
ಅಮೃತಧಾರೆ ಸೀರಿಯಲ್ (Amruthadhaare Serial) ಮುಗಿದು ಕೆಲ ದಿನ ಆಗಿದ್ದು, ಅಭಿಮಾನಿಗಳು ಅದರ ಗುಂಗಿನಿಂದ ಇನ್ನೂ ಹೊರಕ್ಕೆ ಬಂದಿಲ್ಲ. ಇದಾಗಲೇ ಸೀರಿಯಲ್ ನಟ-ನಟಿಯರು ಸೀರಿಯಲ್ ಪಯಣದ ಕುರಿತು ಮಾತನಾಡಿದ್ದಾರೆ. ಗೌತಮ್ ರೋಲ್ ಮಾಡಿದ್ದ ನಟ ರಾಜೇಶ್ ನಟರಂಗ ಅವರೂ ಲೈವ್ಗೆ ಬಂದು ಮಾತನಾಡಿದ್ದರು. ಆದರೆ ಎಲ್ಲರೂ ಮೆಚ್ಚಿಕೊಂಡ ಭೂಮಿಕಾ ಅರ್ಥಾತ್ ನಟಿ ಛಾಯಾ ಸಿಂಗ್ ಲೈವ್ಗೆ ಬಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರಲಿಲ್ಲ. ಶೂಟಿಂಗ್ ಸೆಟ್ನಲ್ಲಿ ಕೊನೆಯ ದಿನ ಅವರು ಮಾತನಾಡಿದ್ದರೇ ವಿನಾ ಪ್ರತ್ಯೇಕವಾಗಿ ಬಂದು ಮಾತನಾಡಲಿಲ್ಲ ಎಂದು ಹಲವರು ಕಮೆಂಟ್ ಬಾಕ್ಸ್ನಲ್ಲಿ ಹೇಳುತ್ತಿದ್ದರು. ಅವರ ಆಸೆ ಇದೀಗ ಈಡೇರಿದೆ.
ನಟಿ ಛಾಯಾ ಸಿಂಗ್ (Chaya Singh) ಲೈವ್ಗೆ ಬಂದು ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಅಮೃತಧಾರೆ ಸೀರಿಯಲ್ನಲ್ಲಿ ಭೂಮಿಕಾಗೆ ತೋರಿರುವ ಪ್ರೀತಿಯ ಬಗ್ಗೆ ಅವರು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅದೇ ರೀತಿ, ಸೀರಿಯಲ್ನ ಟೆಕ್ನಿಕಲ್ ಟೀಮ್ನಿಂದ ಹಿಡಿದು ತೆರೆ ಮರೆಯಲ್ಲಿ ಶ್ರಮಿಸಿರುವ ತಂಡ ಹಾಗೂ ತಮ್ಮ ಜೊತೆ ನಟಿಸಿರುವ ನಟ-ನಟಿಯರಿಗೂ ಧನ್ಯವಾದ ಸಲ್ಲಿಸಿದ್ದಾರೆ. ವೀಕ್ಷಕರು ಇಲ್ಲದಿದ್ದರೆ ನಾನು ಇಷ್ಟು ದೊಡ್ಡ ಮಟ್ಟಿಗೆ ಹೆಸರು ಮಾಡಲು ಆಗ್ತಿರಲಿಲ್ಲ. ನಿಮ್ಮೆಲ್ಲರ ಪ್ರೀತಿಗೆ ಚಿರಋಣಿ ಎಂದಿದ್ದಾರೆ ನಟಿ ಛಾಯಾ ಸಿಂಗ್.
ಇದರ ನಡುವೆಯೇ, ಅಮೃತಧಾರೆ ಪಾರ್ಟ್-2 (Amruthadhaare Part-2)ಬರಬೇಕು ಎನ್ನುವುದು ವೀಕ್ಷಕರ ಆಸೆ. ಅದೇ ರೀತಿ ಹಲವರು ಇದೇ ಕಮೆಂಟ್ ಮಾಡುತ್ತಿರುವ ನಡುವೆಯೇ, ಸೀರಿಯಲ್ನ ಪಾರ್ಟ್-2 ಬರಲಿದೆ ಎಂದು ವಾಹಿನಿಯೇ ಕೆಲ ದಿನಗಳ ಹಿಂದೆ ಶೇರ್ ಮಾಡಿತ್ತು. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇನ್ನು ನಟಿ ಕುರಿತು ಹೇಳುವುದಾದರೆ, ಸ್ಯಾಂಡಲ್ವುಡ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಛಾಯಾ ಸಿಂಗ್ ಚಿರಪರಿಚಿತರು. 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇವರು ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ ರಾಷ್ಟ್ರಗೀತೆ, ಚಿಟ್ಟೆ, ಗುಟ್ಟು ಸಿನಿಮಾಗಳಲ್ಲಿ ನಟಿಸಿದರು. ನಂತರ ಅನಿರುದ್ಧ್ ನಟನೆಯ 'ತುಂಟಾಟ' ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ತುಂಟಾಟ ಸಿನಿಮಾ ಬಳಿಕ ಕಾಲಿವುಡ್‌ಗೆ ಎಂಟ್ರಿಕೊಟ್ಟ ಛಾಯಾ, ಧನುಷ್ ಜೊತೆ 'ತಿರುಡಾ ತಿರುಡಿ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ನಂತರ ಮಲಯಾಳಂ ಸಿನಿರಂಗಕ್ಕೂ ಕಾಲಿಟ್ಟರು. ಹೀಗೆ ನಟನೆಯಲ್ಲಿ ಮುಂದುವರೆದ ಛಾಯಾ ಸಿಂಗ್, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಂಗಾಳಿ ಭಾಷೆಯಲ್ಲಿ 'ಕಿ ಕೋರ್ ಬೋಝಭೋ ತೊಮಾಕೆ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಛಾಯಾ ಕೇವಲ ನಟಿಯಷ್ಟೇ ಅಲ್ಲ, ಅದ್ಭುತ ಡ್ಯಾನ್ಸರ್ ಕೂಡ ಆಗಿದ್ದಾರೆ. ಅವರ ನೃತ್ಯಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.