
ಅಮೃತಧಾರೆ ಸೀರಿಯಲ್ (Amruthadhaare Serial) ಇನ್ನೇನು ಮುಗಿಯುವ ಹಂತದಲ್ಲಿದೆ. ಇನ್ನು ಕೆಲವೇ ಕೆಲವು ಎಪಿಸೋಡ್ಗಳು ಇವೆಯಷ್ಟೇ. ಇದಾಗಲೇ ಶೂಟಿಂಗ್ ಕೂಡ ಮುಗಿದಿದ್ದು, ಸೀರಿಯಲ್ ಕೂಡ ಫೈನಲ್ ಹಂತ ತಲುಪಿದೆ. ಜೈದೇವನ ಎಲ್ಲಾ ಕ್ರಿಮಿನಲ್ಸ್ಗೆ ಮಲ್ಲಿಗೆ ಸಾಕ್ಷ್ಯಾಧಾರ ಸಿಕ್ಕಾಗಿದೆ. ಶಕುಂತಲಾಳ ಅಸಲಿ ಬಣ್ಣ ಕೂಡ ಗೌತಮ್ಗೆ ಗೊತ್ತಾಗಿದ್ದು, ಅಮ್ಮ-ಮಗನಿಗೆ ಜೈಲೂಟ ಫಿಕ್ಸ್ ಆಗಿದೆ. ಅಂತಿಮ ಸಂಚಿಕೆಗಳು ಎಂದು ಇದಾಗಲೇ ಜೀ ವಾಹಿನಿ ಪ್ರೊಮೋ ಕೂಡ ಹಂಚಿಕೊಂಡಿದೆ. ಆದರೆ ಇದರಲ್ಲಿ ಇಬ್ಬರು ಲೀಡ್ ರೋಲ್ಗಳು ಅರ್ಥಾತ್ ಮುಖ್ಯ ಪಾತ್ರಧಾರಿಗಳೇ ಮಾಯವಾಗಿದ್ದಾರೆ!
ಹೌದು. ಕಳೆದ ಕೆಲವು ಎಪಿಸೋಡ್ಗಳಿಂದ ಗೌತಮ್ನ ಜಿಗರಿ ದೋಸ್ತ್, ಇದ್ದರೆ ಇರಬೇಕು ಇಂಥ ಗೆಳೆಯ ಎಂದುಕೊಂಡ ಆನಂದ್ (ಅವರ ಅಸಲಿ ಹೆಸರೂ ಆನಂದ್) ನಾಪತ್ತೆಯಾಗಿದ್ದು, ಗೌತಮ್ ಮಗ ಆಕಾಶ್ ಪಾತ್ರದಲ್ಲಿ ರೋಲ್ ಮಾಡ್ತಿದ್ದ ಆನಂದ್ ಅವರ ಅಸಲಿ ಮಗ ದುಷ್ಯಂತ್ ಚಕ್ರವರ್ತಿ ಮಾಯವಾಗಿದ್ದಾರೆ. ಮಗಳು ಮಿಂಚು ಮಾತ್ರ ಆಗೀಗ ಕಾಣಿಸಿಕೊಳ್ಳುತ್ತಿದ್ದಾಳೆ. ಅಂತಿಮ ಸಂಚಿಕೆಯಲ್ಲಿಯೂ ಇವರಿಬ್ಬರೂ ಕಾಣಿಸುತ್ತಿಲ್ಲ. ಅಂತಿಮ ಅಧ್ಯಾಯ ಎಂದು ವಾಹಿನಿ ಶೇರ್ ಮಾಡಿಕೊಂಡಿರುವ ಪ್ರೊಮೋದಲ್ಲಿಯೂ ಇವರಿಬ್ಬರೂ ಇಲ್ಲ. ಹಾಗಿದ್ದರೆ ನಿಜಕ್ಕೂ ಏನಾಯ್ತು, ಈ ಲೀಡ್ ರೋಲ್ ಇಲ್ಲದೇ ಸೀರಿಯಲ್ಮುಗಿಸಿದ್ದು ಏಕೆ ಎನ್ನುವ ಪ್ರಶ್ನೆ ನೆಟ್ಟಿಗರನ್ನು ಕಾಡುತ್ತಿದೆ.
ಅಷ್ಟಕ್ಕೂ ಗೌತಮ್ ಮತ್ತು ಆನಂದ್ ಗೆಳೆತನ ಸೀರಿಯಲ್ನಲ್ಲಿ ಮೊದಲಿನಿಂದಲೂ ಹೈಲೈಟ್ ಆಗಿತ್ತು. ಇವರಿಬ್ಬರ ಸ್ನೇಹದಂತೆ ಎಲ್ಲರ ಸ್ನೇಹ ಇರಲಿ, ಇಂಥ ಸ್ನೇಹಿತರು ಸಿಕ್ಕರೆ ಬದುಕೇ ಬಂಗಾರ ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೆ ಕಳೆದ ಹಲವು ಎಪಿಸೋಡ್ಗಳಲ್ಲಿ ಆನಂದ್ ಪತ್ನಿಯ ಕ್ಯಾರೆಕ್ಟರ್ ಕಾಣಿಸುತ್ತಿದೆಯೇ ವಿನಾ ಆನಂದ್ ನಾಪತ್ತೆಯಾಗಿದ್ದು, ಇತ್ತ ಆಕಾಶ್ ಕೂಡ ಕಾಣಿಸುತ್ತಿಲ್ಲ.
ಇವರಿಬ್ಬರಿಗೆ ಏನು ಸಮಸ್ಯೆ ಆಗಿದೆ,, ಸೀರಿಯಲ್ ಬಿಟ್ಟದ್ದು ಏಕೆ? ವಾಹಿನಿ ಜೊತೆ ಸಮಸ್ಯೆ ಆಗಿದ್ಯಾ, ಸೀರಿಯಲ್ ಜೊತೆ ಸಮಸ್ಯೆ ಆಗಿದ್ಯಾ ಅಥವಾ ಇಬ್ಬರೂ ಲಾಂಗ್ ಟೂರ್ ಹೋಗಿದ್ದಾರಾ ಎಂಬಿತ್ಯಾದಿಯಾಗಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಈ ಸೀರಿಯಲ್ನಲ್ಲಿ ಕೆಲವೇ ಕೆಲವು ಪಾತ್ರಗಳು ಚೇಂಜ್ ಆಗಿದ್ದು ಬಿಟ್ಟರೆ, ಸಾಮಾನ್ಯವಾಗಿ ಇತರ ಸೀರಿಯಲ್ಗಳಲ್ಲಿ ಆಗುವಂತೆ ಮುಖ್ಯ ರೋಲ್ಗಳನ್ನು ಚೇಂಜ್ ಮಾಡಿಲ್ಲ. ಇದು ಎಲ್ಲರಿಗೂ ಇಷ್ಟವಾಗಿದೆ. ಆದರೆ ಗೌತಮ್ ಮತ್ತು ಭೂಮಿಕಾ ಬದುಕಲ್ಲಿ ಬಹುದೊಡ್ಡ ಪಾತ್ರವಹಿಸಿದ್ದ ಆನಂದ್ ರೋಲ್ ಕೊನೆಯಲ್ಲಿ ಕಾಣಿಸದೇ ಇರುವುದು ವೀಕ್ಷಕರಿಗೆ ನಿರಾಸೆ ಮೂಡಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.