
ಸಿನಿ ಜರ್ನಿಯಲ್ಲಿ 63ನೇ ಚಿತ್ರವನ್ನು ಸ್ವಲ್ಪ ವಿಭ್ನಿನವಾಗಿ ಮಾಡುವ ಮನಸ್ಸು ಮಾಡಿದ ನಯನ್‌ತಾರಾ ಹಾರರ್ ಚಿತ್ರ Airaa ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೊದಲನೇ ಭಾರಿ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನಯನ್‌ತಾರಾ ಚಿತ್ರದ ಟ್ರೈಲರ್ ನೋಡಿದವರಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ.
ತಮಿಳು ಹಾಗೂ ತೆಲಗು ಸಿನಿಮಾದಲ್ಲಿ ಮಾತ್ರ ಅಭಿನಯಿಸುವ ನಯನ್‌ತಾರಾ ಈ ಎರಡು ಭಾಷೆಯಲ್ಲಿ ಮಾತ್ರ ಡಬಲ್ ರೋಲ್ ಮಾಡುವ ಆಸೆಯಿತ್ತಂತೆ. Airaa ಚಿತ್ರದಲ್ಲಿ ಪಾತ್ರದ ಹೆಸರು ಭವಾನಿ ಹಾಗೂ ಯಮುನಾ ಎಂದ ತಿಳಿದು ಬಂದಿದೆ.
ಇನ್ನು ಕೆ.ಮ್. ಸರ್ಜುನ್ ನಿರ್ದೇಶನದ ಈ ಚಿತ್ರ ಏಪ್ರಿಲ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಟ್ರೈಲರ್ ರಿಲೀಸ್ ಆದ ನಂತರ ಕೆಲವೊಂದು ಫೋಟೋ ರಿವೀಲ್ ಮಾಡಲಾಗಿತ್ತು. ಇದನ್ನು ನೋಡಿದವರೂ ಅಬ್ಬಾ....! ಇದು ನಯನ್‌ತಾರಾನಾ ಎಂದು ತಮಗೆ ತಾವೇ ಪ್ರಶ್ನಿಸಿಕೊಂಡಿದ್ದಾರೆ.
ಕನ್ನಡದಲ್ಲಿ ಉಪೇಂದ್ರ ಅವರೊಂದಿಗೆ ನಯನ್‌ತಾರಾ 'ಸೂಪರ್' ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.