
ಕಿರುತೆರೆಯ ಪಾಪ್ಯುಲರ್ ಧಾರವಾಹಿ 'ಅಗ್ನಿಸಾಕ್ಷಿ' ಹೀರೋ ಸಿದ್ದಾರ್ಥ್ ಗುಳಿಕೆನ್ನೆಗೆ, ಬ್ಯೂಟಿ ಹಾಗೂ ಬಾಡಿ ಲ್ಯಾಂಗ್ವೇಜ್‌ಗೆ ಮರುಳಾಗದವರೇ ಇಲ್ಲ. ಮಡದಿ ಮೇಲೆ ಆತ ತೋರುವ ಪ್ರೀತಿ, ಕಾಳಜಿಯಿಂದ ಎಲ್ಲ ಯುವತಿಯರೂ ಇಂಥವನೇ ತನ್ನ ಗಂಡನಾಗಬೇಕೆಂದು ಕನಸು ಕಂಡಿದ್ದಾರೆ. ಇಂಥ ಲವ್‌ಬಾಯ್ ಪ್ರೇಮಿಗಳ ದಿನದಂದೇ ಹಲವು ಹೆಂಗಳೆಯರ ಹಾರ್ಟ್ ಬ್ರೇಕ್ ಮಾಡಿದ್ದಾರೆ. ಆಗಿದ್ದೇನು?
ಸನ್ನಿಧಿ ಅಲಿಯಾಸ್ ವೈಷ್ಣವಿ ಹಾಗೂ ವಿಜಯ್ ಸೂರ್ಯ ಕಾಂಬಿನೇಷನ್ ತೆರೆ ಮೇಲೆ ಸೂಪರ್ ಮೋಡಿ ಮಾಡಿತ್ತು. ಆ ಕಾರಣದಿಂದ ಈ ಇಬ್ಬರೇ ನಿಜ ಜೀವನದಲ್ಲಿಯೂ ಜೋಡಿಯಾಗುತ್ತಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಅಲ್ಲದೇ ಅನೇಕ ಸಂದರ್ಭಗಳಲ್ಲಿಯೂ ಪರೋಕ್ಷವಾಗಿ ಈ ಬಗ್ಗೆ ಸೂರ್ಯ ಸುಳಿವು ಕೊಟ್ಟಿದ್ದರು. ಆದರೆ, ಎಲ್ಲವಕ್ಕೂ ಇದೀಗ ಅವರೇ ಮುಕ್ತಿ ಹಾಡಿದ್ದು, ತಮ್ಮ ದೂರದ ಸಂಬಂಧಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಗುರು, ಹಿರಿಯರು ನೋಡಿದ ಚೈತ್ರಾಳಿಗೇ ಮೂರು ಗಂಟು ಹಾಕಿದ್ದಾರೆ. ಆ ಮೂಲಕ ಸೂರ್ಯನ ಬಾಳಲ್ಲಿ ಚೈತ್ರಾಳ ಪ್ರವೇಶವಾಗಿದೆ. ಬಂಧು, ಮಿತ್ರರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದ್ದು, ಆಪ್ತರು ಬಂದು ಹರಸಿದ್ದಾರೆ.
23 ವರ್ಷದ ಚೖೈತ್ರಾ ಐಟಿ ಉದ್ಯೂಗಿ. ಇವರಿಬ್ಬರ ಕುಟುಂಬದವರು 9 ವರ್ಷದಿಂದಲೂ ಪರಿಚಿತರಾಗಿದ್ದರೂ, ಸೂರ್ಯ ಮತ್ತು ಚೈತ್ರಾ ಭೇಟಿ ಆಗಿದ್ದು ಕಡಿಮೆಯೇ. ಅದಕ್ಕೆ ವಿಶೇಷವಾದ ಪ್ರೇಮಿಗಳ ದಿನದಂದು, ಒಳ್ಳೆಯ ಮಹೂರ್ತವೂ ಇದ್ದಿದ್ದರಿಂದ ಸಪ್ತಪದಿ ತುಳಿದಿದ್ದಾರೆ.
ಪ್ರೇಮಿಗಳ ದಿನದಂದೇ ದಾಂಪತ್ಯಕ್ಕೆ ಕಾಲಿಟ್ಟ 'ಅಗ್ನಿಸಾಕ್ಷಿ'ಯ ಸಿದ್ಧಾರ್ಥ!
'ಇಷ್ಟಕಾಮ್ಯ' ಚಿತ್ರದಲ್ಲಿ ಲವ್‌ಬಾಯ್ ಆಗಿ ಕಾಣಿಸಿಕೊಂಡ ವಿಜಯ್ ಅವರು ಮತ್ತೊಂದು ಚಿತ್ರ 'ಕದ್ದುಮುಚ್ಚಿ' ಬಿಡುಗಡೆಗೆ ಸಿದ್ಧವಾಗಿದೆ. ‘Marriage is a life long journey that thrives on love, commitment, trust, respect, communication, patience and companionship’ ಎನ್ನುತ್ತಾರೆ. ಸೂರ್ಯನ ದಾಂಪತ್ಯ ಜೀವನದಲ್ಲಿ ಎಲ್ಲವೂ ಸಹಿಯಾಗಿಯೇ ಇರಲಿ. ಅವರು ಮತ್ತಷ್ಟು ಯಶಸ್ಸಿನ ಉತ್ತುಂಗಕ್ಕೇರಲಿ. ಕಿರುತೆರೆಯಲ್ಲಿ ಸನ್ನಿಧಿಗೆ ಪ್ರೀತಿಯ, ಗೌರವ ತೋರುವ ಪತಿಯಾದಂತೆ, ಚೈತ್ರಾಳ ಬಾಳೂ ಬೆಳಗುವಂತಾಗಲಿ ಎಂದು ಹಾರೈಸೋಣವೇ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.