
ಯಾಕೋ ಎನೋ ಗೊತ್ತಿಲ್ಲ, ಬಿಗ್‌ಬಾಸ್ ಸೀಸನ್-6 ಸ್ಪರ್ಧಿಗಳು ಒಂದಾದ ನಂತರ ಮತ್ತೊಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಒಬ್ಬರು ಮತ್ತೊಬ್ಬರ ಮೇಲೆ ಕಿರುಕುಳ ನೀಡಿದ್ದಾಗಿ ದೂರು ನೀಡಿದರೆ, ಮತ್ತೊಬ್ಬ ಸ್ಪರ್ಧಿಯನ್ನು ಪ್ರಸಿದ್ಧ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿಯೇ ಅವಮಾನಿಸಲಾಗಿದೆ.
ಬಿಗ್ ಬಾಸ್-6: ಡ್ರ್ಯಾಗ್ ಕ್ವೀನ್ ಆದಂ ಪಾಶಾ ಮನದಾಳದ ಮಾತು
ಕೆಲವು ದಿನಗಳ ಹಿಂದೆ ಕಿರುತೆರೆ ನಟಿ ಕವಿತಾ ಗೌಡ ತನ್ನ ಸಹಸ್ಪರ್ಧಿ ಆ್ಯಂಡ್ರೂ ಮೇಲೆ ಮಾನಸಿಕ ಕಿರುಕುಳ ನೀಡಿದ್ದಾಗಿ ಮಹಿಳಾ ಆಯೋಗದಲ್ಲಿ ದೂರು ನೀಡಿದ್ದಾರೆ. ಈಗ ಕಿರುತೆರೆ ಖ್ಯಾತ ನಿರೂಪಕ ಅಕುಲ್ ಬಾಲಾಜಿ ತಮ್ಮನ್ನು ಅವಮಾನಿಸಿದ್ದಾಗಿ, ಆದಮ್ ಪಾಶಾ ಆರೋಪಿಸಿದ್ದಾರೆ.
ಎಲ್ಲರಿಗೂ ತಿಳಿದಿರುವ ಹಾಗೆ ಆದಮ್ ಪಾಶಾ LGBT ಕಮ್ಯೂನಿಟಿಗೆ ಸೇರಿದವರು. ಅದನ್ನು ತಿಳಿದಿದ್ದರೂ ಆದಮ್ ಡ್ಯಾನ್ಸ್ ಮಾಡಿದ ನಂತರ ವೇದಿಕೆ ಮೇಲೆಯೇ ನಿರೂಪಕ ಅಕುಲ್ ಆದಮ್ ಉಡುಗೆ ಬಗ್ಗೆ ಅಸಭ್ಯವಾಗಿ ಪ್ರಶ್ನಿಸಿದ್ದಾರೆ, ಎನ್ನಲಾಗಿದೆ.
ಅಕುಲ್ ಮಾತ್ರವಲ್ಲದೇ ಕಾರ್ಯಕ್ರಮದ ನಿರ್ದೇಶಕಿ ಶ್ರದ್ಧಾ ಅವರ ಮೇಲೂ ಆರೋಪಿಸಿದ್ದಾರೆ ಆದಮ್. ಕ್ಷಮೆಯಾಚಿಸಿದರೂ ತಮ್ಮ ನಿರ್ಧಾರ ಬದಲಿಸುವುದಿಲ್ಲವೆಂದು ಶೋನಿಂದ ಹೊರ ನಡೆದಿದ್ದಾಗಿ ಹೇಳಿದ್ದಾರೆ ಆದಮ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.