
ಹೈದ್ರಾಬಾದ್(ನ.11): ಕಪ್ಪು ಹಣ ತಡೆಗೆ 500 ಮತ್ತು 1000 ರೂ. ನೋಟನ್ನ ರದ್ದು ಮಾಡಿದ ಬೆನ್ನಲ್ಲೇ ಯಟಿ ಅಧಿಕಾರಿಗಳು ಕಾಳಧನಿಕರ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ. ದೇಶದ ಹಲವೆಡೆ ಶ್ರೀಮಂತರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. ಬಾಹುಬಲಿ ನಿರ್ಮಾಪಕರಾದ ಯರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿಗೂ ಐಟಿ ಅಧಿಕಾರಿಗಳಖು ಬಿಸಿ ಮುಟ್ಟಿಸಿದ್ದಾರೆ. ಇಬ್ಬರು ನಿರ್ಮಾಪಕರ ಹೈದ್ರಾಬಾದ್`ನ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ.
ಮುಂಬೈ, ದೆಹಲಿ ಮತ್ತಿತರ ನಗರಗಳಲ್ಲಿ ಕಚೇರಿ ಮತ್ತು ಮನೆಗಳ ಮೇಳೆ ದಾಳಿ ನಡೆದಿದೆ. ದಾಳಿಗೊಳಗಾದ ನಿರ್ಮಾಪಕ ಕಮ್ ಡೈರೆಕ್ಟರ್ ತಮ್ಮಾರೆಡ್ಡಿ ಭಾರದ್ವಾಜ್, ಐಟಿ ಅಧಿಕಾರಿಗಳು ಟೈಂ ಪಾಸ್`ಗೆ ದಾಳಿ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ಧಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.