
ಹೈದರಾಬಾದ್(ಸೆ.25): ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್ ಗೆ ಭಾರತದ ಪರವಾಗಿ ಹಿಂದಿಯ ‘ನ್ಯೂಟನ್’ ಚಿತ್ರ ಆಯ್ಕೆಯಾಗಿದೆ.
ಈ ಹಿನ್ನೆಲೆ ಕೇಂದ್ರದಿಂದ ನ್ಯೂಟನ್ ಚಿತ್ರಕ್ಕೆ 1 ಕೋಟಿಯ ಗ್ರ್ಯಾಂಟ್ ರಿಲೀಸ್ ಆಗಿದ್ದು, ಒಂದು ಅರ್ಥ'ಪೂರ್ಣ ಚಂದದ ಸಿನಿಮಾಗೆ ಇದು ಪ್ರೋತ್ಸಾಹ ಎಂದಿದ್ದಾರೆ. ಆದರೆ ಸೆಲೆಕ್ಷನ್ ಕಮಿಟಿ ಮೇಲೆ ಸಿಟ್ಟಾಗಿರುವ ನಿರ್ದೇಶಕ ರಾಜಮೌಳಿ, ಆಸ್ಕರ್ ಚಿತ್ರಕ್ಕೆ ಬಾಹುಬಲಿಯನ್ನ ಯಾಕೆ ಆಯ್ಕೆ ಮಾಡಿಲ್ಲ ಅಂತಾ ಪ್ರಶ್ನಿಸಿದ್ದಾರೆ.
ಇನ್ನೂ ತಮ್ಮ ನ್ಯೂಟನ್ ಚಿತ್ರ ಆಯ್ಕೆ ಯಾಗಿದ್ದಕ್ಕೆ ಒಂದೆಡೆ ರಾಜಕುಮಾರ್ ರಾವ್ ಸಂತಸ ವ್ಯಕ್ತಪಡಿಸಿ ಸಿನಿಮಾದ ಬಗ್ಗೆ ಮತ್ತಷ್ಟು ಪ್ರೊಮೋಷನ್ ಗೆ ರೆಡಿಯಾಗಿದ್ದಾರೆ. ಆದರೆ ಭಾರತೀಯ ಚಿತ್ರರಂಗದಲ್ಲಿ ಉತ್ತಮ ಚಿತ್ರಗಳನ್ನು ಕೊಟ್ಟಿರುವ ರಾಜಮೌಳಿ ಬೇಸರದಲ್ಲಿದ್ದಾರೆ. ಇದುವರೆವಿಗೂ ಆಸ್ಕರ್ ಪ್ರಶಸ್ತಿಗೆ ಹಿಂದಿಯಲ್ಲಿ 12, ಮರಾಠಿಯಲ್ಲಿ 5, ತೆಲಗು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂನಲ್ಲಿ 2 ಹಾಗೂ ತಮಿಳಿನ ಒಂದು ಸಿನಿಮಾ ಭಾರತದಿಂದ ಆಸ್ಕರ್ ಗೆ ಆಯ್ಕೆಯಾಗಿದ್ದು, ಈ ವರ್ಷ ನ್ಯೂಟನ್ ಹೆಸರು ಪ್ರಕಟವಾಗಿದೆ. ಈ ಸಂಬಂಧ ರಾಜಮೌಳಿ ಎಷ್ಟೇ ಕ್ರಿಯೇಟೀವ್ ಆಗಿ ಚಿತ್ರಿಸಿದ್ದರು ಅವರ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿಲ್ಲ ಅನ್ನೋ ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.