ಯಶ್ ಗೆ ಕರೆ ಮಾಡಿದ ಪವರ್ ಸ್ಟಾರ್; ಅಪ್ಪು ಜೊತೆ ಯಶ್ ಮಾತನಾಡಿದಾದ್ರು ಏನು?

Published : Oct 16, 2017, 08:19 PM ISTUpdated : Apr 11, 2018, 01:05 PM IST
ಯಶ್ ಗೆ ಕರೆ ಮಾಡಿದ ಪವರ್ ಸ್ಟಾರ್; ಅಪ್ಪು ಜೊತೆ ಯಶ್ ಮಾತನಾಡಿದಾದ್ರು ಏನು?

ಸಾರಾಂಶ

ಸ್ಯಾಂಡಲ್'ವುಡ್  ಹೈ ವೋಲ್ಟೇಜ್ ಪವರ್ ಸ್ಟಾರ್ ,ದೊಡ್ಮನೆ ಹುಡ್ಗ ಪುನೀತ್ ರಾಜ್ ಕುಮಾರ್ ಕಂಡ್ರೆ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ಇದು ಅಭಿಮಾನಿಗಳಿಗೆ ಮಾತ್ರ ಸಿಮಿತವಾಗಿಲ್ಲ.  ಚಿತ್ರರಂಗದ ಸ್ಟಾರ್ ತಾರೆಯರಿಗೂ ಪುನೀತ್ ಕಂಡ್ರೆ ತುಂಬಾ ಇಷ್ಟ.  ಕನ್ನಡ, ತೆಲಗು,  ತಮಿಳು ಹೀಗೆ ಎಲ್ಲಾ ಭಾಷೆಯಲ್ಲಿ ಅಪ್ಪು ನನ್ನ ಸ್ನೇಹಿತ ಅಂತ ಅದೆಷ್ಟೋ ಟಾಪ್ ಸ್ಟಾರ್ ಗಳು ಹೇಳಿಕೊಂಡಿದ್ದು ಇದೆ.

ಬೆಂಗಳೂರು (ಅ.16): ಸ್ಯಾಂಡಲ್'ವುಡ್  ಹೈ ವೋಲ್ಟೇಜ್  ಪವರ್ ಸ್ಟಾರ್ ,ದೊಡ್ಮನೆ ಹುಡ್ಗ ಪುನೀತ್ ರಾಜ್ ಕುಮಾರ್ ಕಂಡ್ರೆ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ಇದು ಅಭಿಮಾನಿಗಳಿಗೆ ಮಾತ್ರ ಸಿಮಿತವಾಗಿಲ್ಲ.  ಚಿತ್ರರಂಗದ ಸ್ಟಾರ್ ತಾರೆಯರಿಗೂ ಪುನೀತ್ ಕಂಡ್ರೆ ತುಂಬಾ ಇಷ್ಟ.  ಕನ್ನಡ, ತೆಲಗು,  ತಮಿಳು ಹೀಗೆ ಎಲ್ಲಾ ಭಾಷೆಯಲ್ಲಿ ಅಪ್ಪು ನನ್ನ ಸ್ನೇಹಿತ ಅಂತ ಅದೆಷ್ಟೋ ಟಾಪ್ ಸ್ಟಾರ್ ಗಳು ಹೇಳಿಕೊಂಡಿದ್ದು ಇದೆ.

ಇತ್ತಿಚಿಗೆ ಅಪ್ಪು ಜೊತೆ  ಯಶ್ ಕೂಡ ಫೋನಲ್ಲಿ ಮಾತನಾಡಿದ್ದಾರೆ. ಆ ಆಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ  ಸೌಂಡ್ ಮಾಡ್ತಿದೆ. ಅಷ್ಟಕ್ಕೂ ಅಪ್ಪು ಜೊತೆ ಯಶ್ ಎನ್ ಮಾತನಾಡಿದ್ರು ಗೊತ್ತಾ?

ಕೋಟ್ಯಾದಿಪತಿ ಶೋ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಭಾಗವಹಿಸಿದ್ದರು. ಆಗ 3 ಲಕ್ಷ ಗೆದ್ದ ರಾಧಿಕಾಗೆ ಅಪ್ಪು ಯಶ್ ಅವರಿಗೆ  ಕರೆ ಮಾಡಿದ್ರು. ಆ ಸಂದರ್ಭದಲ್ಲಿ ಮಾತನಾಡಿದ ವಿಡಿಯೋ ಇದು.  ಅದೇನೆ ಇರಲಿ. ಅಪ್ಪು ಕಂಡ್ರೆ ಯಶ್ ಗೆ ತುಂಬಾ ಪ್ರೀತಿ.  ಪುನೀತ್ ಗೂ ಯಶ್ ಮೆಲೆ ಎಲ್ಲಿಲ್ಲದ ಅಭಿಮಾನಿ ,ಇವರಿಬ್ಬರು ಒಳ್ಳೆ ಸ್ನೆಹಿತರು ಅನ್ನೋಕ್ಕೆ ದೊಡ್ಮನೆ  ಚಿತ್ರದ ಸಕ್ಸಸ್ ಫಂಕ್ಷನ್'ನಲ್ಲಿ ಯಶ್ ಕಾಣಿಸಿಕೊಂಡಿದ್ದು, ಜೊತೆಗೆ  ರಾಜಕುಮಾರ ಶತದಿನೋತ್ಸವ ಕಾರ್ಯಕ್ರಮಕ್ಕೆ ಬಂದ ಯಶ್ ಅಪ್ಪುಗೆ ಶುಭ ಹಾರೈಸಿದರು.  ಅಷ್ಟೆ ಅಲ್ಲ  ಯಶ್ ಹಾಗೂ ಪುನೀತ್ ಪರಸ್ಪರ ಬೇಟಿಯಾಗ್ತಾ ಇರ್ತಾರೆ.  ಅದಕ್ಕೆ ಸಿನಿಮಾ ಕಾರ್ಯಕ್ರಮವೇ ಅಗಬೇಕಂತಿಲ್ಲ.  ಚಿತ್ರರಂಗ ಬಿಟ್ಟು ಆಚೆಯೂ ಇವರಿಬ್ಬರು ಒಳ್ಳೆ ಫ್ರೆಂಡ್ಸ್  ಆಗಿರೋದು ಅಷ್ಟೆ ಸತ್ಯ .

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಶಿ ವಿಶ್ವನಾಥ ಘಾಟ್‌ನಲ್ಲಿ 'ಅಖಂಡ 2' ಸಿನಿಮಾ ಪ್ರಚಾರ ಜೋರು: ಭಾವುಕರಾದ ಬಾಲಯ್ಯ
Aase Serial: ರೋಹಿಣಿ ಪಾತ್ರಕ್ಕೆ ಆಯ್ಕೆಯಾದ ಒಂದೇ ದಿನಕ್ಕೆ ಧಾರಾವಾಹಿಯಿಂದ ಹೊರ ಬಂದ ನಟಿ ರೋಶಿನಿ