ಎಕ್ಸಾಂ ಬಿಟ್ಟು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬೆಡಗಿ: ಮೊದಲ ದಿನವೇ ಈ ಸ್ಪರ್ಧಿಗೆ ಶಾಕಿಂಗ್ ಸುದ್ದಿ

Published : Oct 16, 2017, 04:43 PM ISTUpdated : Apr 11, 2018, 01:10 PM IST
ಎಕ್ಸಾಂ ಬಿಟ್ಟು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬೆಡಗಿ: ಮೊದಲ ದಿನವೇ ಈ ಸ್ಪರ್ಧಿಗೆ ಶಾಕಿಂಗ್ ಸುದ್ದಿ

ಸಾರಾಂಶ

ಭಾರೀ ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ಸೀಜನ್ 5 ನಿನ್ನೆಯಷ್ಟೇ ಅದ್ದೂರಿಯಾಗಿ ಪ್ರಾರಂಭವಾಗಿದೆ.  ಬಾರಿ ಶ್ರೀ ಸಾಮಾನ್ಯರಿಗೂ ಬಿಗ್ ಮನೆ ಪ್ರವೇಶಿಸಲು ಅವಕಾಶ ನೀಡಿದ್ದು, ಸೆಲೆಬ್ರಿಟಿಗಳು ಸೇರಿದಂತೆ ಒಟ್ಟು 17 ಮಂದಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ. ಈ ಮೂಲಕ ಬಿಗ್ ಮನೆಗೆ ಯಾರು ಪ್ರವೇಶಿಸುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಆದರೂ ಇದೀಗ ಪ್ರಾರಂಭಗೊಂಡ ಮೊದಲ ದಿನವೇ ಈ ಶೋ ಜನರಲ್ಲಿ ಮತ್ತೊಂದು ಭಾರೀ ಕುತೂಹಲಕಾರಿ ಪ್ರಶ್ನೆ ಮೂಡಿಸುವುದರೊಂದಿಗೆ, ಬಿಗ್ ಮನೆಯಲ್ಲಿರುವ ಮೈಸೂರು ಹುಡುಗಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಅದೇನಂತೀರಾ? ಇಲ್ಲಿದೆ ನೋಡಿ ವಿವರ.

ಸದಾ ಒಂದಿಲ್ಲೊಂದು ವಿವಾದಗಳಿಂಲೇ ಫೇಮಸ್ ಆಗಿರುವ ಬಿಗ್ ಬಾಸ್ ಕಾರ್ಯಕ್ರಮದ 5 ನೇ ಸೀಜನ್ ಆರಂಭವಾಗಿದೆ. ಆದರೆ ಆರಂಭವಾದ ಮೊದಲ ದಿನವೇ 17 ಸ್ಪರ್ಧಿಗಳಲ್ಲೊಬ್ಬಳಾದ ನಿವೇದಿತಾ ಗೌಡಗೆ ಭಾರೀ ಶಾಕ್ ನೀಡುವ ಎಲ್ಲಾ ಸೂಚನೆಯನ್ನು ನೀಡಿದೆ. ಈ ಮೂಲಕ ಪ್ರೇಕ್ಷಕರಲ್ಲೂ ಭಾರೀ ಕುತೂಹಲ ಕೆರಳಿಸಿದೆ.

ಇದಕ್ಕೆಲ್ಲಾ ಕಾರಣವಾಗಿದ್ದು, ಕಲರ್ಸ್ ಸೂಪರ್ ವಾಹಿನಿಯ ಅಧಿಕೃತ ಫೇಸ್'ಬುಕ್ ಪೇಜ್'ನಲ್ಲಿ ಇಂತಹುದ್ದೊಂದು ಕುತೂಹಲ ಮೂಡಿಸುವ ಪೋಸ್ಟ್ ಶೇರ್ ಆಗಿದೆ. ಅಲ್ಲದೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಕೂಡಾ ಈ ಕುರಿತಾಗಿ ಪೋಸ್ಟ್ ಶೇರ್ ಮಾಡಿ 'ನಿವೇದಿತಾ ಗೌಡ ಎವಿಕ್ಟ್ ಆಗಲಿದ್ದಾಳೆ. ಮೊದಲ ದಿನದ ರಿಯಾಲಿಟಿ ನೋಡಲು ಮರೆಯದಿರಿ' ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದರೆ ಇಂದು ಜೇನಾದರೂ ಕುತೂಹಲಕಾರಿ ಬೆಳವಣಿಗೆ ನಡೆಯಲಿದೆ ಎಂಬುವುದು ಖಚಿತ.

ಇನ್ನು ನಿವೇದಿತಾ ಗೌಡ ಯಾಕೆ ಎವಕ್ಟ್ ಆಗಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿಲ್ಲವಾದರೂ, ಆಕೆಯ ಹಿನ್ನೆಲೆ ಗಮನಿಸಿದಾಗ ಈ ಕಾರಣಗಳಿಂದ ಆಕೆ ಹೊರ ಹೋಗುವ ಸಾಧ್ಯತೆಗಳಿವೆ.

ಮೊದಲನೆಯದಾಗಿ ಮೈಸೂರಿನ ಬೆಡಗಿ ನಿವೇದಿತಾ ಗೌಡ ಕಾಲೇಜು ವಿದ್ಯಾರ್ಥಿನಿ. ದ್ವಿತೀಯ ವರ್ಷದ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಈಕೆಗೆ ಮುಂದಿನ ತಿಂಗಳು ಪರೀಕ್ಷೆಗಳಿವೆ. ಹೀಗಿದ್ದರೂ ಪರೀಕ್ಷೆಯನ್ನು ಕಡೆಗಣಿಸಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಕೆ ಬಂದಿದ್ದಾಳೆ. ಹೀಗಾಗಿ ಈಕೆಯನ್ನು ಹೊರ ಕಳುಹಿಸುವ ಸಾಧ್ಯತೆಗಳಿವೆ.

ಎರಡನೆಯದಾಗಿ ಈಕೆ ಬಿಗ್ ಬಾಸ್ ಇತಿಹಾಸದಲ್ಲೇ ಮನೆಯೊಳಗೆ ಪ್ರವೇಶ ಪಡೆದ ಅತೀ ಕಿರಿಯ ವಯಸ್ಸಿನ ಹುಡುಗಿ. ನಿವೇದಿತಾ ಗೌಡಳ ವಯಸ್ಸು ಕೇವಲ 18 ವರ್ಷ.

ಮೂರನೆಯದಾಗಿ ಹೇಳುವುದಾದರೆ ಬಿಗ್ ಬಾಸ್ ಶೋಗಾಗಿ ಪರೀಕ್ಷೆ ಬರೆಯದೆ ಆಕೆ ಬಂದಿರುವುದು ಸಮಾಜಕ್ಕೆ ಹಾಗೂ ಇತರ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ರವಾನಿಸುವ ಸಾಧ್ಯತೆಗಳಿರುವುದರಿಂದ ಈಕೆಯನ್ನು ಹೊರಕಳುಹಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿರುವಚ  ಕ್ಯೂಟ್ ಬೆಡಗಿ ಎವಿಕ್ಟ್ ಆಗುತ್ತಾಳೋ, ಆದರೂ ಯಾವ ಕಾರಣಕ್ಕೆ ಎಂಬುವುದು ಇಂದು ರಾತ್ರಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲೇ ತಿಳಿದು ಬರಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ವಾರಣಾಸಿ' ಸಿನಿಮಾ ಶೂಟಿಂಗ್ ನೋಡಲು ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಆಸಕ್ತಿ: ಆದ್ರೆ ರಾಜಮೌಳಿ ಹೇಳಿದ್ದೇನು?
ಶಾರುಖ್-ದೀಪಿಕಾ ನಟನೆಯ 'ಕಿಂಗ್' ಚಿತ್ರದ ರೊಮ್ಯಾಂಟಿಕ್ ಹಾಡು ಲೀಕ್ ಆಯ್ತಾ? ವಿಡಿಯೋ ವೈರಲ್!