
- ಇದು ನನ್ನ ಅತ್ತಿಗೆ ಸಿನಿಮಾ. ಚೆನ್ನಾಗಿ ಬಂದಿರುತ್ತದೆ. ದಯವಿಟ್ಟು ಎಲ್ಲರು ಚಿತ್ರವನ್ನು ನೋಡಿ ಬೆಂಬಲಿಸಿ.
- ನನ್ನ ಪತ್ನಿ ನಟಿಸಿರುವ ಸಿನಿಮಾ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುವಂತಾಗಲಿ. ಹೀಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಫ್ಯಾಮಿಲಿ ಮಾತುಗಳು ಕೇಳಿಬಂದಿದ್ದು 'ಇರುವುದೆಲ್ಲ ಬಿಟ್ಟು' ಚಿತ್ರದ ಆಡಿಯೋ ಬಿಡುಗಡೆ ವೇದಿಕೆಯಲ್ಲಿ. ಫ್ಯಾಮಿಲಿ ಕಾರ್ಯಕ್ರಮ ಆಗುವುದಕ್ಕೆ ಕಾರಣವಾಗಿದ್ದು ಮೇಘನಾ ರಾಜ್. ಮದುವೆಯ ನಂತರ ಭಾಗಹಿಸಿದ ಮೊದಲ ಸಿನಿಮಾ ಕಾರ್ಯಕ್ರಮ. ಹೀಗಾಗಿ ಅವರ ಪತಿ ಚಿರಂಜೀವಿ ಸರ್ಜಾ ಮತ್ತು ಮೈದುನ ಧ್ರುವ ಸರ್ಜಾ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಮೇಘನಾ ರಾಜ್ ಈ ಚಿತ್ರದ ನಾಯಕಿ. ಹೀಗಾಗಿ ಚಿರು ಹಾಗೂ ಧ್ರುವ ಇದು ತಮ್ಮ ಫ್ಯಾಮಿಲಿ ಸಿನಿಮಾದಂತೆ ಭಾವಿಸಿ ಚಿತ್ರದ ಬಗ್ಗೆ ಮಾತನಾಡಿದರು. ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಚಿತ್ರವನ್ನು ಬೆಂಬಲಿಸಿ ಎಂದಾಗ ಎದುರಿಗೆ ಕೂತ ಸುಂದರಾಜ್ ಹಾಗೂ ಪ್ರಮೀಳಾ ಜೋಷಾಯಿ ದಂಪತಿ ಮುಖದಲ್ಲಿ ಸಂಭ್ರಮದಲ್ಲಿ ಮನೆ ಮಾಡಿತ್ತು.
ಇಡೀ ಕಾರ್ಯಕ್ರಮ ಜನ ಜಾತ್ರೆಗೆ ಕಾರಣವಾಗಿದ್ದು ಧ್ರುವ ಸರ್ಜಾ ಆಗಮನ ಹಾಗೂ ತಮಿಳು ನಟ ಸಿಂಬು ಬರುತ್ತಾರೆಂಬುದು. ಸಿಂಬು ಅವರನ್ನು ನೋಡುವುದಕ್ಕಾಗಿಯೇ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಗಳಲ್ಲಿ ಆಗಮಿಸಿದ್ದರೆ, ಧ್ರುವ ಜತೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಒದ್ದಾಡುತ್ತಿದ್ದವರ ಸಂಖ್ಯೆಗೂ ಕಡಿಮೆ ಇರಲಿಲ್ಲ.ಆದರೆ, ಕೊನೆಗೆ ತಮಿಳು ನಟ ಸಿಂಬು ಬರಲೇ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.