು. ಆಗ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ನಗುತ್ತಲೇ, "ಓಕೆ ಏನಮ್ಮಾ.. ನೀನು ಮಾತಾಡಿದ್ದೆಲ್ಲಾ ಇಂಗ್ಲಿಷ್, ಅದೂ ಬರೀ ಬೈಗುಳ" ಎಂದರು. ನಂತರ ಎಲ್ಲರೂ ನಕ್ಕರು. ಈ ಘಟನೆಯನ್ನು ನೆನೆದು ಬಾಲಕೃಷ್ಣ ಕೂಡ ನಕ್ಕರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹಿರಿಯ ನಟ ಶೋಭನ್ ಬಾಬು ಪತ್ನಿ ಶಾಂತಕುಮಾರಿ ನಿಧನ: ಗೆಳತಿಯೊಂದಿಗೆ ಮಾತನಾಡುತ್ತಿದ್ದಾಗಲೇ ಹೃದಯಾಘಾತ
Karavali ವಿವಾದ: ನೇರಪ್ರಸಾರದಲ್ಲಿ ಬಂದು ನಟ ಪ್ರಜ್ವಲ್​ ಕುರಿತು ನಟಿ ಮೇಘನಾ ರಾಜ್​ ಏನ್​ ಹೇಳಿದ್ರು