ಅಲಿಯಾ, ಕರಣ್ ಜೋಹರ್ ಕೈಗೊಂಬೆನಾ? ಏನಿದು ಕಂಗನಾ ವರಾತ?

Published : Feb 11, 2019, 07:49 PM ISTUpdated : Feb 11, 2019, 07:51 PM IST
ಅಲಿಯಾ, ಕರಣ್ ಜೋಹರ್ ಕೈಗೊಂಬೆನಾ? ಏನಿದು  ಕಂಗನಾ ವರಾತ?

ಸಾರಾಂಶ

ತಾರಕಕ್ಕೇರಿದೆ ಕಂಗನಾ- ಅಲಿಯಾ ವಾಕ್ಸಮರ | ಅಲಿಯಾ, ಕರಣ್ ಜೋಹರ್ ಕೈಗೊಂಬೆ ಎಂದ ಕಂಗನಾ | ಮಾಧ್ಯಮದೆದುರು ಪ್ರತಿಕ್ರಿಯಿಸಲು ಅಲಿಯಾ ನಕಾರ 

ಮುಂಬೈ (ಫೆ.11): ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಹಾಗೂ ಅಲಿಯಾ ಭಟ್ ನಡುವಿನ ವಾಕ್ ಸಮರ ಮುಂದುವರೆದಿದೆ. 

ಮಣಿಕರ್ಣಿಕಾ ಚಿತ್ರಕ್ಕೆ ಅಲಿಯಾ ಭಟ್ ನಂತಹ ಸೆಲಬ್ರಿಟಿಗಳು ಬೆಂಬಲ ನೀಡುತ್ತಿಲ್ಲ ಎಂದು ಕಂಗನಾ ಆರೋಪಿಸಿದ್ರು. ಇದಕ್ಕೆ ಅಲಿಯಾ ಉತ್ತರಿಸುತ್ತಾ, ಇದರ ಬಗ್ಗೆ ನಂಗೇನೂ ಗೊತ್ತಿಲ್ಲ. ನಾನು ವಿವಾದಗಳನ್ನು ಫಾಲೋ ಮಾಡುವುದಿಲ್ಲ. ಕಂಗನಾ ಕೂಡಾ ಈ ಬಗ್ಗೆ ಬೇಸರಿಸಿಕೊಳ್ಳುವುದಿಲ್ಲ ಎಂದು ತೆರೆ ಎಳೆಯುವ ಪ್ರಯತ್ನ ಮಾಡಿದರು. ಆದರೆ ಕಂಗನಾ ಮಾತ್ರ ಸುಮ್ಮನಿರದೇ ವಾದವನ್ನು ಮುಂದುವರೆಸಿದ್ದಾರೆ. 

ಅಲಿಯಾರನ್ನು ನಾನು ಯಶಸ್ವಿ ನಟಿ ಎಂದುಕೊಂಡಿಲ್ಲ. ಅವಳು ಕರಣ್ ಜೋಹರ್ ಕೈಗೊಂಬೆ ಎಂದು ಟೀಕಿಸಿದ್ದಾರೆ. 

ಇದರಿಂದ ಸಹನೆ ಕಳೆದುಕೊಂಡ ಅಲಿಯಾ, ಕಂಗನಾಗೆ ತಿರುಗೇಟು ನೀಡಿದ್ದಾರೆ.  ‘ನಾನು ಮಾಧ್ಯಮದೆದುರು ಉತ್ತರ ಕೊಡಲಾರೆ. ಏನೇ ಇದ್ದರೂ ಪರ್ಸನಲ್ ಆಗಿ ಮಾತನಾಡುತ್ತೇನೆ ಎಂದಿದ್ದಾರೆ. 

ಇನ್ನೂ ಮುಂದುವರೆದು ಮಾತನಾಡುತ್ತಾ, ಕಂಗನಾ ನೇರವಾಗಿ ಮಾತನಾಡುವವರು. ನಾನದನ್ನು ಗೌರವಿಸುತ್ತೇನೆ. ನಾನವರನ್ನು ಉದ್ದೇಶಪೂರ್ವಕವಾಗಿ ಮನಸ್ಸನ್ನು ನೋಯಿಸಿಲ್ಲ. ಅವರು ನನ್ನ ಬಗ್ಗೆ ಈ ರೀತಿ ಮಾತನಾಡುವಂತದ್ದನ್ನು ನಾನೇನು ಮಾಡಿಲ್ಲ ಎಂದು ಹೇಳಿದ್ದಾರೆ. ಅವರ್ಯಾಕೆ ಹಾಗೆ ವರ್ತಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!
400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, 100 ಕೋಟಿಗೂ ಹೆಚ್ಚು ಆಸ್ತಿ, 3 ಮದುವೆಯಾದ ಸ್ಟಾರ್ ನಟ ಇವರೇನಾ?