ರಾಖಿ ಹಬ್ಬಕ್ಕೆ ತಂಗಿಗೆ ಅಕ್ಷಯ್ ಕುಮಾರ್ ಬಂಪರ್ ಗಿಫ್ಟ್.! ಹೊಸ ಸಿನಿಮಾ 'ರಕ್ಷಾ ಬಂಧನ್'

Suvarna News   | Asianet News
Published : Aug 03, 2020, 03:07 PM ISTUpdated : Aug 03, 2020, 03:17 PM IST
ರಾಖಿ ಹಬ್ಬಕ್ಕೆ ತಂಗಿಗೆ ಅಕ್ಷಯ್ ಕುಮಾರ್ ಬಂಪರ್ ಗಿಫ್ಟ್.! ಹೊಸ ಸಿನಿಮಾ 'ರಕ್ಷಾ ಬಂಧನ್'

ಸಾರಾಂಶ

ಜಗತ್ತಿನ ಸುಂದರ ಸಂಬಂಧಗಳಲ್ಲಿ ಒಂದಾದ ಅಣ್ಣ-ತಂಗಿ ಸಂಬಂಧವನ್ನು ಸಂಭ್ರಮಿಸುವ ರಕ್ಷಾ ಬಂಧನದ ದಿನವೇ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ತಮ್ಮ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಸಿನಿಮಾ ಹೆಸರೂ ರಕ್ಷಾ ಬಂಧನ..!

ಜಗತ್ತಿನ ಸುಂದರ ಸಂಬಂಧಗಳಲ್ಲಿ ಒಂದಾದ ಅಣ್ಣ-ತಂಗಿ ಸಂಬಂಧವನ್ನು ಸಂಭ್ರಮಿಸುವ ರಕ್ಷಾ ಬಂಧನದ ದಿನವೇ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ತಮ್ಮ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಸಿನಿಮಾ ಹೆಸರೂ ರಕ್ಷಾ ಬಂಧನ..!

ನನ್ನ ಸಿನಿ ಜರ್ನಿಯಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಯೋಚಿಸಿ ಸೈನ್ ಮಾಡಿರುವ ಸಿನಿಮಾ ಎಂದು ಅಕ್ಷಯ್ ರಕ್ಷಾ ಬಂಧನ್ ಬಗ್ಗೆ ಹೇಳಿದ್ದಾರೆ. ನಿರ್ದೇಶಕ ಆನಂದ್ ಎಲ್ ರೈ ಸಿನಿಮಾ ನಿರ್ದೇಶಿಸುತ್ತಿದ್ದು, ಹಿಮಾಂಶು ಶರ್ಮಾ ಕಥೆ ಬರೆದಿದ್ದಾರೆ.

ಹೇಗಿದ್ದರು ನೋಡಿ ಬಾಲಿವುಡ್‌ನ ಈ ಸ್ಟಾರ್‌ಗಳು - ಥ್ರೋಬ್ಯಾಕ್‌ ಫೋಟೋಗಳು

ಅಕ್ಷಯ್ ಈ ಸಿನಿಮಾವನ್ನು ತಂಗಿ ಅಲ್ಕಾಗೆ ಡೆಡಿಕೇಟ್ ಮಾಡಿದ್ದಾರೆ. ಧನುಷ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ಆನಂದ್‌ ರೈ ಅವರ 'ಅತ್ರಾಂಗಿ ರೇ' ಸಿನಿಮಾದಲ್ಲಿಯೂ ಅಕ್ಷಯ್ ಕಾಣಿಸಿಕೊಳ್ಳಲಿದ್ದಾರೆ.

ಹೊಸ ಸಿನಿಮಾ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಅಕ್ಷಯ್ ಕುಮಾರ್, ನಾನು ಬೇಗನೆ ಯಸ್ ಹೇಳಿದ ಸಿನಿಮಾ ರಕ್ಷಾ ಬಂಧನ್. ಈ ಸಿನಿಮಾ ನಿಮ್ಮ ಮನ ಮುಟ್ಟಿ ಬಿಡುತ್ತದೆ. ಇದು ನನ್ನ ಸಿನಿ ಜರ್ನಿಯಲ್ಲೇ ಅತಿ ಕಡಿಮೆ ಅವಧಿಯಲ್ಲಿ ಸೈನ್ ಮಾಡಿದ ಸಿನಿಮಾ ಎಂದಿದ್ದಾರೆ.

ಅಕ್ಷಯ್‌ - ರೇಖಾ ಲಿಂಕ್‌ ಅಪ್‌ ಸುದ್ದಿ ಕೇಳಿ ರವೀನಾ ಮಾಡಿದ್ದೇನು?

ಈ ಸಿನಿಮಾವನ್ನು ರಕ್ಷಾ ಬಂಧನ ದಿನ ಅಲ್ಕಾಗೆ ಡೆಡಿಕೇಟ್ ಮಾಡುತ್ತಿದ್ದೇನೆ. ಥಾಂಕ್ಯೂ ಆನಂದ್ ಎಲ್ ರೈ, ಇದು ತುಂಬಾ ಸ್ಪೆಷಲ್ ಎಂದು ಬರೆದಿದ್ದಾರೆ. ಆನಂದ್ ಎಲ್ ರೈ ನಿರ್ದೇಶಿಸುತ್ತಿದ್ದು, ಹಿಮಾಂಶು ಶರ್ಮಾ ಕಥೆ ನರೆದಿದ್ದಾರೆ. ಕಲರ್ ಯೆಲ್ಲೋ ಪ್ರೊಡಕ್ಷನ್ಸ್, ಸಿಪ್ಪಿ ಸಹಯೋಗದಲ್ಲಿ ಕೇಪ್‌ ಆಫ್ ಗುಡ್‌ ಫಿಲ್ಮ್ಸ್‌ ಸಿನಿಮಾ ನಿರ್ಮಿಸುತ್ತಿದ್ದಾರೆ.

2017ರಲ್ಲಿ ಅಕ್ಷಯ್ ಬಗ್ಗೆ ಮಾತನಾಡಿದ ಅಲ್ಕಾ, ಅಕ್ಷಯ್ ಜೊತೆಗಿದ್ದರೆ ಮಾತ್ರ ಅಪ್ಪ ಅಮ್ಮ ತಡ ರಾತ್ರಿ ಪಾರ್ಟಿ, ನೈಟ್‌ ಔಟ್‌ಗೆ ಹೋಗಲು ಒಪ್ಪುತ್ತಿದ್ದರು. ಆ ಸಂದರ್ಭ ಅಕ್ಷಯ್‌ಗೆ ತಮ್ಮ ಜೊತೆ ಬರುವವಂತೆ ಹೇಳುತ್ತಿದ್ದರು ಅಕ್ಷಯ್. ಆಗೆಲ್ಲಾ ಅಕ್ಷಯ್ ಅಲ್ಕಾ ಜೊತೆ ಹೋಗುತ್ತಿರಲಿಲ್ಲ. ಬದಲಾಗಿ ನೀನೇ ನಿನ್ನ ಬಗ್ಗೆ ಕಾಳಜಿ ವಹಿಸಬೇಕು ಎನ್ನುತ್ತಿದ್ದ ಎಂದಿದ್ದಾರೆ.

ಅಕ್ಷಯ್-ಪ್ರಿಯಾಂಕಾ ಅಫೇರ್: ಪತಿಯನ್ನು ಟ್ವಿಂಕಲ್ ಉಳಿಸಿಕೊಂಡಿದ್ದು ಹೀಗೆ..

ತಮ್ಮ ಮಗಳು ಸಿಮರ್ ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋದಾಗ ಅಕ್ಷಯ್ ಹೇಳಿದ ಮಾತಿನ ಮಹತ್ವ ತಿಳಿದಿದ್ದರು ಅಲ್ಕಾ.   ಸ್ವಾವಲಂಬಿಯಾಗಿರಲು ಕಲಿಸಿದ್ದೇ ಅಕ್ಷಯ್ ಕೊಟ್ಟ ದೊಡ್ಡ ಗಿಫ್ಟ್ ಎಂದಿದ್ದರು ಅಲ್ಕಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!