
ಮುಂಬೈ : ಕೇರಳದಲ್ಲಿ ಸಂಭವಿಸಿದ ಭಾರೀ ಪ್ರವಾಹದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದ್ದು ಮತ್ತೆ ಬದುಕು ಕಟ್ಟಿಕೊಳ್ಳಲು ಅಲ್ಲಿನ ಜನ ಹರ ಸಾಹಸ ಪಡುತ್ತಿದ್ದಾರೆ.
ಇದೀಗ ಜನರ ಜೀವನವನ್ನು ಮುಂಚಿನಂತೆ ಸುಸ್ಥಿತಿಗೆ ತರಲು ಎಲ್ಲೆಡೆಯಿಂದ ನೆರವು ಹರಿದು ಬರುತ್ತಿದೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೇರಳ ಪ್ರವಾಹಕ್ಕೆ ಒಟ್ಟು 51 ಲಕ್ಷ ನೆರವು ನೀಡಿದ್ದಾರೆ.
ಕೇವಲ ದುಡ್ಡನ್ನಷ್ಟೇ ಅಲ್ಲದೇ, ಹೆಚ್ಚಿನ ಬಟ್ಟೆಗಳನ್ನು ಕೂಡ ಪ್ರವಾಹ ಸಂತ್ರಸ್ಥರಿಗಾಗಿ ಬಚ್ಚನ್ ನೀಡಿದ್ದಾರೆ. ಒಟ್ಟು 80 ಜಾಕೆಟ್ ಗಳು, 25 ಪ್ಯಾಂಟ್ ಗಳು, 20 ಶರ್ಟ್ ನೀಡಿದ್ದಾರೆ.
ಶಾರುಕ್ ಖಾನ್, ಸುಶಾಂತ್ ಸಿಂಗ್, ಕೃತಿಕ್ ರೋಷನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳೂ ಕೂಡ ತಮ್ಮ ನೆರವಿನ ಹಸ್ತ ಚಾಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.