
ಮತ್ತೆ ಬಣ್ಣ ಹಚ್ಚಲಿರುವ ನಟಿ ರಮ್ಯಾ! ಅಯ್ಯೋ ಯಾರ್ ಹೇಳಿದ್ದು! ಇದು ಸುಳ್ಳು ಸುದ್ದಿ. ನಟ ಗಣೇಶ್ ನಾಯಕನಾಗುತ್ತಿರುವ, ನಾಗೇಶ್ ಶೇಖರ್ ನಿರ್ಮಾಣದ, ಮಹೇಂದರ್ ನಿರ್ದೇಶನದ ಚಿತ್ರದಲ್ಲಿ ನಟಿಸುವಂತೆ ನಿಮ್ಮನ್ನು ಕೇಳಿದ್ದಾರಂತೆ? ನನ್ನ ಯಾರೂ ಕೇಳಿಲ್ಲ. ಅದೆಲ್ಲ ಸುಳ್ಳು ಸುದ್ದಿ. ಹಾಗಾದರೆ ಕೇಳಿದ್ರೆ ನಟಿಸುತ್ತೀರಾ? ಅದೆಲ್ಲ ಮುಗಿದು ಹೋದ ಕತೆ. ನನಗಿಂತ ಒಳ್ಳೆಯ ಯಂಗ್ ಟ್ಯಾಲೆಂಟ್‌ಗಳಿದ್ದಾರೆ. ಅವರಿಗೆ ಅವಕಾಶ ಕೊಡಿ. ನಮ್ಮ ಸಿನಿಮಾ ನಂಟು ಆಗಲೇ ಮುಗಿಯಿತು. ಆದ್ರೂ ನಿಮ್ಮ ಅಭಿಮಾನಿಗಳಿಗೋಸ್ಕರ ನಟಿಸಬಹುದಲ್ಲ? ಕ್ಷಮಿಸಿ, ಬೈಬೈ.
- ಸದ್ಯ ರಾಜಕಾರಣದಲ್ಲಿ ಬ್ಯುಸಿಯಾಗಿರುವ ರಮ್ಯಾ ಮತ್ತೆ ಬಣ್ಣ ಹಚ್ಚಿ ನಟಿಸುತ್ತಾರಂತೆ. ಈಗಾಗಲೇ ರಮ್ಯಾ ಅವರನ್ನು ತಮ್ಮ ನಿರ್ಮಾಣದ ಚಿತ್ರಕ್ಕೆ ನಿರ್ದೇಶಕ ನಾಗಶೇಖರ್ ಕೇಳಿದ್ದಾರಂತೆ ಎನ್ನುವ ಸುದ್ದಿಗಳಿಗೆ ಸ್ವತಃ ರಮ್ಯಾ ಅವರೇ ಕೊಟ್ಟಿ ರುವ ಉತ್ತರಗಳಿವು. ಅಲ್ಲಿಗೆ ಗಣೇಶ್ ನಾಯಕನಾಗುತ್ತಿದ್ದಾರೆ ಎಂದು ಹೇಳಲಾಗುತ್ತಿರುವ 'ಮನಸಲ್ಲಿ ಮುಮ್ತಾಜ್’ ಚಿತ್ರದಲ್ಲಿ ನಟಿ ರಮ್ಯಾ ಯಾವುದೇ ಕಾರಣಕ್ಕೂ ನಟಿಸಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ.
ಇನ್ನು ಈ ಚಿತ್ರವನ್ನು ನಾಗಶೇಖರ್ ಅವರು ತಮ್ಮ ಗುರುಗಳಾದ ಮಹೇಂದರ್ ಅವರಿಗೆ ನೆರವಾಗಲು ಈ ಚಿತ್ರ ಮಾಡುತ್ತಿದ್ದಾರಂತೆ. ಹಾಗಂತೆ ಈ ಚಿತ್ರವನ್ನು ನಾಗಶೇಖರ್ ಒಬ್ಬರೇ ನಿರ್ಮಾಣ ಮಾಡುತ್ತಿಲ್ಲ. ನಾಗಶೇಖರ್ ಅವರ ಹೆಸರಿನಲ್ಲಿ ಬೇರೆ ಬೇರೆಯವರು ಹಣ ಹೂಡುತ್ತಿದ್ದು, ನಾಗಶೇಖರ್ ನಿರ್ಮಾಪಕರಾಗಿ ನಿಲ್ಲುತ್ತಿದ್ದಾರೆ. ‘ನನ್ನ ಚಿತ್ರರಂಗಕ್ಕೆ ಕರೆತಂದಿದ್ದು ಮಹೇಂದರ್ ಅವರು. ನಾನು ಈ ಹಂತಕ್ಕೆ ಬೆಳೆಯುವುದಕ್ಕೆ ಅವರೇ ಕಾರಣ. ಹೀಗಾಗಿ ಮಹೇಂದರ್ ಅವರಿಗಾಗಿ ಒಂದು ಸಿನಿಮಾ ಮಾಡುವ ಯೋಚನೆ ಮಾಡಿದ್ದೇನೆ. ನನ್ನ ಯೋಚನೆಗೆ ಗೆಳೆಯರು ಸಾಥ್ ನೀಡಿದ್ದಾರೆ. ನಾನು ನೆಪ ಪಾತ್ರಕ್ಕೆ ಈ ಚಿತ್ರದ ಜತೆಗೆ ಇದ್ದೇನೆ. ಚಿತ್ರಕ್ಕೆ ಗಣೇಶ್ ನಾಯಕನಾದರೆ ಚೆನ್ನಾಗಿರುತ್ತದೆಂಬ ಭರವಸೆ ಇದೆ. ಮನಸಲಿ ಮುಮ್ತಾಜ್ ಎನ್ನುವ ಹೆಸರು ಚಿತ್ರಕ್ಕೆ ಅಂತಿಮವಾಗಿದೆ’ ಎನ್ನುತ್ತಾರೆ ನಾಗಶೇಖರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.