
ಬೆಂಗಳೂರು (ಡಿ.22): ಇಡೀ ಚಿತ್ರರಂಗ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದೆ ಕೆಜಿಎಫ್. ಚಿತ್ರ ಗೆದ್ದ ಖುಷಿಯಲ್ಲಿದ್ದಾರೆ ಯಶ್. ರಾಕಿ ಭಾಯ್ ರಾಕ್ ಆಗಿದ್ದಾರೆ. ಚಿತ್ರ ನೋಡಿಕೊಂಡು ಬಂದ ಅಭಿಮಾನಿಗಳೆಲ್ಲಾ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕೆಜಿಎಫ್ ಸೃಷ್ಟಿಸಿರುವ ಹವಾ ನೋಡಿದ್ರೆ ಚಿತ್ರ ಗೆದ್ದಂತೆ.
ಇಲ್ಲೊಬ್ಬ ಕಲಾವಿದೆ ರಾಕಿಂಗ್ ಸ್ಟಾರ್ ಯಶ್ ಮೇಲಿನ ಅಭಿಮಾನವನ್ನು ವಿಭಿನ್ನವಾಗಿ ಮೆರೆದಿದ್ದಾರೆ. ತಮ್ಮ ಕಲೆ ಮೂಲಕ ಯಶ್ ಗೆ ಅಭಿನಂದನೆ ಸೂಚಿಸಿದ್ದಾರೆ.
ಸಾಮಾನ್ಯ ಸ್ಕೆಚ್ ಪೆನ್, ಪೆನ್ಸಿಲ್ ನಲ್ಲಿ ಡ್ರಾಯಿಂಗ್ ಮಾಡುವುದನ್ನುನೋಡಿದ್ದೇವೆ. ಈ ಕಲಾವಿದೆ ಸ್ವಲ್ವ ಭಿನ್ನ. ನೆಲದ ಮೇಲೆ ಬಣ್ಣಗಳನ್ನು ಬಳಸಿ ರಾಕಿ ಭಾಯ್ ಚಿತ್ರ ಬಿಡಿಸಿದ್ದಾರೆ. ಈ ಡ್ರಾಯಿಂಗ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಕಲಾವಿದೆ ಹೆಸರು ಮಹೇಶ್ವರಿ. ಬೀದರ್ಮೂಲದವರು ಎಂದು ತಿಳಿದು ಬಂದಿದೆ. ಈಕೆಯ ಕಲೆಗೊಂದು ಸಲಾಂ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.