ಅಯ್ಯೋ.. ಈಕೆ ನಯನತಾರಾ ಅಲ್ಲ, ಅವರನ್ನೇ ಹೋಲುವ ಮತ್ತೊಬ್ಬ ಸುಂದರಿ: ವಿಡಿಯೋ ವೈರಲ್!

Published : Nov 25, 2026, 05:23 PM IST
Junior Nayanthara

ಸಾರಾಂಶ

ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರನ್ನೇ ಹೋಲುವ ದೀಪ್ತಿ ಕಲ್ಯಾಣಿ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾರು ಈ ಜೂನಿಯರ್ ನಯನತಾರಾ? ಅವರ ಹಿನ್ನೆಲೆ ಮತ್ತು ವೈರಲ್ ವಿಡಿಯೋದ ವಿವರ ಇಲ್ಲಿದೆ.

ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರನ್ನು ಹೋಲುವ ಮಹಿಳೆಯೊಬ್ಬರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಮೊದಲ ನೋಟಕ್ಕೆ ಸ್ವತಃ ನಯನತಾರಾ ಅವರೇ ಇರಬಹುದೇನೋ ಎಂಬಷ್ಟು ಹೋಲಿಕೆ ಹೊಂದಿರುವ ಈ ಮಹಿಳೆಯನ್ನು ಕಂಡು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಹಾಗಾದರೆ ಈಕೆ ಯಾರು? ನಯನತಾರಾ ಅವರಂತೆಯೇ ಕಾಣಿಸಿಕೊಳ್ಳುತ್ತಿರುವ ಈ ಸುಂದರಿಯ ಹಿನ್ನೆಲೆಯೇನು?

ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಯನತಾರಾ, ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಆರಂಭದಲ್ಲಿ 'ಚಂದ್ರಮುಖಿ', 'ಗಜಿನಿ' ಸಿನಿಮಾಗಳಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರು, ನಂತರ ನಾಯಕಿಯಾಗಿ ಗುರುತಿಸಿಕೊಂಡು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತಮ್ಮ ಅಭಿನಯ ಮತ್ತು ಸ್ಟಾರ್‌ಡಮ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಯನತಾರಾ ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ಲೇಡಿ ಸೂಪರ್ ಸ್ಟಾರ್' ಎಂದು ಕರೆಯುತ್ತಾರೆ.

ನಯನತಾರಾ ಹಳೆಯ ವಿಡಿಯೋ ಎಂದುಕೊಂಡ ನೆಟ್ಟಿಗರು!

ಸೋಶಿಯಲ್ ಮೀಡಿಯಾದಲ್ಲಿ ಯಾವಾಗ, ಯಾವ ವಿಡಿಯೋ ವೈರಲ್ ಆಗುತ್ತದೆ ಎಂದು ಹೇಳುವುದೇ ಕಷ್ಟ. ಇದೀಗ ನಯನತಾರಾ ಅವರ ಹೆಸರೇ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಆದರೆ, ಇದಕ್ಕೆ ಕಾರಣ ಅವರ ಹೊಸ ಸಿನಿಮಾ ಅಥವಾ ವೈಯಕ್ತಿಕ ಜೀವನದ ಅಪ್‌ಡೇಟ್ ಅಲ್ಲ. ಬದಲಿಗೆ, ಅವರನ್ನು ಥೇಟ್ ಹೋಲುವ ಮತ್ತೊಬ್ಬ ಮಹಿಳೆಯ ವಿಡಿಯೋ!

ಇತ್ತೀಚೆಗೆ ಶಾಪಿಂಗ್ ಮಾಲ್‌ವೊಂದರಲ್ಲಿ ಮಕ್ಕಳು ಆಟವಾಡುತ್ತಿದ್ದುದನ್ನು ನಗುತ್ತಾ ನೋಡುತ್ತಾ ನಿಂತಿದ್ದ ಮಹಿಳೆಯೊಬ್ಬರ ವಿಡಿಯೋ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಭಾರಿ ವೈರಲ್ ಆಗಿದೆ. ಆಕೆಯ ಕಣ್ಣುಗಳು, ಮೂಗು, ನಗು ಹಾಗೂ ಕೂದಲನ್ನು ಕಟ್ಟಿಕೊಂಡಿರುವ ಶೈಲಿ ಎಲ್ಲವೂ ನಯನತಾರಾ ಅವರನ್ನು ನೆನಪಿಸುವಂತಿವೆ. ಹೀಗಾಗಿ, ವಿಡಿಯೋ ನೋಡಿದ ಅನೇಕರು ಇದು ನಯನತಾರಾ ಅವರ ಹಳೆಯ ವಿಡಿಯೋ ಇರಬಹುದೆಂದು ಭಾವಿಸಿದ್ದಾರೆ. ಬಳಿಕ ಈ ವಿಡಿಯೋಗೆ ಲೈಕ್ಸ್, ಕಾಮೆಂಟ್‌ಗಳು ಹಾಗೂ ಶೇರ್‌ಗಳ ಸುರಿಮಳೆಯೇ ಹರಿದಿದೆ.

ಹಾಗಾದರೆ ಈಕೆ ಯಾರು ಗೊತ್ತಾ?

ವೈರಲ್ ವಿಡಿಯೋದಲ್ಲಿರುವ ಮಹಿಳೆ ನಯನತಾರಾ ಅಲ್ಲ. ಅವರ ಹೆಸರು ದೀಪ್ತಿ ಕಲ್ಯಾಣಿ. ಕೇರಳ ಮೂಲದವರಾದ ದೀಪ್ತಿ ಕಲ್ಯಾಣಿ ಖ್ಯಾತ ಟ್ರಾನ್ಸ್‌ಜೆಂಡರ್ ಮಾಡೆಲ್, ಮೇಕಪ್ ಆರ್ಟಿಸ್ಟ್ ಹಾಗೂ ನಟಿ. ಮಲಯಾಳಂ ಚಿತ್ರರಂಗದ ಜೊತೆಗೆ ಫ್ಯಾಷನ್ ಕ್ಷೇತ್ರದಲ್ಲಿಯೂ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ.

ಸದ್ಯ ಶಾಪಿಂಗ್ ಮಾಲ್‌ನಲ್ಲಿನ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ದೀಪ್ತಿ ಕಲ್ಯಾಣಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಅವರ ನಯನತಾರಾ ಹೋಲಿಕೆಯನ್ನು ಕಂಡು ಅಚ್ಚರಿಗೊಂಡಿರುವ ನೆಟ್ಟಿಗರು, 'ಜೂನಿಯರ್ ನಯನತಾರಾ', 'ನಯನತಾರಾ ಟ್ವಿನ್' ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ನಯನತಾರಾ ಅವರಂತೆ ಕಾಣುವ ದೀಪ್ತಿ ಕಲ್ಯಾಣಿ ಅವರ ವಿಡಿಯೋ ಇದೀಗ ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಸಿಕ್ಕಾಪಟ್ಟೆ ಇಷ್ಟಪಟ್ಟೆ ಐ ಲೈಕ್‌ ಇಟ್...' ಅಂತಾ ನಯನತಾರಾ ನಟಿಸಿದ ಏಕೈಕ ಕನ್ನಡ ಸಿನಿಮಾ ಇದು!
ಅಪ್ಪ-ಅಮ್ಮನಾದ Amruthadhaare ಜೀವ, ಶ್ರೀಮಸ್ತು ಶುಭಮಸ್ತು ಪೂರ್ಣಿ: ಕಂದನ ಜೊತೆ ತಾರಾ ಜೋಡಿ