
ಮುಂಬೈ (ಫೆ. 11): ಸಲ್ಮಾನ್ ಖಾನ್ ಅಭಿನಯದ ’ದಬಾಂಗ್’ ಚಿತ್ರದ ಮುನ್ನಿ ಬದ್ನಾಮ್ ಹುಯಿ ಸಾಂಗನ್ನು ಯಾರು ಕೇಳಿಲ್ಲ ಹೇಳಿ. ಈ ಹಾಡಲ್ಲಿ ಮಲೈಕಾ ಅರೋರಾ ಅದ್ಭುತವಾಗಿ ಸೊಂಟ ಬಳುಕಿಸಿದ್ದರು. ದಬಾಂಗ್ - 3 ಯಲ್ಲೂ ಮಲೈಕಾ ಸೊಂಟ ಬಳುಕಿಸಲು ರೆಡಿಯಾಗಿದ್ದರು. ಆದರೆ ಅವರನ್ನು ದಬಾಂಗ್ -3 ಯಿಂದ ಕೈ ಬಿಡಲಾಗಿದೆ. ಖುದ್ದು ಸಲ್ಮಾನ್ ಖಾನ್ ಅವರೇ ಮಾಜಿ ಅತ್ತಿಗೆಗೆ ಗೇಟ್ ಪಾಸ್ ನೀಡಿದ್ದಾರೆ ಎನ್ನಲಾಗಿದೆ.
ಮಲೈಕಾ ಅರೋರ- ಅರ್ಬಜ್ ಖಾನ್ ವಿಚ್ಛೇದನವಾಗಿದೆ. ಅಂದಿನಿಂದ ಸಲ್ಮಾನ್ ಗೂ ಮಲೈಕಾ ಅಷ್ಟಕ್ಕಷ್ಟೇ ಆಗಿದೆ. ಅದೇ ಕಾರಣಕ್ಕೆ ಮಾಜಿ ಅತ್ತಿಗೆಗೆ ಸಲ್ಮಾನ್ ಖಾನ್ ಗೇಟ್‌ಪಾಸ್ ನೀಡಿದ್ದಾರೆ ಎನ್ನಲಾಗಿದೆ. ಮಲೈಕಾ ಜಾಗಕ್ಕೆ ಸೊಂಟ ಬಳುಕಿಸಲು ಕರೀನಾಗೆ ಆಫರ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಮಲೈಕಾಗೆ ಡಿವೋರ್ಸ್ ಕೊಟ್ಟ ಬಳಿಕ ಅರ್ಬಜ್ ಜಾರ್ಜಿಯಾ ಎಂಬುವವರನ್ನು ಪ್ರೀತಿಸುತ್ತಿದ್ದಾರೆ. ಜಾರ್ಜಿಯಾಗೂ ದಬಾಂಗ್-3 ಯಲ್ಲಿ ವಿಶೇಷ ಪಾತ್ರ ನೀಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.