ಕೊರೋನಾದಿಂದ ಗುಣಮುಖರಾಗಿ ಮನೆಗೆ ಮರಳಿದ ಅಕ್ಷಯ್

Published : Apr 12, 2021, 11:51 PM ISTUpdated : Apr 12, 2021, 11:57 PM IST
ಕೊರೋನಾದಿಂದ ಗುಣಮುಖರಾಗಿ ಮನೆಗೆ ಮರಳಿದ ಅಕ್ಷಯ್

ಸಾರಾಂಶ

ಕೊರೋನಾ ಸೋಂಕಿನಿಂದ ಅಕ್ಷಯ್ ಕುಮಾರ್ ಗುಣಮುಖ/ ಮನೆಗೆ ಮರಳಿದ ಬಾಲಿವುಡ್ ನಟ/ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದ್ದರು/ ಅಕ್ಷಯ್ ಕುಮಾರ್ ಅವರು ರಾಮ್ ಸೇತು ಶೂಟಿಂಗ್ ನಲ್ಲಿದ್ದರು

ಮುಂಬೈ (ಏ. 12) ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರಾಗಿ ಮನೆಗೆ ಬಂದಿರುವುದು  ಸಂತಸ ತಂದಿದೆ ಎಂದು ಪತ್ನಿ ಟ್ವಿಂಕಲ್ ಖನ್ನಾ ತಿಳಿಸಿದ್ದಾರೆ. 

ನಟ ಅಕ್ಷಯ್ ಕುಮಾರ್ ಅವರಿಗೆ COVID-19 ಪಾಸಿಟಿವ್ ದೃಢಪಟ್ಟಿತ್ತು. ಅಕ್ಷಯ್ ಕುಮಾರ್ ಅವರು ಕೊರೋನಾ ಪರೀಕ್ಷೆ ಮಾಡಿದ್ದು, ಪಾಸಿಟಿವ್ ಬಂದಿರುವುದಾಗಿ ಟ್ವೀಟ್ ಮಾಡಿದ್ದರು.

ರಾಮಸೇತು ಚಿತ್ರದ ಅನೇಕ ಕಲಾವಿದರಿಗೆ ಕೊರೋನಾ

ಕೊರೋನಾ ಜಾಗೃತಿಯಲ್ಲಿಯೂ ಅಕ್ಷಯ್ ಕುಮಾರ್  ಪಾಲ್ಗೊಂಡಿದ್ದರು.  ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದ್ದರು. ಅಕ್ಷಯ್ ಕುಮಾರ್ ಶೂಟಿಂಗ್ ನಲ್ಲಿಯೂ ಪಾಲ್ಗೊಂಡಿದ್ದರು. 

ಅಕ್ಷಯ್ ಕುಮಾರ್ ಅವರು ರಾಮ್ ಸೇತು ಶೂಟಿಂಗ್ ವೇಳಾಪಟ್ಟಿಯಲ್ಲಿ ನಿರತರಾಗಿದ್ದ ಸಮಯದಲ್ಲಿ ಕೊರೋನಾ ಪಾಸಿಟಿವ್ ಬಂದಿತ್ತು. ಇದರಲ್ಲಿ ಅವರು ಪುರಾತತ್ವಶಾಸ್ತ್ರಜ್ಞನ ಪಾತ್ರ ಮಾಡಲಿದ್ದಾರೆ. ಕಳೆದ ತಿಂಗಳು ಅಕ್ಷಯ್ ಸಹನಟಿರಾದ ನುಸ್ರತ್ ಬರುಚ್ಚಾ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರೊಂದಿಗೆ ಅಯೋಧ್ಯೆಗೆ ಪ್ರಯಾಣಿಸಿ ಮುಹೂರ್ತ ಪೂಜೆಯಲ್ಲಿ ಪಾಲ್ಗೊಂಡಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?