
ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಗೌಡ ಅಭಿನಯದ ಚಿತ್ರ 'ಅಮರ್' ಅಧಿಕೃತವಾಗಿ ಸೆಟ್ಟೇರಿದೆ. ಬೆಂಗಳೂರಿನ ಜೆಪಿ ನಗರದಲ್ಲಿನ ತಿರುಮಲಗಿರಿ ದೇವಸ್ಥಾನದಲ್ಲಿ ಸೋಮವಾರ ಚಿತ್ರಕ್ಕೆ ಪೂಜೆ ನಡೆಯಿತು. ಜೂನ್ 25ರಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಇನ್ನೊಂದು ಮಹಾಮುಹೂರ್ತವೂ ನಡೆಯಲಿದ್ದು ಅದಕ್ಕೆ ಬಿಗ್‌ಬಿ ಅಮಿತಾಬ್ ಬಚ್ಚನ್, ಶತ್ರುಘ್ನ ಸಿನ್ಹಾ, ಸೂಪರ್ ಸ್ಟಾರ್ ರಜನಿಕಾಂತ್, ಮೆಗಸ್ಟಾರ್ ಚಿರಂಜೀವಿ, ಮೋಹನ್ ಲಾಲ್ ಅತಿಥಿಗಳು.
ಜೊತೆಗೆ ಭಾರತೀಯ ಚಿತ್ರೋದ್ಯಮದ ದಿಗ್ಗಜರೇ ಭಾಗವಹಿಸುತ್ತಿದ್ದಾರಂತೆ. ಇವರೆಲ್ಲರೂ ನಟ ಅಂಬರೀಶ್ ಆಪ್ತ ಸ್ನೇಹಿತರು. ಅವರೆಲ್ಲರ ಜತೆಗೆ ಭಾರತೀಯ ಚಿತ್ರರಂಗದ ಒಟ್ಟು 30 ಮಂದಿ ನಟ-ನಟಿಯರು ‘ಅಮರ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆನ್ನುವುದು ಇಲ್ಲಿರುವ ಇಂಟರೆಸ್ಟಿಂಗ್ ಸಂಗತಿ. ಇಲ್ಲಿ ಅಂಥದೊಂದು ಮ್ಯಾಜಿಕ್ ಮಾಡಲು ಹೊರಟಿದ್ದಾರೆ ಚಿತ್ರದ ನಿರ್ದೇಶಕ ನಾಗಶೇಖರ್. ಅದಕ್ಕಂತಲೇ ಅವರ ಮೈಂಡ್‌ಗೆ ಹೊಳೆದಿದ್ದು ಸ್ಪೆಷಲ್ ಸಾಂಗ್.
ಹಿಂದಿಯ 'ಓಂ ಶಾಂತಿ ಓಂ' ಚಿತ್ರ ನೋಡಿದವರಿಗೆ ಅಲ್ಲಿ ಗಮನ ಸೆಳೆದ 'ದೀವಾನಗೀ... ದೀವಾನಗೀ.' ಹಾಡು ಮರೆಯಲು ಸಾಧ್ಯವೇ ಇಲ್ಲ. ಯಾಕಂದ್ರೆ ಆ ಹಾಡಿನಲ್ಲಿ ಬಹುತೇಕ ಬಾಲಿವುಡ್ ಬಂದು ಹೋಗಿತ್ತು. ಅಂಥದ್ದೇ ಒಂದು ಹಾಡಿನಲ್ಲಿ ಅಂಬರೀಶ್ ಅವರಿಗೆ ತುಂಬಾನೆ ಆಪ್ತರೆನಿಸಿರುವ ಭಾರತೀಯ ಚಿತ್ರರಂಗದ ಅಷ್ಟು ದಿಗ್ಗಜರನ್ನೇ ತೆರೆ ಮೇಲೆ ತೋರಿಸುವ ಸಾಹಸ ನಾಗಶೇಖರ್ ಅವರದ್ದು.'ಇದು ಎಷ್ಟು ಸಾಧ್ಯವೋ ಗೊತ್ತಿಲ್ಲ. ಆದ್ರೆ ಹೀಗೊಂದು ಪ್ಲಾನ್ ಹಾಕಿಕೊಂಡಿದ್ದೇನೆ. ಅಮಿತಾಬ್, ಶತ್ರುಘ್ನ ಸಿನ್ಹಾ, ರಜನಿಕಾಂತ್, ಚಿರಂಜೀವಿ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರನ್ನೇ ಈ ಚಿತ್ರದಲ್ಲಿ ತೋರಿಸಬೇಕು, ಅದಕ್ಕಾಗಿ ಒಂದು ಸ್ಪೆಷಲ್ ಸಾಂಗ್ ಮಾಡಬೇಕು ಅಂತ ಯೋಚಿಸಿದ್ದೇನೆ. ಇದು ಸಾಧ್ಯವಾಗುವುದಕ್ಕೆ ಹಲವರ ಬೆಂಬಲಬೇಕು. ಮುಖ್ಯವಾಗಿ ಅಂಬರೀಶ್ ಅಣ್ಣನ ಸಾಥ್ ಬೇಕು. ಜತೆಗೆ ನಿರ್ಮಾಪಕರು ಓಕೆ ಹೇಳಬೇಕು. ಒಂದಷ್ಟು ಕಷ್ಟದ ಕೆಲಸ ಇದು. ಆದ್ರೂ ಇದು ಸಾಧ್ಯವಾಗಬಹುದು ಅಂತ ಅಂದುಕೊಂಡಿದ್ದೇನೆ' ಎನ್ನುತ್ತಾರೆ ನಿರ್ದೇಶಕ ನಾಗ್‌ಶೇಖರ್.
ಸದ್ಯಕ್ಕೆ ಸಿನಿಮಾದಪೂಜೆ ವೇಳೆ ಮಾಧ್ಯಮದವರ ಜತೆಗೆ ಮಾತನಾಡುತ್ತಾ ನಾಗಶೇಖರ್ ಈ ಸಂಗತಿಯನ್ನು ಹೇಳಿಕೊಂಡ ಸಂದರ್ಭದಲ್ಲೇ ಕತೆಯ ವಿಶೇಷತೆ ಕುರಿತಾಗಿಯೂ ಒಂದಷ್ಟು ಬಾಯ್ಬಿಟ್ಟರು. 'ಇದೊಂದು ಬೈಕ್ ರೇಸ್ ಕತೆ. ಇಲ್ಲಿ ಹೀರೋ ಹಾಗೂ ಹೀರೋಯಿನ್ ಇಬ್ಬರು ಬೈಕ್ ರೈಡರ್. ಅವರ ನಡುವೆ ನಡೆಯುವ ಕತೆ. 90 ರ ದಶಕಕ್ಕೆ ಸಂಬಂಧಿಸಿದ ರಿಯಲ್ ಕತೆ. ಅದು ನಾಯಕಿಗೆ ಸಂಬಂಧಿಸಿದ್ದು ಅನ್ನೋದು ಇಲ್ಲಿ ವಿಶೇಷ. ಸದ್ಯಕ್ಕೆ ಅದರ ನಿಜವಾನಾಯಕಿ ಯಾರು ಎನ್ನುವುದನ್ನು ಚಿತ್ರತೆರೆಗೆ ಬರುವ ಹೊತ್ತಿಗೆ ರಿಲೀವ್ ಮಾಡುತ್ತೇನೆ. ನಾಯಕನಿಗೂ ವಿಲನ್ ಶೇಡ್ ಇದೆ. ಅದೆಲ್ಲ ಹೇಗಿರುತ್ತೆ ಅನ್ನೋದು ಕೂಡ ಸಸ್ಪೆನ್ಸ್. ಒಟ್ಟು ೮೦ ದಿನಗಳ ಚಿತ್ರೀಕರಣದ ಅವಧಿ. ಬೈಕ್ ರೇಸ್ ಕತೆ ಆಗಿದ್ದರಿಂದ ಬೆಂಗಳೂರು ಟು ಮಂಗಳೂರು, ಮಂಗಳೂರು ಟು ಮೈಸೂರು ಹೆದ್ದಾರಿ ಉದ್ದಕ್ಕೂ ಚಿತ್ರೀಕರಣ ನಡೆಯಲಿದೆ. ಅಲ್ಲಿಂದ ಸ್ಕಾಟ್‌ಲೆಂಡ್ ಗೂ ಹೋಗುತ್ತಿದ್ದೇವೆ. ಅಲ್ಲಿ ಚೇಸಿಂಗ್ ಸನ್ನಿವೇಶದ ಶೂಟಿಂಗ್ ನಡೆಯಲಿದೆ.ಚಿತ್ರೀಕರಣದ ಪೂರ್ವ ಸಿದ್ಧತೆ ನಡೆದಿದೆ. ನಾಯಕ ಅಭಿಷೇಕ್ ಹಾಗೂ ನಾಯಕಿ ತಾನ್ಯ ಹೋಪ್ ಇಬ್ಬರು ಬೈಕ್ ರೇಸ್ ತರಬೇತಿ ಪಡೆಯುತ್ತಿದ್ದಾರೆ' ಎಂದರು ನಾಗಶೇಖರ್. ಹಾಗೊಂದು ನಾಗಶೇಖರ್ ಅಂದುಕೊಂಡಂತೆ ‘ಅಮರ್’ ಚಿತ್ರದಲ್ಲಿ
ಅಮಿತಾಬ್, ರಜನಿಕಾಂತ್, ಚಿರಂಜೀವಿ, ಶತ್ರುಘ್ನ ಸಿನ್ಹಾ ಸೇರಿದಂತೆ ಭಾರತೀಯ ಚಿತ್ರರಂಗ ದಿಗ್ಗಜರನ್ನು ತೋರಿಸಿದ್ದಾದಲ್ಲಿ ಕನ್ನಡ ಚಿತ್ರರಂಗಕ್ಕೆ ಇದೊಂದು ದಾಖಲೆ ಆಗಲಿದೆ.?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.