
ನವದೆಹಲಿ(ಸೆ.13): ದೀಪಿಕಾ ಪಡುಕೋಣೆ, ರಣ್'ವೀರ್ ಸಿಂಗ್ ಹಾಗೂ ಪ್ರಿಯಾಂಕಾ ಛೋಪ್ರಾ ನಡಿಸಿದ್ದ ಬಾಲಿವುಡ್'ನ 'ಬಾಜೀರಾವ್ ಮಸ್ತಾನಿ' ಸಿನಿಮಾವನನ್ನು ವಿಶ್ವದಾದ್ಯಂತ ಪ್ರೇಕ್ಷಕರು ಇಷ್ಟಪಟ್ಟಿದ್ದರು ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೀಗ ಈ ಮಾತನ್ನು ಸಾಬೀತುಗೊಳಿಸುವಂತಹ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಮೆರಿಕಾದ ಪ್ರಖ್ಯಾತ ಡ್ಯಾನ್ಸ್ ರಿಯಾಲಿಟಿ ಶೋ 'ಸೋ ಯು ಥಿಂಕ್ ಯು ಕ್ಯಾನ್ ಡ್ಯಾನ್ಸ್: ನೆಕ್ಸ್ಟ್ ಜನರೇಷನ್' ನ ವಿಡಿಯೋ ಒಂದು ಬಿರುಸಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಹಬ್ಬಿಕೊಳ್ಳುತ್ತಿದೆ. ಈ ವಿಡಿಯೋದಲ್ಲಿ ಜೇಟಿ ಚರ್ಚ್ ಹೆಸರಿನ ಬಾಲಕನೊಬ್ಬ ತನ್ನ ಗುರು ಮಾರ್ಕೋ ಜರ್ಮರ್ ಇಬ್ಬರೂ 'ಬಾಜೀರಾವ್ ಮಸ್ತಾನಿ' ಸಿನಿಮಾದ 'ಮಲ್ಹಾರಿ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಮೆರಿಕಾದ ಶೋ ಒಂದರಲ್ಲಿ ಹಿಂದಿ ಹಾಡಿಗೆ ನೃತ್ಯ ಮಾಡಿರುವುದು ಅಚ್ಚರಿಯೊಂದಿಗೆ ಹೆಮ್ಮೆಯ ವಿಚಾರವೇ ಸರಿ.
ಇನ್ನು ಈ ಬಾಲಕ ಈವರೆಗಿನ ಸ್ಪರ್ಧಾಳುಗಳಲ್ಲಿ ಅತಿ ಕಿರಿಯ ವಯಸ್ಸಿನವನಾಗಿದ್ದು, ಕೊನೆಯ ನಾಲ್ಕು ಸ್ಪರ್ಧಾಳುಗಳಲ್ಲಿ ಒಬ್ಬನಾಗಿದ್ದಾನೆ. ಈತನ ಈ ಡ್ಯಾನ್ಸ್ ತೀರ್ಪುಗಾರರಿಗೆ ಅದೆಷ್ಟು ಇಷ್ಟವಾಗಿತ್ತೆಂದರೆ ಎಲ್ಲರೂ ನಿಂತು ಚಪ್ಪಾಳೆ ತಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.