
ಸ್ಯಾಂಡಲ್‌ವುಡ್ ಅಂಗಳದಲ್ಲಿ ಇತ್ತೀಚೆಗೆ ಸೂಪರ್ ಹಿಟ್ ದಾಖಲಿಸಿರುವ ಸಿನಿಮಾ ಎಂದರೆ ಅದು 'ಸು ಫ್ರಮ್ ಸೋ'. ರಾಜ್ ಬಿ ಶೆಟ್ಟಿ (Raj B Shetty) ಹಾಗೂ ಜೆಪಿ ತುಮ್ಮಿನಾಡು (JP Thuminad) ಜೋಡಿಯ ಸು ಪ್ರಮ್ ಸೋ (Su from So) ಚಿತ್ರವು ಕನ್ನಡ ಸಿನಿಪ್ರೇಕ್ಷಕರು ಮಾತ್ರವಲ್ಲ, ಇಡೀ ಭಾರತದ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಕನ್ನಡದ ಸಿನಿಮಾವೊಂದು ಕೆಜಿಎಫ್ ಹಾಗು ಕಾಂತಾರ ಬಳಿಕ ಈ ಮಟ್ಟಿಗೆ ಯಶಸ್ಸು ಸಾಧಿಸಿದ್ದು ಇಡೀ ಕನ್ನಡ ಚಿತ್ರರಂಗಕ್ಕೆ ಸಂತೋಷದ ಸಂಗತಿ. ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಈ ಚಿತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು.
ಅಕ್ಷಯ್ ಕುಮಾರ್ 'ಹೈವಾನ್' ಸಿನಿಮಾ ಸೆಟ್ಟಲ್ಲಿ ಸು ಫ್ರಮ್ ಸೋ ರಾಜ್ ಬಿ ಶೆಟ್ಟಿ ಮತ್ತು ಕಾರ್ಯಕಾರಿ ನಿರ್ಮಾಪಕರಾದ ಬಾಲು ಕುಮಟ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಇದೀಗ ಸಖತ್ ವೈರಲ್ ಆಗಿದೆ. ಸು ಫ್ರಮ್ ಸೋ ನೋಡಿ ಕೊಂಡಾಡಿದ ಅಕ್ಷಯ್ ಕುಮಾರ್, ಕಥೆ ಇದ್ರೆ ಹೇಳಿ ಸಿನ್ಮಾ ಮಾಡೋಣ ಅಂತ ರಾಜ್ ಬಿ ಶೆಟ್ಟಿ ಅವರನ್ನು ಕೇಳಿದ್ದಾರೆ ಎನ್ನಲಾಗಿದೆ. 'ಕಿಲಾಡಿ' ಖ್ಯಾತಿಯ ನಟ ಅಕ್ಷಯ್ ಕುಮಾರ್ ಅವರ ಈ ಮಾತು ಕನ್ನಡ ಚಿತ್ರರಂಗಕ್ಕೆ ಸಿಕ್ಕ ಟಾನಿಕ್ ಎನ್ನಬಹುದು.
ಸದ್ಯ ಅಕ್ಷಯ್ ಕುಮಾರ್ ಅವರು ಹೈವಾನ್ (Haiwan) ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಊಟಿಯಲ್ಲಿ ಚಿತ್ರೀಕರಣವಾಗ್ತಿರೋ ಹೈವಾನ್ ಚಿತ್ರವನ್ನ ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಿಸ್ತಿದ್ದು, ಪ್ರಿಯದರ್ಶನ್ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರದ ಬಗ್ಗೆ ಈಗಾಗಲೇ ಅಪಾರ ನಿರೀಕ್ಷೆ ಸೃಷ್ಟಿಯಾಗಿದೆ. ಅಕ್ಷಯ್ ಕುಮಾರ್ ಅವರಿಗೆ ಇತ್ತೀಚೆಗೆ ತೀರಾ ಸೂಪರ್ ಹಿಟ್ ಆಗಿರುವ ಸಿನಿಮಾದ ಗರಿಮೆ ಸಿಕ್ಕಿಲ್ಲ. ಹೀಗಾಗಿ ಹೈವಾನ್ ಮೇಲೆ ಅಕ್ಷಯ್ ಅಭಿಮಾನಿಗಳು ತುಂಬಾ ನಿರೀಕ್ಷೆ ಇಟ್ಟಿದ್ದಾರೆ.
'ಹೈವಾನ್' ಚಿತ್ರವು ನಿರೀಕ್ಷೆಯನ್ನೂ ಮೀರಿ ತುಂಬಾ ಚೆನ್ನಾಗಿ ಮೂಡಿಬರುತ್ತಿದ್ದು, ಬಿಗ್ ಬಜೆಟ್ ಮೂಲಕ ನಿರ್ಮಾಣ ಆಗುತ್ತಿದೆ ಎನ್ನಲಾಗಿದೆ. ಈ ಚಿತ್ರೆವು ಇದೇ ವರ್ಷ ತೆರೆಗೆ ಬರುವ ಗುರಿ ಹೊಂದಿದೆ. ಸದ್ಯಕ್ಕೆ ಹೈದ್ರಾಬಾದ್‌ನಲ್ಲಿ ಶೂಟಿಂಗ್ ನಡೆಸುತ್ತಿರುವ ಹೈವಾನ್ ಚಿತ್ರತಂಡ, ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿದೆ. 55 ವರ್ಷವಾಗಿದ್ದರೂ ನಟ ಅಕ್ಷಯ್ ಕುಮಾರ್ ಅವರು ಇನ್ನೂ ಫಿಟ್ ಅಂಡ್ ಪೈನ್ ಆಗಿದ್ದಾರೆ ಎಂಬುದು ಹಲವರ ಅಚ್ಚರಿಗೆ ಕಾರಣವಾಗಿರುವ ಸಂಗತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.