'ಒಂದಲ್ಲ, 40 ಹುಡುಗಿಯರಿಗೆ ತೃಪ್ತಿಪಡಿಸಬಲ್ಲೆ..' Babloo Prithiveeraj ಹೀಗಂದಿದ್ದೇಕೆ?

Published : Dec 12, 2023, 10:15 PM ISTUpdated : Dec 12, 2023, 10:38 PM IST
'ಒಂದಲ್ಲ, 40 ಹುಡುಗಿಯರಿಗೆ ತೃಪ್ತಿಪಡಿಸಬಲ್ಲೆ..' Babloo Prithiveeraj ಹೀಗಂದಿದ್ದೇಕೆ?

ಸಾರಾಂಶ

ಕನ್ನಡದಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌, ಭಗವಾನ್‌ದಂಥ ಚಿತ್ರಗಳಲ್ಲಿ ನಟಿಸಿದ್ದ ನಟ ಬಬ್ಲೂ ಪೃಥ್ವಿರಾಜ್‌ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಪತ್ರಕರ್ತ ಹಾಗೂ ನಟ ಬೈಲ್ವಾನ್ ರಂಗನಾಥನ್ ಮಾಡಿರುವ ಆರೋಪ

ದಕ್ಷಿಣ ಭಾರತದ ಪ್ರಸಿದ್ಧ ನಟ ಬಬ್ಲೂ ಪೃಥ್ವಿರಾಜ್‌. ತಮಿಳು ಮಾತ್ರವಲ್ಲದೆ, ಬಬ್ಲೂ ತೆಲುಗು, ಹಿಂದಿ ಹಾಗೂ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌, ಭಗವಾನ್‌ದಂಥ ಚಿತ್ರಗಳಲ್ಲಿ ನಟಿಸಿ ಬಬ್ಲೂ ಪೃಥ್ವಿರಾಜ್‌ ಪ್ರಸಿದ್ಧರಾಗಿದ್ದಾರೆ. ಬೆಂಗಳೂರು ಮೂಲದ ಬಬ್ಲೂ ಪೃಥ್ವಿರಾಜ್‌ಗೆ ಈಗ 56 ವರ್ಷ. ಇತ್ತೀಚೆಗೆ ಅವರು ಹಿಂದಿನ ಬ್ಲಾಕ್‌ಬಸ್ಟರ್‌ ಚಿತ್ರ ಆನಿಮಲ್‌ನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ, ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಪತ್ರಕರ್ತ ಹಾಗೂ ನಟ ಬೈಲ್ವಾನ್‌ ರಂಗನಾಥನ್‌ ಬಗ್ಗೆ ಅವರು ಸಿಟ್ಟಾಗಿದ್ದಾರೆ. ಮೊದಲ ಪತ್ನಿ ಬೀನಾರಿಂದ ಕಳೆದ ವರ್ಷ ಬೇರ್ಪಟ್ಟಿದ್ದ ಬಬ್ಲೂ, ಆ ಬಳಿಕ ತಮಗಿಂತ ತುಂಬಾ ಕಿರಿಯವರಾಗಿದ್ದ 33 ವರ್ಷದ ರುಕ್ಮಿಣಿ  ಶೀತಲ್‌ ಎನ್ನುವ ಹುಡುಗಿಯ ಜೊತೆ ಸುತ್ತಾಡುತ್ತಿದ್ದರು. ಇನ್ನೇನು ಮತ್ತೊಂದು ಮದುವೆಯ ಹೊಸ್ತಿಲಲ್ಲಿ ಇರುವ ವೇಳೆ ಶೀತಲ್‌ ಜೊತೆಗೂ ಬೇರ್ಪಟ್ಟಿದ್ದಾರೆ.

ಮೊದಲ ಪತ್ನಿಯಿಂದ ಬಬ್ಲೂ ಪೃಥ್ವಿರಾಜ್‌ 27 ವರ್ಷದ ಪುತ್ರನನ್ನು ಹೊಂದಿದ್ದಾರೆ. ಆಟಿಸಂ ಕಾಯಿಲೆಯಿಂದ ಬಳಲುತ್ತಿರುವ ಈತ ತಂದೆಯೊಂದಿಗೆ ವಾಸವಾಗಿದ್ದಾನೆ. ತನಗೆ ಹೆಚ್ಚಿನ ಪ್ರಾಮುಖ್ಯತೆ ಸಿಗೋದಿಲ್ಲ, ದೈಹಿಕವಾಗಿಯೂ ಲಾಭವಿಲ್ಲ ಎನ್ನುವ ಕಾರಣಕ್ಕೆ ಶೀತಲ್‌, ಬಬ್ಲೂ ಪೃಥ್ವಿರಾಜ್‌ನನ್ನು ಬಿಟ್ಟು ಹೋಗಿದ್ದಾಳೆ ಎಂದು ಬೈಲ್ವಾನ್‌ ರಂಗನಾಥನ್‌ ಆರೋಪಿಸಿದ್ದರು.
ಇದಕ್ಕೆ ಉತ್ತರ ನೀಡಿರುವ ಬಬ್ಲೂ ಪೃಥ್ವಿರಾಜ್,‌ 'ಶೀತಲ್‌ ಜೊತೆಗೆ ಬೇರ್ಪಟ್ಟಿರುವ ವಿಚಾರವನ್ನು ಬೇರೆಯದೇ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ನನ್ನ ಜೀವನದಲ್ಲಿ ಮಗ ಆಟಿಸಂ ಕಾಯಿಲೆಗೆ ತುತ್ತಾದ ಎನ್ನುವ ಅಂಶವನ್ನೇ ನಾನಿನ್ನೂ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕಾಗಿ ನಾನು 9 ವರ್ಷಗಳ ಕಾಲ ಖಿನ್ನತೆಯಲ್ಲಿದ್ದೆ. ಸಿನಿಮಾಗಳನ್ನು ಬಿಟ್ಟಿದ್ದೆ. ನನ್ನೆಲ್ಲಾ ಆಸ್ತಿಗಳನ್ನು ಮಾರಾಟ ಮಾಡಿದ್ದೆ' ಎಂದು ಪರಥ್ವಿರಾಜ್‌ ಹೇಳಿದ್ದಾರೆ.

ನಂತರ ಕೆಲವು ಹಂತದಲ್ಲಿ ನನಗೆ ಸ್ಪಷ್ಟವಾಯಿತು ಮತ್ತು ನಿಧಾನವಾಗಿ ಅದರಿಂದ ಹೊರಬಂದೆ. ಅದರ ನಂತರ, ನನ್ನ ಮಗನನ್ನು ನನ್ನ ದುಃಖದ ಕಡೆಯಿಂದ ನೋಡುವ ಬದಲು ಸಂತೋಷದ ಕಡೆಯಾಗಿ ನೋಡಲು ಪ್ರಯತ್ನಿಸಿದೆ. ಅವರ ವಿವಿಧ ಚೇಷ್ಟೆಗಳು ನನಗೂ ಮಗುವಿನಂತೆ ಅನಿಸಿತು. ಶೀತಲ್ ಜೊತೆ ಎಂಗೇಜ್ ಮೆಂಟ್ ಆದಾಗ ಜೀವನದಲ್ಲಿ ಒಳ್ಳೆದು ನಡೆದಾಗ ಮುಕ್ತವಾಗಿ ಮಾತನಾಡುವ ಮಗುವಿನಂತೆ ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ಆದರೆ ನಿರ್ದಿಷ್ಟ ಶೇಕಡಾವಾರು ಜನರು ಅದನ್ನು ವಿಭಿನ್ನವಾಗಿ ಟೀಕಿಸುತ್ತಾರೆ ಎಂದು ಹೇಳಿದ್ದಾರೆ.

'ಯಾಕೆ ಹಾವು ಕಪ್ಪೆ ನುಂಗಿದ ಥರ ಮಾಡ್ತಿದ್ದೀರಾ..? ಹನಿ ರೋಸ್‌ ಹೊಸ ವಿಡಿಯೋ ನೋಡಿ ತಲೆ ಚಚ್ಚಿಕೊಂಡ ಫ್ಯಾನ್ಸ್‌!

ನನ್ನ ವಿದ್ಯಾರ್ಹತೆ ಏನು, ನನ್ನ ಕೌಶಲ್ಯ ಏನು ಎಂದು ತಿಳಿಯದೆ ಟೀಕೆ ಮಾಡುತ್ತಾರೆ. ಅದಕ್ಕೇ ಈಗಿನಿಂದಲೇ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನು ಎಲ್ಲಿಯೂ ಮಾತನಾಡುವುದಿಲ್ಲ. ನಾನು ಶೀತಲ್‌ಗೆ ದೈಹಿಕವಾಗಿ ತೃಪ್ತಿಪಡಿಸಲು ಸಾಧ್ಯವಾಗಲಿಲ್ಲ, ಅದಕ್ಕಾಗಿಯೇ ನಾವು ಬೇರ್ಪಟ್ಟಿದ್ದೇವೆ ಎಂದು ಬೈಲ್ವಾನ್ ಹೇಳುತ್ತಾರೆ. ನಾನು ಬೈಲ್ವಾನ್‌ ಬೀಚ್‌ನಲ್ಲಿ ನಡೆಯುವ ವೇಳೆ ನೋಡಿದ್ದೇನೆ. ಆತನಿಗೆ ಒಂದು ಹೆಜ್ಜೆಯನ್ನೂ ಸರಿಯಾಗಿ ಇಡೋಕೆ ಆಗೋದಿಲ್ಲ. ಯೂಟ್ಯೂಬ್‌ನಲ್ಲಿ ಶೋ ಮಾಡಿ ಹಣ ಮಾಡುತ್ತಾನೆ. ಒಳ್ಳೆಯದನ್ನು ಮಾತನಾಡಿದರೆ ಅಲ್ಲಿ ಯಾರೂ ಕೇಳೋದಿಲ್ಲ. ಅದಕ್ಕಾಗಿ ಇಂಥ ಮಾತುಗಳನ್ನು ಆಡುತ್ತಾನೆ. ಅದರೆ, ಬೈಲ್ವಾನ್‌ಗೆ ನಾನು ಹೇಳೋದು ಏನೆಂದರೆ, ಮಹಿಳೆಯರನ್ನು ತೃಪ್ತಿಪಡಿಸುವ ಶಕ್ತಿ ನನ್ನಲ್ಲಿದೆ. ನಾನು ಒಂದಲ್ಲ, 40 ಮಹಿಳೆಯರನ್ನು ಏಕಕಾಲದಲ್ಲಿ ತೃಪ್ತಿಪಡಿಸಬಲ್ಲೆ. ಸೆಕ್ಸ್‌ ಅನ್ನೋದು ನನಗೆ ಬ್ರೇಕ್‌ಫಾಸ್ಟ್‌ ಇದ್ದಂತೆ. ನನಗೆ ಅದು ಪ್ರತಿದಿನವೂ ಬೇಕು. ಹಾಗಾಗಿ ಅದರ ಬಗ್ಗೆ ಆತ ಮಾತನಾಡದೇ ಇರೋದು ಒಳಿತು' ಎಂದು ಹೇಳಿದ್ದಾರೆ.

ಫಿಕ್ಸಿಂಗ್‌ ಎಂದ ಆರ್ಯವರ್ಧನ್‌ಗೆ ಉಗ್ರರೂಪ ತೋರಿದ್ದ ಸುದೀಪ್‌, ಮೋಸ ಮಾಡಿದ ವಿನಯ್‌ ವಿಚಾರದಲ್ಲಿ ಸುಮ್ಮನಾಗಿದ್ದೇಕೆ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!
ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!