
ಮುಂಬೈ (ಫೆ.24): ಬ್ರಿಟನ್ ರಾಣಿ ಕ್ವೀನ್ ಎಲಿಝಬೆತ್ II ಕಳುಹಿಸಿರುವ ಕಾರ್ಯಕ್ರಮದ ಆಹ್ವಾನವನ್ನು ಅಮಿತಾಬ್ ಬಚ್ಚನ್ ನಯವಾಗಿ ತಿರಸ್ಕರಿಸಿದ್ದಾರೆ.
ಬ್ರಿಟನ್’ನಲ್ಲಿ ನಡೆಯಲಿರುವ ‘ಭಾರತ-ಬ್ರಿಟನ್ ಸಾಂಸ್ಕೃತಿಕ ವರ್ಷ’ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಿಗ್ ಬಿಗೆ ಕ್ವೀನ್ ಎಲಿಝಬೆತ್ ಆಹ್ವಾನ ಕಳುಹಿಸಿದ್ದಾರೆ. ಆದರೆ ಆ ದಿನಗಳಲ್ಲಿ ಬಿಗ್ ಬಿ ಅವರಿಗೆ ಪೂರ್ವನಿರ್ಧರಿತ ಕಾರ್ಯಕ್ರಮಗಳಿಗವೆ. ಆದುದರಿಂದ ಭಾಗವಹಿಸುವುದು ಸಾದ್ಯವಿಲ್ಲವೆಂದು ಬಿಗ್ ಬಿ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ರಾಮ್ ಗೋಪಾಲ್ ವರ್ಮಾ ಅವರ ಸರ್ಕಾರ್-3 ಚಿತ್ರದ ಟ್ರೈಲರ್ ನಇರ್ಮಾಣದಲ್ಲಿ ಬಿಗ್ ಬಿ ಬ್ಯುಸಿಯಾಗಿದ್ದಾರೆಂದು ಹೇಳಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.