
ಅಣ್ಣಯ್ಯ ಎಂದ್ರೆ ಸದ್ಯ ಸೀರಿಯಲ್ ಪ್ರೇಮಿಗಳ ಗಮನ ಹರಿಯುವುದು ಜೀ ಕನ್ನಡದ ಸೀರಿಯಲ್ ಮೇಲೆ. ಮಾಕಾಳಮ್ಮನ ಪರಮ ಭಕ್ತ ಈ ಅಣ್ಣಯ್ಯ. ತನ್ನ ನಾಲ್ವರು ತಂಗಿಯರು ಈತನಿಗೆ ಪಂಚ ಪ್ರಾಣ. ನೋವು ನುಂಗಿ ನಗು ಹಂಚುವ ಕ್ಯಾರೆಕ್ಟರ್ ಇವನದ್ದು. ಅದೇ ಇನ್ನೊಂದೆಡೆ, ವಿಷಕಾರೋ ವೀರಭದ್ರನ ಮನೆತನ. ವೀರಭದ್ರನ ಮೊದಲನೇ ಹೆಂಡತಿ ಸೌಭಾಗ್ಯಳ ಮಗಳೇ ಪಾರ್ವತಿ ಉರ್ಫ್ ಪಾರು. ವೃತ್ತಿಯಲ್ಲಿ ವೈದ್ಯೆ. ಅಣ್ಣಯ್ಯನ ಬಾಲ್ಯದ ಲವ್ ಈಕೆ. ಆದರೆ ಶಿಕ್ಷಣವೇ ಎಲ್ಲ ಅಂತಿರೋ ಪಾರ್ವತಿ, ಅದ್ಯಾವುದೋ ಘಳಿಗೆಯಲ್ಲಿ ಶಿವುನ ಮದುವೆಯಾಗ ಬೇಕಾಗಿ ಬರುತ್ತದೆ. ಆದರೆ ಅವಳು ಲವ್ ಮಾಡ್ತಿರೋದೇ ಬೇರೆಯವನನ್ನು. ಕೊನೆಗೆ ಅವನು ಮೋಸಗಾರ ಎಂದು ತಿಳಿಯುತ್ತದೆ. ಕೊನೆಗೆ ಪಾರುಗೆ ಶಿವು ಮೇಲೆ ಲವ್ ಶುರುವಾಗಿದ್ದು, ಇದೀಗ ಅವರಿಬ್ಬರೂ ಚೆನ್ನಾಗಿದ್ದಾರೆ. ಅದೇ ಇನ್ನೊಂದೆಡೆ, ಅಣ್ಣಯ್ಯನ ಪ್ರತಿ ಹೆಜ್ಜೆಗೂ ಕಾವಲಾಗಿ ನಿಂತಿದ್ದಾಳೆ.
ಇಂತಿಪ್ಪ ಶಿವು ಮತ್ತು ಪಾರು ಡಾ.ರಾಜ್ಕುಮಾರ್ ಅವರ ಜೀವ ಹೂವಾಗಿದೆ ಹಾಡಿಗೆ ಸಕತ್ ರೀಲ್ಸ್ ಮಾಡಿದ್ದಾರೆ. ಶಿವು ಪಾತ್ರದಲ್ಲಿ ನಟ ವಿಕಾಶ್ ಉತ್ತಯ್ಯ ಹಾಗೂ ಪಾರು ಪಾತ್ರದಲ್ಲಿ ನಟಿ ನಿಶಾ ರವಿಕೃಷ್ಣನ್ ನಟಿಸುತ್ತಿದ್ದಾರೆ. ನಟ ವಿಕಾಶ್ ಉತ್ತಯ್ಯ ಅವರ ಕುರಿತು ಹೇಳುವುದಾದರೆ, ಸದ್ಯ ಇವರು, ಅಪಾಯವಿದೆ ಎಚ್ಚರಿಕೆ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಇದೇ 28ರಂದು ಚಿತ್ರ ಬಿಡುಗಡೆಯಾಗಲಿದೆ. ಇನ್ನು ಮೂಲತಃ ಕೊಡಗಿನವರಾಗಿರುವ ವಿಕಾಶ್ ಉತ್ತಯ್ಯ ಅವರು ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ನಟರಾಗಿದ್ದಾರೆ. ವಿಕಾಶ್ ಉತ್ತಯ್ಯ ಅವರು ಸೀರಿಯಲ್ ಗೆ ಬರುವ ಮುನ್ನ ಕೆಲ ಸಿನಿಮಾಗಳಲ್ಲಿ ಅಭಿನಯಿದ್ದಾರೆ. ಈ ಹಿಂದೆ ಮೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಇವರು, ಇತ್ತೀಚೆಗೆ 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ.
ಕೊಡಗಿನವರಾಗಿರುವ ವಿಕಾಶ್, ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಬಣ್ಣದ ಲೋಕ ಆರಿಸಿಕೊಂಡಿದ್ದಾರೆ. ಇದಾಗಲೇ ಕೆಲವು ಸೀರಿಯಲ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೇರಿ ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು. 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರುವ ಇವರು, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ. ಅಪಾಯವಿದೆ ಎಚ್ಚರಿಕೆಯಲ್ಲಿ ವಿಕಾಶ್ ಜೊತೆಯಾಗಿ ಅಮೃತಧಾರೆಯ ಮಲ್ಲಿ ಅಂದ್ರೆ ನಟಿ ರಾಧಾ ಭಾಗವತಿ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಮಂಜುನಾಥ್ ವಿ ಜಿ ಹಾಗೂ ಪೂರ್ಣಿಮಾ ಗೌಡ ಅವರು ಹಣ ಹೂಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ಈ ಚಿತ್ರಕ್ಕಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ.
ಇನ್ನು ನಟಿ ನಿಶಾ ರವಿಕೃಷ್ಣನ್ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಇವರಿನ್ನೂ ಸಿಂಗಲ್. ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಸೀರಿಯಲ್ಗಳಲ್ಲಿ ಎಂಟು ಮದ್ವೆಯಾಗಿದೆ. ಅವುಗಳಲ್ಲಿ ಆಡಂಬರದ ಮದುವೆಗಳೇ ಜಾಸ್ತಿ ಇದ್ದವು. ಆದರೆ ರಿಯಲ್ ಲೈಫ್ನಲ್ಲಿ ಸಿಂಪಲ್ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ ನಿಶಾ. ಚಟಪಟ ಎಂದು ಕನ್ನಡ ಮಾತನಾಡುವ ನಿಶಾ ರವಿಕೃಷ್ಣನ್ ಅವರು ಮೂಲತಃ ಮಲಯಾಳಿ. ಆದರೆ ಮಿಂಚುತ್ತಿರುವುದು ಕನ್ನಡ ಮತ್ತು ತೆಲಗು ಬಣ್ಣದ ಲೋಕದಲ್ಲಿ. ನಿಶಾ ಮಿಲನ್ ಎಂದು ಕೂಡ ಫೇಮಸ್ ಆಗಿದ್ದಾರೆ ನಟಿ. 2018ರಲ್ಲಿ ಸ್ಟಾರ್ ಸುವರ್ಣದಲ್ಲಿ ತೆರೆ ಕಂಡ ‘ಸರ್ವಮಂಗಲ ಮಾಂಗಲ್ಯೆ’ ಸೀರಿಯಲ್ ಮೂಲಕ ಕನ್ನಡಕ್ಕೆ ಪರಿಚಿತರಾದರು. 2019ರಲ್ಲಿ ಅವರಿಗೆ ‘ಗಟ್ಟಿಮೇಳ’ ಸೀರಿಯಲ್ನ ಅಮೂಲ್ಯ ಪಾತ್ರ ಅವರಿಗೆ ಬ್ರೇಕ್ ಕೊಟ್ಟಿತು. ರೌಡಿ ಬೇಬಿ ಎಂದೇ ಈಗಲೂ ಎಲ್ಲರೂ ಅವರನ್ನು ಕರೆಯುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.