Chennai: ಎಆರ್ ರೆಹಮಾನ್ ಮಗ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಆಸ್ಪತ್ರೆಗೆ ದಾಖಲು, ಪೊಲೀಸರ ತನಿಖೆ ಶುರು

Published : Aug 10, 2026, 05:41 PM IST
AR Rahmans Son

ಸಾರಾಂಶ

ಬೆಳಗ್ಗೆ 3:30ರ ಸಮಯದಲ್ಲಿ ಸ್ನೇಹಿತನೊಂದಿಗೆ ಎಆರ್ ಅಮೀನ್ ಪ್ರಯಾಣಿಸುತ್ತಿದ್ದ ಕಾರಿಗೆ, ಎದುರಿನ ಲೈನ್ನಿಂದ ಬಂದ ಕ್ಯಾಬ್ ಡಿಕ್ಕಿ ಹೊಡೆದಿದ್ದು, ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಎರಡು ಕಾರುಗಳನ್ನು ಸೀಜ್ ಮಾಡಿದ್ದಾರೆ.

ಚೆನ್ನೈ: ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮಗ, ಪ್ಲೇಬ್ಯಾಕ್ ಸಿಂಗರ್ ಎಆರ್ ಅಮೀನ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚೆನ್ನೈನ ಗಿಂಡಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಅಮೀನ್ ಜೊತೆಗಿದ್ದ ಸ್ನೇಹಿತರ ಕೂಡ ಗಾಯಗೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಒಲಂಪಿಯಾ ಟೆಕ್ ಪಾರ್ಕ ಸಿಗ್ನಲ್ ಬಳಿ ಅಪಘಾತ ಸಂಭವಿಸಿದ್ದು, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ಗಂಭೀರ ಗಾಯಗಳು ಆಗದ ಹಿನ್ನೆಲೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿ ಇಬ್ಬರನ್ನು ಕೆಲ ಘಟನೆಗಳಲ್ಲೇ ಮನೆಗೆ ಕಳುಹಿಸಲಾಗಿದೆ. ಸದ್ಯ ಘಟನೆ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಳಗ್ಗೆ 3:30ರ ಸಮಯದಲ್ಲಿ ಕಾರು ಅಪಘಾತ

ನ್ಯೂಸ್18 ವರದಿಯ ಅನ್ವಯ, ಅಮೀನ್ ಬೆಳಗ್ಗೆ 3:30ರ ಸಮಯದಲ್ಲಿ ಸ್ನೇಹಿತನೊಂದಿಗೆ ಗಿಂಡಿ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಇಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರಿನ ಲೈನ್‌ನಿಂದ ಬಂದ ಕ್ಯಾಬ್ ಒಲಂಪಿಯಾ ಟೆಕ್ ಪಾರ್ಕ್ ಬಳಿಯ ಸಿಗ್ನಲ್ ನಲ್ಲಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಎರಡು ಕಾರುಗಳು ಜಖಂ ಆಗಿದ್ದು, ಅಮೀನ್ ಹಾಗೂ ಆತನ ಸ್ನೇಹಿತನಿಗೆ ಯಾವುದೇ ಗಂಭೀರ ಗಾಯಗಳು ಆಗಿರಲಿಲ್ಲ. ಮುಂಜಾನೆ ಘಟನೆ ನಡೆದಿರುವುದರಿಂದ ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆ ಬಳಿಕ ಇಬ್ಬರನ್ನು ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇನ್ನು ಕ್ಯಾಬ್‌ನಲ್ಲಿದ್ದ ಪ್ರಯಾಣಿಕರ ಕೂಡ ಘಟನೆಯಲ್ಲಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಕಲೈನಾರ್ ಸೆಂಟೆನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಿದ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ. ಅಡ್ಯಾರ್ ಟ್ರಾಫಿಕ್ ಪೊಲೀಸರ ತಂಡದ ಪ್ರಕರಣದ ತನಿಖೆ ನಡೆಸುತ್ತಿದ್ದು, ಎರಡು ಕಾರುಗಳನ್ನು ಸೀಜ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ.

ಅಮೀರ್ ಯಾರು? 

ಎಆರ್ ಅಮೀರ್ ಹಿನ್ನೆಲೆ ಗಾಯಕರಾಗಿ ಕುಟುಂಬದ ಮ್ಯೂಸಿಕ್ ಪರಂಪರೆಯನ್ನು ಮುಂದುವರೆಸುತ್ತಿದ್ದು, ಇತ್ತೀಚೆಗೆ ನಟ ರಾಮ್ ಚರಣ್ ಅವರ ಪೆದ್ದಿ ಸಿನಿಮಾದ ತಮಿಳು ಭಾಷೆಯ 'ಚಿಕಿರಿ ಚಿಕಿರಿ' ಹಾಡಿಗೆ ಧ್ವನಿ ನೀಡಿದ್ದರು. ಇನ್ನು ಹಲವು ಇಂಡಿಪೆಂಡೆಂಟ್ ಟ್ರ್ಯಾಕ್ ಗಳಿಗೂ ಅಮೀರ್ ಧ್ವನಿ ನೀಡಿದ್ದಾರೆ. ಎಆರ್ ರೆಹಮಾನ್ ಅವರು ಸದ್ಯ 'ಗಾಂಧಿ ಟಾಕ್ಸ್', 'ಮೈನ ವಾಪಸ್ ಆವುಂಗಾ' ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದು, ರಾಮಾಯಣ ಹಾಗೂ ಮೂನ್ ವಾಕ್, ಬಟ್ವಾರಾ 1947 ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಳೆ ಬಂದರೆ ಇನ್ಮುಂದೆ ಭಯವಾಗುತ್ತೆ: ನೆಟ್‌ಫ್ಲಿಕ್ಸ್‌ನ ಈ ಸಿನಿಮಾ ನೋಡಿದ್ರೆ ಹನಿಹನಿಯೂ ಚುಚ್ಚಿದಂತಾಗುತ್ತೆ!
ಕಿಯಾರಾ ಬಗ್ಗೆ ಯಶ್ ಹೇಳಿರೋ 'ಈ ಮಾತನ್ನು' ಇಡೀ ಜಗತ್ತು ಗಮನಿಸಿದೆ.. 'ಗೂಡಾರ್ಥ' ನಿಮಗೆ ಅರ್ಥವಾಯ್ತಾ?