
ಬೆಂಗಳೂರು(ಫೆ.27):ಎಂಟಿವಿ ರೋಡೀಸ್ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಅತ್ಯಂತ ಕಷ್ಟಕರ ಟಾಸ್ಕ್‌ಗಳಿಂದ ಕೂಡಿರುವ ಶೋನಲ್ಲಿ, ಟಾಸ್ಕ್ ಮಾಡದಿದ್ದರೆ ಬೈಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕು ಅಂತ ಬಹಳಷ್ಟು ಮಂದಿ ಕನಸು ಕಂಡಿರುತ್ತಾರೆ. ಇದೇ ರೀತಿ ಕನಸು ಕನಸು ಕಂಡಿರುವವರಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ನಾಯಕಿ ಸಂಯುಕ್ತ ಹೆಗ್ಡೆ ಕೂಡ ಒಬ್ಬರು. ಉಳಿದವರೆಲ್ಲರ ಕನಸು ನನಸಾಗುತ್ತದೋ ಇಲ್ವೋ ಗೊತ್ತಿಲ್ಲ. ಆದರೆ ಸಂಯುಕ್ತ ಹೆಗ್ಡೆ ಕನಸು ನನಸಾಗಿದೆ. 2017ರ ಎಂಟಿವಿ ರೋಡೀಸ್ ರಿಯಾಲಿಟಿ ಶೋನ ಅಡೀಷನ್ ರೌಂಡ್'ನಲ್ಲಿ ಭಾಗವಹಿಸಿದ ಸಂಯುಕ್ತಾ ತೀರ್ಪುದಾರರು ನೀಡಿದ ಟಾಸ್ಕ್'ನ್ನು ಪೂರೈಸಿ ಮನ ಗೆದ್ದಿದ್ದಾಳೆ. ಈ ಮೂಲಕ ಪ್ರಖ್ಯಾತ ಶೋಗೆ ಈ ಕನ್ನಡತಿ ಆಯ್ಕೆಯಾಗಿದ್ದಾಳೆ.
ಇನ್ನು ಸಂಯುಕ್ತಾ ರೋಡೀಸ್'ಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಂದಾಗಿನಿಂದಲೂ ಆಕೆಗೆ ನೀಡಿದ ಟಾಸ್ಕ್ ಕುರಿತಾಗಿ ಹಲವರಿಗೆ ಕುರತೂಹಲವಿತ್ತು. ಟಾಸ್ಕ್ ವಿಚಾರ ತಿಳಿದಿದ್ದರೂ ಅದರ ವಿಡಿಯೋ ನೋಡಲು ಜನರು ಕಾತುರದಿಂದ ಕಾಯುತ್ತಿದ್ದರು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು ಈ ಕಿರಿಕ್ ಹುಡುಗಿಯ ಅಡಿಷನ್ ವಿಡಿಯೋ ಸಾಮಾಜಿಕ ಜಾಳಾತಾಣಗಳಲ್ಲಿ ವೈರಲ್ ಆಗಿದೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳದ, ಏನು ಮಾಡುವುದಕ್ಕೂ ರೆಡಿಯಾಗುವ ತರ್ಲೆ ಹುಡುಗಿಯ ಪಾತ್ರವನ್ನು ನಿರ್ವಹಿಸಿದ ಸಂಯುಕ್ತ ಅಡೀಷನ್'ನಲ್ಲೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತೀರ್ಪುದಾರರು ಡ್ಯಾನ್ಸ್ ಮಾಡಲು ಹೇಳಿದಾಗ ಮುಜುಗರಪಡದೆ ಬಿಂದಾಸ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಮುದ್ದಾದ ನಗುವಿರುವ ಈ ಹುಡುಗಿಯ ಬೋಲ್ಡ್ ಕ್ಯಾರೆಕ್ಟರ್ ಕಂಡ ತೀರ್ಪುದಾರರೂ ಫುಲ್ ಖುಷಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.