
ಶ್ರೀರಸ್ತು ಶುಭಮಸ್ತು (Shreerastu Shubhamastu Serial)ನಲ್ಲಿ ತುಳಸಿ ಸೊಸೆಯಾಗಿ ನಟಿಸಿದ್ದ ಪೂರ್ಣಿ ಅರ್ಥಾತ್ ನಟಿ ಲಾವಣ್ಯ ಭಾರದ್ವಾಜ್ ಅವರು ಇಂದು ಅಮ್ಮ ಆಗಿದ್ದಾರೆ. ಅಮೃತಧಾರೆಯಲ್ಲಿ ಜೀವ ಪಾತ್ರಧಾರಿಯಾಗಿದ್ದ ಶಶಿ ಹೆಗಡೆ ಅವರು ಅಪ್ಪ ಆಗುವ ಮೂಲಕ ಈ ತಾರಾ ಜೋಡಿ ಸಂತಸದ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಇಲ್ಲಿ ಯುವ ಪೋಷಕರು ಬರುತ್ತಿದ್ದಾರೆ ಎಂದು ಕ್ಯಾಪ್ಷನ್ ಕೊಟ್ಟಿರುವ ಜೋಡಿ, ಒಟ್ಟಿಗೆ ಇರುವ ಫೋಟೋ ಜೊತೆ ಮಗುವಿನ ಮುಖವನ್ನು ಮುಚ್ಚಿ ಕಂದನ ಜೊತೆ ಫೋಟೋ ಶೇರ್ ಮಾಡಿಕೊಂಡಿದೆ. ಆದರೆ ಯಾವ ಗಂಡೋ, ಹೆಣ್ಣೊ ಎನ್ನುವ ಬಗ್ಗೆ ರಿವೀಲ್ ಮಾಡಲಿಲ್ಲ.
ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ.
ಲಾವಣ್ಯ ಅವರು, ಕನ್ನಡದ ಜೊತೆಗೆ ತೆಲುಗಿನ ಸ್ಟಾರ್ ಮಾ (Star Maa) ವಾಹಿನಿಯ 'ಇಲ್ಲು ಇಲ್ಲಾಲು ಪಿಲ್ಲಲು' (Illu Illalu Pillalu) ಧಾರಾವಾಹಿಯಲ್ಲಿ 'ಪ್ರೇಮಾ' ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿ ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾರೆ. ವಿವಾಹವಾದ ನಾಲ್ಕು ವರ್ಷಗಳ ನಂತರ ಈ ದಂಪತಿಗೆ ಮೊದಲ ಮಗು ಹುಟ್ಟಿದ್ದು, ಇತ್ತೀಚೆಗಷ್ಟೇ ಕುಟುಂಬಸ್ಥರು ಮತ್ತು ಕಿರುತೆರೆ ತಾರೆಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದನ್ನು ಅವರು ಪೋಸ್ಟ್ ಮಾಡಿದ್ದರು.
ಮದುವೆಯಾಗಿ ವರ್ಷದ ಬಳಿಕ ಈ ಜೋಡಿ ಈಚೆಗೆ ಮನಾಲಿಗೆ ಹೋಗಿ ಪ್ರವಾಸ ಮಾಡಿದ್ದು, ಇದು ನಮ್ಮ ಹನಿಮೂನ್ ಎಂದು ತಮಾಷೆ ಮಾಡಿದ್ದರು. ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ತಂದೆ, ಲಾವಣ್ಯ ಹುಟ್ಟಿದ ಬಗ್ಗೆ ತಿಳಿಸಿದ್ದರು. ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.