
ಅಮೃತಧಾರೆ (Amruthadhaare) ಸೀರಿಯಲ್ ಮುಗಿಯುತ್ತಿದ್ದಂತೆಯೇ, ವೀಕ್ಷಕರು ಸಿಕ್ಕಾಪಟ್ಟೆ ಬೇಸರದಿಂದ ಇದ್ದಾರೆ. ಈ ಸೀರಿಯಲ್ ಮುಗಿದಿರುವುದು ಹಲವರಿಗೆ ನೋವು ತಂದಿದೆ. ಅದೇ ಇನ್ನೊಂದೆಡೆ ಅಮೃತಧಾರೆ ಪಾರ್ಟ್-2 ಮೂಲಕ ಮತ್ತೆ ನಿಮ್ಮೊಂದಿಗೆ ಬರುತ್ತೇವೆ ಎಂದು ವಾಹಿನಿ ಹೇಳಿದ್ದು, ಇದು ವೀಕ್ಷಕರಿಗೆ ಖುಷಿ ಕೊಟ್ಟಿದೆ. ಅಷ್ಟಕ್ಕೂ ಈ ಸೀರಿಯಲ್ನಲ್ಲಿ ತುಂಬಾ ಹೈಲೈಟ್ ಆಗಿರುವುದು ನಾಯಕ-ನಾಯಕಿಯಾಗಿ ನಟಿಸಿರುವ ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಅವರ ನಟನೆ. ನಟನೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುವ ಟ್ಯಾಲೆಂಟ್ ಇವರದ್ದು. ಅದೇ ರೀತಿ ಹ್ಯಾಂಡ್ಸಮ್ ವಿಲನ್ ರಾಣವ್ ಗೌಡ ಸೇರಿದಂತೆ ಪ್ರತಿಯೊಬ್ಬರೂ ಈ ಸೀರಿಯಲ್ನಲ್ಲಿ ಅದ್ಭುತ ನಟನೆ ಮಾಡಿ ವೀಕ್ಷಕರನ್ನು ಮೋಡಿ ಮಾಡಿದ್ದಾರೆ. ಅಮೃತಧಾರೆ ಮುಗಿಯುತ್ತಲೇ ಇವರನ್ನು ಮತ್ತೆ ಯಾವ ಸೀರಿಯಲ್ನಲ್ಲಿ ನೋಡಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದರ ನಡುವೆಯೇ, ಭೂಮಿಕಾ ಅರ್ಥಾತ್ ನಟಿ ಛಾಯಾ ಸಿಂಗ್ ಅವರು ನಿರ್ದೇಶನದಲ್ಲಿ ಸಿಕ್ಕಾಪಟ್ಟೆ ಆಸೆ ಹೊಂದಿದ್ದು, ನಟನೆ ಬಿಟ್ಟು ನೇರವಾಗಿ ನಿರ್ದೇಶನಕ್ಕೇ ಇಳಿದುಬಿಡ್ತಾರಾ ಎನ್ನುವ ಮಾತೊಂದು ಈಚೆಗೆ ಕೇಳಿಬಂದಿತ್ತು. ಅದಕ್ಕೆ ಕಾರಣ, ಅವರು ಈವೆಂಟ್ ಒಂದರಲ್ಲಿ ನಟ ಉಪೇಂದ್ರ ಅವರ ಬಳಿ, ಅವರ ಸಿನಿಮಾಕ್ಕೆ ತಮ್ಮನ್ನು ಸಹ ನಿರ್ದೇಶಕರನ್ನಾಗಿ ಮಾಡಿಕೊಳ್ಳಬೇಕು ಎಂದು ಸಿಕ್ಕಾಪಟ್ಟೆ ಕಾಡಿಬೇಡಿದ್ದರು. ಅದರ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಜೀ ಕುಟುಂಬ ಅವಾರ್ಡ್ಸ್ನಲ್ಲಿ ಬೆಸ್ಟ್ ನಟಿ ಅವಾರ್ಡ್ ಪಡೆದುಕೊಂಡಿದ್ದ ನಟಿ ಛಾಯಾ ಸಿಂಗ್, ಈ ವೇಳೆ ಅವಾರ್ಡ್ ನೀಡಲು ಬಂದಿದ್ದ ನಟರಾದ ಉಪೇಂದ್ರ ಹಾಗೂ ಶಿವರಾಜ್ಕುಮಾರ್ ಅವರ ಬಳಿ ಮನವಿ ಮಾಡಿಕೊಂಡಿದ್ದರು.
ನಟಿ ಛಾಯಾ ಸಿಂಗ್ ಅವರ ಬಹಳ ವರ್ಷಗಳ ಕನಸು ಎಂದರೆ ಉಪೇಂದ್ರ ಅಥವಾ ಶಿವರಾಜ್ ಕುಮಾರ್ ಅವರ ನಿರ್ದೇಶನದ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುವುದು. ಕಾರ್ಯಕ್ರಮಕ್ಕೆ ಹಾಜರು ಇದ್ದ ಶಿವರಾಜ್ ಕುಮಾರ್ ಅವರನ್ನು ಉದ್ದೇಶಿಸಿ ನಟಿ, ಶಿವಣ್ಣ ಅವರಿಗೆ ಯಾವತ್ತೂ ಹೇಳ್ತೇನೆ, ಡೈರೆಕ್ಷನ್ ಮಾಡಿ ಅಂತ ಎಂದಿದ್ದಾರೆ. ಇದೇ ವೇಳೆ ಉಪೇಂದ್ರ ಅವರನ್ನು ಉದ್ದೇಶಿಸಿ, ನಿಮ್ಮ ಡೈರೆಕ್ಷನ್ನಲ್ಲಿ ನನಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಪ್ಲೀಸ್ ತಗೊಳ್ಳಿ. ನಿಮ್ಮಿಂದ ಕಲಿಯೋದು ತುಂಬಾ ಇದೆ ಎಂದಿದ್ದಾರೆ. ಇವರಿಬ್ಬರೂ ಸಿನಿಮಾದ ವಿಶ್ವವಿದ್ಯಾಲಯವಿದ್ದಂತೆ. ಆದರೆ ಅಂದು ಇದೇ ಕೋರಿಕೆ ಇಟ್ಟಾಗ ಪ್ರಿಯಾಂಕಾ ಮೇಡಂ ಬೇಡ ಅಂದುಬಿಟ್ರು. ಅವರನ್ನು ಭೇಟಿಯಾದಾಗ ಕ್ಷಮೆ ಕೇಳ್ತೀನಿ. ಆದರೆ ಮತ್ತೊಮ್ಮೆ ನಿಮ್ಮನ್ನು ರಿಕ್ವೆಸ್ಟ್ ಮಾಡಿಕೊಳ್ತಿದ್ದೇನೆ. ನೀವು ಡೈರೆಕ್ಷನ್ ಮಾಡಿದಾಗ ನನ್ನನ್ನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕರೀರಿ ಸರ್ ಪ್ಲೀಸ್. ಲಾಸ್ಟ್ ಅಸಿಸ್ಟೆಂಟ್ ಡೈರೆಕ್ಟರ್ ಆದ್ರೂ ಪರವಾಗಿಲ್ಲ ಸರ್ ಎಂದು ಮನವಿ ಮಾಡಿಕೊಂಡಿದ್ದಾರೆ ನಟಿ ಛಾಯಾ ಸಿಂಗ್.
ಅದಕ್ಕೆ ನಕ್ಕ ಉಪೇಂದ್ರ ಅವರು, ಇವರು ಅಸಿಸ್ಟೆಂಟ್ ಆದ್ರೆ ಹೀರೋಯಿನ್ ಏನ್ ಮಾಡೋದು ಎಂದು ತಮಾಷೆ ಮಾಡಿದ್ದಾರೆ. ಕೊನೆಯಲ್ಲಿ ನಟಿಯ ಕೋರಿಕೆಯನ್ನು ಈಡೇರಿಸುವ ಭರವಸೆ ಕೊಟ್ಟಿದ್ದಾರೆ. ಅದರಿಂದ ನಟಿ ಫುಲ್ ಖುಷ್ ಆಗಿದ್ದಾರೆ. ಇದೀಗ ಅಮೃತಧಾರೆ ಸೀರಿಯಲ್ ಮುಗಿದಿರುವ ಹಿನ್ನೆಲೆಯಲ್ಲಿ, ನಟ ಉಪೇಂದ್ರ ಅವರ ನಿರ್ದೇಶನ ಸಿನಿಮಾಕ್ಕೆ ಸಹ ನಿರ್ದೇಶಕಿಯಾಗುವ ಛಾನ್ಸ್ ನಟಿ ಛಾಯಾ ಸಿಂಗ್ ಅವರಿಗೆ ಸಿಗತ್ತಾ ನೋಡಬೇಕಿದೆ. ನಿರ್ದೇಶಕಿಯಾಗಿ ಅವರ ಕನಸು ನನಸು ಮಾಡಿಕೊಂಡರೂ, ನಟಿಯಾಗಿ ಮಾತ್ರ ಮುಂದುವರೆಯಿರಿ ಪ್ಲೀಸ್ ಎನ್ನುವುದು ಅವರ ಫ್ಯಾನ್ಸ್ ಹಾರೈಕೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.