
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಹೆಚ್ಚಿನ ಖ್ಯಾತಿ, ಅಭಿಮಾನಿಗಳನ್ನು ಗಳಿಸಿಕೊಟ್ಟ 'ಪವಿತ್ರ ರಿಶ್ತ' ಧಾರಾವಾಹಿಯ ಎರಡನೇ ಭಾಗ ಸೆಟ್ಟೇರಲಿದೆ. ಸುಶಾಂತ್ ಗೆಳತಿ ಅಂಕಿತಾ ಅವರೇ ಎರಡನೇ ಸೀರಿಯಲ್ ತಯಾರಿಸಬೇಕೆಂದು ಬಯಸಿದ್ದಾರೆ.
ನಟಿ ಅಂಕಿತಾ ಲೋಖಂಡೆ ನಿರ್ಮಾಪಕಿ ಏಕ್ತಾ ಕಪೂರ್ ಅವರ ಜೊತೆ ಈ ಬಗ್ಗೆ ಮಾತನಾಡಿದ್ದು, ಸುಶಾಂತ್‌ಗೆ ಟ್ರಿಬ್ಯೂಟ್ ರೂಪದಲ್ಲಿ ಪವಿತ್ರ ರಿಶ್ತ 2 ನಿರ್ಮಿಸಬೇಕು ಎಂದು ಕೇಳಿಕೊಡಿದ್ದಾರೆ. ಹಿಂದಿ ಸೀರಿಯಲ್ ಲೋಕದಲ್ಲಿ ಅಪಾರ ವೀಕ್ಷಕರನ್ನು ಹೊಂದಿದ್ದ ಪವಿತ್ರ ರಿಶ್ತ ಧಾರವಾಹಿಯಲ್ಲಿ ಸುಶಾಂತ್ ಹಾಗೂ ಅಂಕಿತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ದೀಪವು ನಿನ್ನದೆ..ಗಾಳಿಯೂ ನಿನ್ನದೆ.. ಸುಶಾಂತ್ ಸಾವಿನ ನಂತರ ಅಂಕಿತಾ ಮೊದಲ ಪೋಸ್ಟ್
ಪವಿತ್ರ ರಿಶ್ತ ಧಾರಾವಹಿ ಸುಶಾಂತ್‌ಗೆ ಅಪಾರ ಜನಮನ್ನಣೆ ಗಳಿಸಿಕೊಟ್ಟಿತ್ತು. ಹಾಗೆಯೇ ಧಾರಾವಾಹಿ ಸುಶಾಂತ್‌ಗೆ ಅತ್ಯಂತ ಪ್ರಿಯವಾಗಿತ್ತು. ಹಾಗಾಗಿ ಇದೇ ಧಾರವಾಹಿಯ ಎರಡನೇ ಭಾಗ ಮಾಡುವುದು ನಟನಿಗೆ ನೀಡಬಹುದಾದ ಉತ್ತಮ ಗೌರವವಾಗಿರಲಿದೆ ಎಂದಿದ್ದಾರೆ.
ಈ ಐಡಿಯಾ ಏಕ್ತಾ ಅವರಿಗೂ ಇಷ್ಟವಾಗಿದ್ದು, ಈ ನಿಟ್ಟಿನಲ್ಲಿ ಸ್ಕ್ರಿಪ್ಟ್ ರೈಂಟಿಂಗ್ ಕೆಲಸವೂ ಶೀಘ್ರ ನಡೆಯಲಿದೆ. ಪವಿತ್ರ ರಿಶ್ತ ಏಕ್ತಾ ಅವರಿಗೂ ನೆಚ್ಚಿನ ಸೀರಿಯಲ್ ಆಗಿದ್ದು, ಇದನ್ನು ಎರಡನೇ ಭಾಗಕ್ಕೆ ಹೇಗೆ ಮುಂದುವರಿಸಬಹುದೆಂದು ಅವರ ಈಗಾಗಲೇ ಚರ್ಚಿಸಿದ್ದಾರೆ.
ಪ್ರಧಾನಿ ಭೇಟಿ ಮಾಡಿದ ಸೆಲೆಬ್ರಿಟಿ ತಂಡದಲ್ಲಿ ಸುಶಾಂತ್‌ನನ್ನು ಬಿಟ್ಟಿದ್ದೇಕೆ? ಸಂಸದೆ ಪ್ರಶ್ನೆ
ಕಸೂಟಿ ಝಿಂದಗೀಕೀ, ನಾಗಿನ್, ಹಮ್ ಪಾಂಚ್‌ನಂತಹ ಹಿಟ್ ಧಾರಾವಾಹಿ ನೀಡಿದ ಏಕ್ತಾ ಕಪೂರ್ ಪವಿತ್ರ ರಿಶ್ತಾವನ್ನು ನಿರ್ಮಿಸಲಿದ್ದಾರೆ. ನಟ ಸುಶಾಂತ್ ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. 2016ರಲ್ಲಿ ಬ್ರೇಕ್‌ಅಪ್ ಆಗುವವರೆಗೂ ಅಂಕಿತಾ ಹಾಗೂ ಸುಶಾಂತ್ ರಿಲೇಷನ್‌ಶಿಪ್‌ನಲ್ಲಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.