ಸಿನಿಮಾಗಾಗಿ ಐಟಂ ಗರ್ಲ್ ಆದ ಮಿಸ್ಟರ್ ಪರ್ಫೆಕ್ಟ್ !

Published : Oct 16, 2017, 08:51 PM ISTUpdated : Apr 11, 2018, 12:50 PM IST
ಸಿನಿಮಾಗಾಗಿ ಐಟಂ ಗರ್ಲ್ ಆದ ಮಿಸ್ಟರ್ ಪರ್ಫೆಕ್ಟ್ !

ಸಾರಾಂಶ

ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಐಟಂ ಸಾಂಗ್​ ಮಾಡಿದ್ದಾರೆ.

ಬೆಂಗಳೂರು (ಅ.16): ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಐಟಂ ಸಾಂಗ್​ ಮಾಡಿದ್ದಾರೆ.

ಅಮೀರ್ ಖಾನ್ ಏನೇ ಮಾಡಿದ್ರು ಅಲ್ಲೊಂದು ಅಚ್ಚರಿ ಕಾದಿರುತ್ತೆ. ಈಗ ವೈರಲ್ಲಾಗಿರೋ ಈ ವೀಡಿಯೋ ನೋಡಿದ್ರೆ ನಿಮಗೆ ಅಮೀರ್ ಖಾನ್ ಪರ್ಫಾಮೆನ್ಸ್ ಇಷ್ಟ ಆಗೋದ್ರಲ್ಲಿ ಡೌಟೇ ಇಲ್ಲ.  ಅಮೀರ್ ಖಾನ್ ಸಿನಿಮಾಕ್ಕಾಗಿ ಪಕ್ಕಾ ಐಟಂ ಹುಡುಗಿಯಂತೆ ಸೊಂಟ ಬಳುಕಿಸಿ ಮೈಯೆಲ್ಲ ನಡುಗಿಸಿ  ಬಿಟೌನ್ ಮಂದಿಗೆ ಶಾಕ್​ ಟ್ರೀಟ್​ಮೆಂಟ್​ ಕೊಟ್ಟಿದ್ದಾರೆ.

ಸಿನಿಮಾ ಪ್ರಚಾರಕ್ಕಾಗಿ ಏನೋ ಒಂದು ಹೊಸ ದಾರಿ ಕಂಡು ಕೊಳ್ಳೋ ಅಮೀರ್  ಈಗ ಅಂಥದ್ದೆ ಕೆಲಸ ಮಾಡಿದ್ದಾರೆ. ಫಾರಿನ್ ಹುಡ್ಗಿರ ಜೊತೆ ಅಮೀರ್ ಖಾನ್ ಒಂದು ಚೂರು ಮುಜುಗರ ಇಲ್ಲದೆ, ಇಷ್ಟ ಬಂದ ಹಾಗೇ ಸೊಂಟ ಬಳುಕಿಸುತ್ತಿವುದು ಯಾಕಂದ್ರೆ ರಿಲೀಸ್​ಗೆ ರೆಡಿಯಾಗಿರೋ ಸಿಕ್ರೇಟ್ ಸೂಪರ್ ಸ್ಟಾರ್ ಸಿನಿಮಾಕ್ಕಾಗಿ ಅಮೀರ್ ಹುಡ್ಗಿಯಂತೆ ಕುಣಿದು ಕಿಕ್ಕೇರಿಸಿದ್ದಾರೆ.

ಕೋರಿಯೋಗ್ರಾಫರ್ ಸಾನ್ಯಾ ಮಲ್ಹೋತ್ರಾ ನೃತ್ಯ ಸಂಯೋಜನೆ ಮಾಡಿದ್ದಾರೆ. ಮಿಕಾ ಸಿಂಗ್ ಈ ಹಾಡನ್ನು  ಹಾಡಿದ್ದೇ ಹಾಡಿದ್ದು ,  ಅಮೀರ್ ಕುಣಿದಿದ್ದೇ ಕುಣಿದಿದ್ದು.  ಅಮೀರ್ ಖಾನ್ ಈ ಚಿತ್ರದಲ್ಲಿ  ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದಲ್ಲೂ ಅಚ್ಚರಿ ಮೂಡಿಸಲಿದ್ದಾರೆ. ಅಂದಹಾಗೆ  ಸಿನಿಮಾ ಪ್ರಚಾರಕ್ಕಾಗಿ ಸ್ಟಾರ್​ ನಟ ಅನ್ನೋದನ್ನ ಪಕ್ಕಕ್ಕಿಟ್ಟು ಹೇಗೆಲ್ಲ ಅಭಿನಯಿಸ್ತಾರೆ ಅನ್ನೋದಕ್ಕೆ  ಅಮೀರ್​ ಖಾನ್ ಬೆಸ್ಟ್ ಎಕ್ಸಾಂಪಲ್ .

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಶಿ ವಿಶ್ವನಾಥ ಘಾಟ್‌ನಲ್ಲಿ 'ಅಖಂಡ 2' ಸಿನಿಮಾ ಪ್ರಚಾರ ಜೋರು: ಭಾವುಕರಾದ ಬಾಲಯ್ಯ
Aase Serial: ರೋಹಿಣಿ ಪಾತ್ರಕ್ಕೆ ಆಯ್ಕೆಯಾದ ಒಂದೇ ದಿನಕ್ಕೆ ಧಾರಾವಾಹಿಯಿಂದ ಹೊರ ಬಂದ ನಟಿ ರೋಶಿನಿ