ಚೆಲುವಿನ ಚಿತ್ತಾರ ಚೆಲುವೆಯ ಮದುವೆ ಸಂಭ್ರಮ: ಇಂದು ಗಣೇಶ್ ಮನೆಯಲ್ಲಿ ಅಮ್ಮು ಮೆಹಂದಿ ಶಾಸ್ತ್ರ

Published : May 10, 2017, 02:10 AM ISTUpdated : Apr 11, 2018, 12:47 PM IST
ಚೆಲುವಿನ ಚಿತ್ತಾರ ಚೆಲುವೆಯ ಮದುವೆ ಸಂಭ್ರಮ: ಇಂದು ಗಣೇಶ್ ಮನೆಯಲ್ಲಿ ಅಮ್ಮು ಮೆಹಂದಿ ಶಾಸ್ತ್ರ

ಸಾರಾಂಶ

ಚೆಲುವಿನ ಚಿತ್ತಾರದ ಐಶೂ ಅಮೂಲ್ಯ ಕಲ್ಯಾಣ ತಯಾರಿ ಜೋರಾಗಿದೆ. ಅಮೂಲ್ಯ ಹಾಗು ಜಗದೀಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಅಮೂಲ್ಯ ಮೆಹಂದಿ ಕಾರ್ಯಕ್ರಮಕ್ಕೆ  ಗೋಲ್ಡನ್ ಸ್ಟಾರ್ ಗಣೇಶ್ ಅವರ ರಾಜರಾಜೇಶ್ವರಿನಗರದ ಮನೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮನೆಗೆ ಕಾಲಿಡುತ್ತಿದ್ದಂತೆ ಮೆಹಂದಿ ಕಾರ್ಯಕ್ರಮದ ಮಂಟಪ ಗಮನ ಸೆಳೆಯುತ್ತದೆ. ಮೆಹಂದಿ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ನಟಿಮಣಿರು ಭಾಗವಹಿಸಲಿದ್ದಾರೆ.  ಬರುವ ಎಲ್ಲಾ ಅತಿಥಿಗಳಿಗೆ ವಿಶೇಷ ಭೋಜನ ಹಾಗು ಚಾಟ್ಸ್  ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು(ಮ.10): ಚೆಲುವಿನ ಚಿತ್ತಾರದ ಐಶೂ ಅಮೂಲ್ಯ ಕಲ್ಯಾಣ ತಯಾರಿ ಜೋರಾಗಿದೆ. ಅಮೂಲ್ಯ ಹಾಗು ಜಗದೀಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಅಮೂಲ್ಯ ಮೆಹಂದಿ ಕಾರ್ಯಕ್ರಮಕ್ಕೆ  ಗೋಲ್ಡನ್ ಸ್ಟಾರ್ ಗಣೇಶ್ ಅವರ ರಾಜರಾಜೇಶ್ವರಿನಗರದ ಮನೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮನೆಗೆ ಕಾಲಿಡುತ್ತಿದ್ದಂತೆ ಮೆಹಂದಿ ಕಾರ್ಯಕ್ರಮದ ಮಂಟಪ ಗಮನ ಸೆಳೆಯುತ್ತದೆ. ಮೆಹಂದಿ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ನಟಿಮಣಿರು ಭಾಗವಹಿಸಲಿದ್ದಾರೆ.  ಬರುವ ಎಲ್ಲಾ ಅತಿಥಿಗಳಿಗೆ ವಿಶೇಷ ಭೋಜನ ಹಾಗು ಚಾಟ್ಸ್  ವ್ಯವಸ್ಥೆ ಮಾಡಲಾಗಿದೆ.

ಇನ್ನು ವರ ಜಗದೀಶ್ ಮನೆಯಲ್ಲೂ ಸಡಗರ ಕಳೆ ಕಟ್ಟಿದೆ. ಗಂಡಿನ ಮನೆಯಲ್ಲಿ  ಚಪ್ಪರ ಶಾಸ್ತ್ರ ಮುಗಿದಿದೆ. 12ರಂದು ಅಂದರೆ ಶುಕ್ರವಾರ ಆದಿಚುಂಚನಗಿರಿಯಲ್ಲಿ  ನಡೆಯುವ ಮದುವೆ ಶಾಸ್ತ್ರಗಳನ್ನ ಲಕ್ಷ್ಮೀಕಾಂತ್ ಭಟ್ ಶಾಸ್ತ್ರಿ ನಡೆಸಿಕೊಡಲಿದ್ದಾರೆ..

ಗಣೇಶ್ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ಮುಗಿದ ಬಳಿಕ ಸಂಜೆ, ಗಣೇಶ್ ಮನೆಯಲ್ಲಿ ಸಂಗೀತ ಸಂಜೆ ಹಮ್ಮಿಕೊಳ್ಳಲಾಗಿದೆ. ಇದರ ವಿಶೇಷತೆಎಂದರೆ ಪಂಜಾಬಿ ಶೈಲಿಯ ಡೋಲು ಕುಣಿತಕ್ಕೆ ಅಮೂಲ್ಯ ಹಾಗು ಜಗದೀಶ್ ಮಸ್ತ್ ಡ್ಯಾನ್ಸ್ ಮಾಡಲಿದ್ದಾರೆ. ಒಟ್ಟಿನಲ್ಲಿ ಅಮೂಲ್ಯ ಕಲ್ಯಾಣ ಕನ್ನಡ ಚಿತ್ರರಂಗದ ಅದ್ದೂರಿತನಕ್ಕೆ ಸಾಕ್ಷಿಯಾಗಲಿದೆ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹಿಂದೂ ಹೆಸರಿನ ಮೂಲಕವೇ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಮುಸ್ಲಿಂ ನಟರು
ಚೈತ್ರಾ ಕುಂದಾಪುರ 2ನೇ ಬಾರಿ ಬಿಗ್ ಬಾಸ್ ಮನೆಗೆ ಬಂದ್ರೂ ಚೀಪ್ ಮೆಂಟಾಲಿಟಿ ಆಟ ಬಿಡ್ಲಿಲ್ಲ!