ನಿತ್ಯಶ್ರೀ ಸಾಂಗ್ ವೈರಲ್.. ಅರ್ಜುನ್ ಜನ್ಯ ಹೃದಯಕ್ಕೂ ನಾಟಿದ ಹೂವಿನ ಬಾಣ..!

Published : Sep 14, 2025, 07:00 PM IST
Arjun Janya Nithyashree

ಸಾರಾಂಶ

"ಹೂವಿನ ಬಾಣದಂತೆ" ಹಾಡಿನ ನಿತ್ಯಶ್ರೀಯ ವಿಚಿತ್ರ ಗಾಯನ ವೈರಲ್ ಆಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೇ ವೇದಿಕೆಯಲ್ಲಿ ತಮ್ಮದೇ ಹಾಡನ್ನು ನಿತ್ಯಶ್ರೀಯಂತೆ ಹಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ "ಅಣುಕು ಗೀತೆ" ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವ್ಯಾಪಕವಾಗಿ ಹರಡುತ್ತಿದೆ. ಮುಂದೆ.. 

ಯಾರಿಗೂ ಕಾಣದಂತೆ..'; ಟ್ರೆಂಡಿಂಗ್

ಸದ್ಯಕ್ಕೆ ಇಡೀ ಕರ್ನಾಟಕದಲ್ಲಿ ಟ್ರೆಂಡಿಂಗ್ ಆಗಿರೋ, ಎಲ್ಲರನ್ನೂ ನಕ್ಕು ನಗಿಸುತ್ತಿರುವ ಸುದ್ದಿ ಅಂದ್ರೆ ಅದು 'ಹೂವಿನ ಬಾಣದಂತೆ.. ಯಾರಿಗೂ ಕಾಣದಂತೆ..'… ಇಷ್ಟು ಹೇಳಿದರೆ ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುತ್ತದೆ. ನಿತ್ಯಶ್ರೀ ಹೆಸರಿನ ಹುಡುಗಿ 15 ವರ್ಷಗಳ ಹಿಂದೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ 'ಬಿರುಗಾಳಿ' ಚಿತ್ರದ ಹಾಡನ್ನು ಇತ್ತೀಚೆಗೆ ವಿಚಿತ್ರವಾಗಿ, ನಗು ಬರುವಂತೆ ಹಾಡಿದ್ದು ಭಾರೀ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ಆ ಹಾಡು ಕರ್ನಾಟಕದ ತುಂಬಾ ಅದೆಷ್ಟು ವೈರಲ್ ಆಗಿದೆ ಎಂದರೆ ಜನರು ಹೇಳಿಕೊಂಡು ಆಡಿಕೊಂಡು ನಗುತ್ತಿದ್ದಾರೆ.

ಅರ್ಜುನ್ ಜನ್ಯಾ ಸಂಗೀತ ಹಾಗೂ ಶ್ರೇಯಾ ಘೋಷಾಲ್ ಸುಮಧುರ ಕಂಠದಲ್ಲಿ ಬಂದಿದ್ದ ‘ಬಿರುಗಾಳಿ’ ಚಿತ್ರದ ಆ ಹಾಡು!

ಹೌದು, ಬಿರುಗಾಳಿ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಹಾಗೂ ಶ್ರೇಯಾ ಘೋಷಾಲ್ ಸುಮಧುರ ಕಂಠದಲ್ಲಿ ಆ ಹಾಡು ಮೂಡಿಬಂದು ಸಾಕಷ್ಟು ಜನಪ್ರಿಯ ಆಗಿತ್ತು. ಆ ಹಾಡನ್ನು ತಮಾಷೆ ಎಂಬಂತೆ, ವಿಚಿತ್ರವಾಗಿ ಹಾಡಿದ್ದ ನಿತ್ಯಶ್ರೀ ಹಾಡು ಸೋಷಿಯಲ್ ಮೀಡಿಯಾ ಮೂಲಕ ಬಹಳಷ್ಟು ವೈರಲ್ ಆಗಿತ್ತು. ಆ ಹಾಡನ್ನು ಇದೀಗ ಸ್ವತಃ ಅರ್ಜುನ್ ಜನ್ಯ ಅವರು ವೇದಿಕೆಯೊಂದರಲ್ಲಿ ಹಾಡಿ ಅಲ್ಲಿದ್ದವರನ್ನು ನಕ್ಕು ನಗಿಸಿದ್ದಾರೆ. ಅರ್ಜುನ್ ಜನ್ಯಾ ಅವರು ನಿತ್ಯಶ್ರೀ ಅವರಂತೆ ತಮಾಷೆಗೆ ಹಾಡಿರುವ ಈ ಹಾಡು ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

ನಿತ್ಯಶ್ರೀ ಮೂಲಕ ಇದೀಗ ವೈರಲ್!

ಸಾರ್ವಜನಿಕ ವೇದಿಕೆಯೊಂದರಲ್ಲಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಆ ಹಾಡನ್ನು ನಿತ್ಯಶ್ರೀ ಅವರಂತೆ ಹಾಡಿ ಸಾಕಷ್ಟು ರಂಜಿಸಿದ್ದಾರೆ. ಆ ಹುಡುಗಿ ಅಷ್ಟು ಇಂಪಾದ ಹಾಡನ್ನು ಅದ್ಯಾವ ರೀತಿ ತಮಾಷೆ ಎಂಬಂತೆ ಹಾಡಿದ್ದಾರೆ ಎಂದರೆ ಅದನ್ನು ಕೇಳಿದ ಯಾರಿಗೇ ಆದರೂ ನಗು ತಡೆಯಲು ಅಸಾಧ್ಯ ಎನ್ನಬಹುದು. ಈಗಂತೂ ಶಾರ್ಟ್ಸ್‌, ರೀಲ್ಸ್ ಜಮಾನಾ ಆಗಿರುವುದರಿಂದ, ಆ ಹಾಡು ಸಾಕಷ್ಟು ಶೇರ್ ಆಗುತ್ತಿದೆ. ಆ ಮೂಲಕ ಎಲ್ಲೆಡೆ ನಗು ಕೂಡ ಹರಡುತ್ತಿದೆ.

ನಿತ್ಯಶ್ರೀ ಹಾಡಿರುವ ಹಾಡಿನಂತೆ ಇದೀಗ ಅರ್ಜುನ್ ಜನ್ಯ ಅವರು ಹಾಡಿರುವ ಈ 'ಅಣುಕು ಗೀತೆ' ಎನ್ನಬಹುದಾದ ಸಾಂಗ್ ಕೂಡ ವೈರಲ್ ಆಗುತ್ತಿದೆ. ಆ ಹಾಡಿನ ಮೂಲ ಸೃಷ್ಟಿಕರ್ತ ಇದೀಗ ನಿತ್ಯಶ್ರೀ ಅವರಂತೆ ಆ ಹಾಡನ್ನು ವೇದಿಕೆಯಲ್ಲಿ ಮರುಸೃಷ್ಟಿ ಮಾಡಿ ತಾವೂ ನಕ್ಕು ಅಲ್ಲಿದ್ದವರನ್ನು ನಕ್ಕುನಗಿಸುವಂತೆ ಮಾಡಿದ್ದಾರೆ.'ಹೂವಿನ ಬಾಣದಂತೆ.. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?