Anniah Serial: ನೆಚ್ಚಿನ ನಟ-ನಟಿ ಹೆಸ್ರು ಹೇಳಲು ಪರದಾಡಿದ 'ಅಣ್ಣಯ್ಯ' ಪಾರು! ಟ್ರೋಲರ್ಸ್​ ಕೇಳ್ಬೇಕಾ?

Published : Jul 05, 2025, 09:53 PM IST
Nisha Ravikrishnan

ಸಾರಾಂಶ

ಗಟ್ಟಿಮೇಳದ ರೌಡಿ ಬೇಬಿ ಇದೀಗ ಅಣ್ಣಯ್ಯ ಸೀರಿಯಲ್​ ಪಾರು ಆಗಿ ಸಕತ್​ ಮನರಂಜನೆ ನೀಡುತ್ತಿದ್ದಾರೆ. ಆದರೆ ನೆಚ್ಚಿನ ನಟ-ನಟಿಯರ ಹೆಸರು ಹೇಳಿ ಎಂದಾಗ ಪರದಾಡಿ ಟ್ರೋಲ್​ಗೆ ಒಳಗಾಗಿದ್ದಾರೆ. ಆಗಿದ್ದೇನು ನೋಡಿ! 

ಗಟ್ಟಿಮೇಳದ ರೌಡಿ ಬೇಬಿ ಇದೀಗ ಅಣ್ಣಯ್ಯ ಸೀರಿಯಲ್​ ಪಾರು ಆಗಿ ಸಕತ್​ ಮನರಂಜನೆ ನೀಡುತ್ತಿದ್ದಾರೆ. ಇವರ ಸಹಜ ಅಭಿನಯಕ್ಕೆ ಅಸಂಖ್ಯ ಅಭಿಮಾನಿಗಳು ಫಿದಾ ಆಗಿದ್ದಾರೆ. ತನ್ನ ಲವರ್​ ಜೊತೆ ಸೇರಿಸಲು ಅಣ್ಣಯ್ಯ ಒಪ್ಪಿಕೊಂಡಿದ್ದರಿಂದ ಅನಿವಾರ್ಯ ಸನ್ನಿವೇಶದಲ್ಲಿ ಪಾರು ಅಣ್ಣಯ್ಯ ಅಂದ್ರೆ ಶಿವುನ್ನ ಮದ್ವೆಯಾಗಿದ್ದಾಳೆ. ಆದರೆ ಆ ಲವರ್​ ತನಗೆ ಮೋಸ ಮಾಡಿದ್ದು ಪಾರುಗೆ ಗೊತ್ತಾಗಿದೆ. ಆಸ್ತಿ ವಿವಾದದಲ್ಲಿ ಇದೀಗ ಪತಿಯ ರಕ್ಷಣೆ ನಿಂತ ಪಾರು ಜನರಿಂದ ಭೇಷ್​ ಭೇಷ್​ ಎನ್ನಿಸಿಕೊಳ್ಳುತ್ತಿದ್ದಾಳೆ. ಇಂತಿಪ್ಪ ಪಾರು ರಿಯಲ್​ ಹೆಸರು ನಿಶಾ ರವಿಕೃಷ್ಣನ್​.

 

ಇದೀಗ ನಿಶಾ ಅವರು ಬಾಸ್​​ ಟಿವಿಗೆ ಸಂದರ್ಶನ ಕೊಟ್ಟಿದ್ದು, ಅದರಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ ನೆಚ್ಚಿನ ನಟ-ನಟಿಯರ ಹೆಸರು ಹೇಳಿ ಅಂದಾಗ ಯಾಕೋ ನಟಿ ಪರದಾಡಿಬಿಟ್ಟಿದ್ದಾರೆ. ನನಗೆ ತುಂಬಾ ಜನ ಇಷ್ಟ ಇದ್ದಾರೆ. ಯಾರ ಹೆಸರು ಹೇಳುವುದೆಂದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಇಲ್ಲ ನೀವು ಯಾರದ್ದಾದರೂ ಹೆಸರು ಹೇಳಲೇಬೇಕು ಎಂದಾಗ, ಸಡನ್​ ಆಗಿ ಅವರಿಗೆ ಯಾರ ಹೆಸರೂ ಹೊಳೆದಂತೆ ಇಲ್ಲ. ನಟರು ಅಣ್ಣಾವ್ರು, ಪುನೀತ್​, ವಿಷ್ಣು ಸರ್​ ಎಂದು ತುಂಬಾ ನೆನಪು ಮಾಡಿಕೊಂಡು ಹೇಳಿದರಾದರೂ ನಟಿಯರ ಹೆಸರು ನೆನಪಿಗೆ ಬರದೇ ಒದ್ದಾಡಿದರು. ತುಂಬಾ ಜನ ಇದ್ದಾರೆ ಎನ್ನುತ್ತಿದ್ದರೇ ವಿನಾ ಹೆಸರು ನೆನಪಿಗೆ ಬರಲಿಲ್ಲ. ಅಷ್ಟಕ್ಕೂ ಕೆಲವೊಮ್ಮೆ ತುಂಬಾ ಜನರು ಅಚ್ಚುಮೆಚ್ಚು ಆದರೆ ಹೀಗೆಯೇ ನೆನಪಿಗೆ ಬಾರದೇ ಇರಬಹುದು. ಆದರೆ ನಟಿಯ ವರ್ತನೆ ಮಾತ್ರ ಸಾಕಷ್ಟು ಟ್ರೋಲ್​ಗೆ ಒಳಗಾಗಿದೆ.

ಇಂಥದ್ದೇನ್ನೇ ಕಾಯುತ್ತಿರುವ ಟ್ರೋಲಿಗರು, ತುಂಬಾ ಜನ ತುಂಬಾ ಜನ ಎಂದು ಹೇಳುತ್ತಿದ್ದಾರೆಯೇ ವಿನಾ ಒಬ್ಬರ ಹೆಸರೂ ನೆನಪಿಗೆ ಬರ್ತಿಲ್ಲ ಎಂದು ತಮಾಷೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಿಶಾ ರವಿಕೃಷ್ಣನ್​ ಅವರನ್ನೂ ಟ್ರೋಲಿಗರು ಬಿಟ್ಟಿಲ್ಲ. ಇನ್ನು ನಿಶಾ ರವಿಕೃಷ್ಣನ್​ ಕುರಿತು ಹೇಳುವುದಾದರೆ, ಗಟ್ಟಿಮೇಳದಲ್ಲಿ ರೌಡಿ ಬೇಬಿಯಾಗಿ ಕಾಣಿಸಿಕೊಂಡಿದ್ದರು. ಇವರಿನ್ನೂ ಸಿಂಗಲ್​. ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಸೀರಿಯಲ್​ಗಳಲ್ಲಿ ಎಂಟು ಮದ್ವೆಯಾಗಿದೆ. ಅವುಗಳಲ್ಲಿ ಆಡಂಬರದ ಮದುವೆಗಳೇ ಜಾಸ್ತಿ ಇದ್ದವು. ಆದರೆ ರಿಯಲ್​ ಲೈಫ್​ನಲ್ಲಿ ಸಿಂಪಲ್​ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ ನಿಶಾ.

ಚಟಪಟ ಎಂದು ಕನ್ನಡ ಮಾತನಾಡುವ ನಿಶಾ ರವಿಕೃಷ್ಣನ್ ಅವರು ಮೂಲತಃ ಮಲಯಾಳಿ. ಆದರೆ ಮಿಂಚುತ್ತಿರುವುದು ಕನ್ನಡ ಮತ್ತು ತೆಲಗು ಬಣ್ಣದ ಲೋಕದಲ್ಲಿ. ನಿಶಾ ಮಿಲನ್ ಎಂದು ಕೂಡ ಫೇಮಸ್​ ಆಗಿದ್ದಾರೆ ನಟಿ. 2018ರಲ್ಲಿ ಸ್ಟಾರ್ ಸುವರ್ಣದಲ್ಲಿ ತೆರೆ ಕಂಡ ‘ಸರ್ವಮಂಗಲ ಮಾಂಗಲ್ಯೆ’ ಸೀರಿಯಲ್​ ಮೂಲಕ ಕನ್ನಡಕ್ಕೆ ಪರಿಚಿತರಾದರು. 2019ರಲ್ಲಿ ಅವರಿಗೆ ‘ಗಟ್ಟಿಮೇಳ’ ಸೀರಿಯಲ್​ನ ಅಮೂಲ್ಯ ಪಾತ್ರ ಅವರಿಗೆ ಬ್ರೇಕ್​ ಕೊಟ್ಟಿತು. ರೌಡಿ ಬೇಬಿ ಎಂದೇ ಈಗಲೂ ಎಲ್ಲರೂ ಅವರನ್ನು ಕರೆಯುತ್ತಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡದ 'ತ್ರಿಮೂರ್ತಿ'ಗಳ ಸಂಗಮಕ್ಕೆ ಸಾಕ್ಷಿಯಾಗಲಿದ್ದಾರೆ ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್
ನಾನು ಹೋಗ್ತಿದೀನಿ, ಇಲ್ಲಿಗೆ ಮತ್ತೆ ಬರೋಕಾಗಲ್ಲ-Bigg Boss ಶೋನಿಂದ ರಕ್ಷಿತಾ ಶೆಟ್ಟಿ, ಧ್ರುವಂತ್‌ ಔಟ್!; ಅಧಿಕೃತ