
Akshay Kumar on Yash Toxic-Saif Ali Khan on Yash Toxic-Haivaan movie promotions-Venkat K Narayan producer: ಅಕ್ಷಯ್ ಕುಮಾರ್-ಸೈಫ್ ಅಲಿ ಖಾನ್ ನಟನೆಯ 'ಹೈವಾನ್' ಪ್ರಮೋಶನ್ ವೇದಿಕೆಯಲ್ಲಿ ಕನ್ನಡಿಗ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತು!
ಸದ್ಯಕ್ಕೆ ಜಗತ್ತಿನಲ್ಲಿ ಎಲ್ಲೇ ನೋಡಿದರೂ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ್ದೇ ಹವಾ ಇದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕನ್ನಡದ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ನಟನೆಯ ಟಾಕ್ಸಿಕ್ ಸಿನಿಮಾದ ನಿರ್ಮಾಪಕರು ಕೆವಿಎನ್ ಪ್ರೊಡಕ್ಷನ್‌ನ ವೆಂಕಟ್ ಕೆ. ನಾರಾಯಣ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ವೆಂಕಟ್ ಕೆ. ನಾರಾಯಣ ಅವರೊಂದಿಗೆ ಈ ಸಿನಿಮಾ ನಿರ್ಮಾಣದಲ್ಲಿ ಯಶ್ ಕೂಡ ಭಾಗಿಯಾಗಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ನಾಯಕತ್ವದ ಮತ್ತೊಂದು ಸಿನಿಮಾ 'ಹೈವಾನ್' (Haiwaan) ಅನ್ನೂ ಕೂಡ ಇದೇ ವೆಂಕಟ್ ಕೆ. ನಾರಾಯಣ ಅವರು ನಿರ್ಮಿಸಿದ್ದು, ಇತ್ತೀಚೆಗೆ ಈ ಸಿನಿಮಾದ ಪ್ರಚಾರಕಾರ್ಯ ಕೂಡ ನಡೆಯುತ್ತಿದೆ. ಈ ವೇಳೆ, ನಿರ್ಮಾಪಕರಾದ ವೆಂಕಟ್ ಕೆ ನಾರಾಯಣ ಅವರು ಬಾಲಿವುಡ್ ಅಂಗಳ ಮುಂಬೈನಲ್ಲಿ ಹೈವಾನ್ ಸಿನಿಮಾದ ಪ್ರಚಾರ ಮಾಡುತ್ತಿರುವ ವೇಳೆ ಅವರೊಂದಿಗೆ ವೇದಿಕೆಯಲ್ಲಿದ್ದ ನಟ ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿ ಖಾನ್ ಅವರುಗಳು ಕೂಡ ತಮ್ಮ ನಿರ್ಮಾಪಕರ ಸಿನಿಮಾ 'ಟಾಕ್ಸಿಕ್' ಬಗ್ಗೆಯೂ ಮಾತನ್ನಾಡಿ ದೊಡ್ಡತನ ಮೆರೆದು ಮೆಚ್ಚುಗೆ ಪಡೆದಿದ್ದಾರೆ.
'ಹೈವಾನ್' ಚಿತ್ರದ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರ ಜೊತೆ ನಟರಾದ ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿ ಖಾನ್ ವೇದಿಕೆಯಲ್ಲಿದ್ದರು. ಈ ವೇಳೆ ನಟ ಅಕ್ಷಯ್ ಕುಮಾರ್ ಅವರು ವೆಂಕಟ್ ಅವರನ್ನು ತೋರಿಸಿ ಹೆಗಲ ಮೇಲೆ ಕೈ ಹಾಕಿ 'ಇವರು ಟಾಕ್ಸಿಕ್ ಸಿನಿಮಾ ನಿರ್ಮಾಪಕರು ಕೂಡ' ಎಂದು ಹೇಳಿದ್ದಾರೆ. ಅದೇ ವೇಳೆ, ವೆಂಕಟ್ ಅವರ ಇನ್ನೊಂದು ಪಕ್ಕದಲ್ಲಿ ಹೆಗಲ ಮೇಲೆ ಕೈಹಾಕಿ ನಿಂತಿದ್ದ ನಟ ಸೈಫ್ ಅಲಿ ಖಾನ್ ಅವರು 'ಗುಡ್ ಲಕ್ ಯಾರ್' ಎಂದು ವಿಶ್ ಮಾಡಿದ್ದಾರೆ. ಈ ಬಾಲಿವುಡ್ ನಟರ ಈ ನಡೆ ಸೋಷಿಯಲ್ ಮೀಡಿಯಾಗಲ್ಲಿ ಭಾರಿ ಮೆಚ್ಚುಗೆ ಗಳಿಸುತ್ತಿದೆ.
ಅಂದಹಾಗೆ, ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ನಟನೆಯ 'ಹೈವಾನ್' (Haiwaan) ಸಿನಿಮಾವು ಸೆಪ್ಟೆಂಬರ್ 11, 2026 ರಂದು ವಿಶ್ವದಾದ್ಯಂತ ಬಹಳಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಮುಖ್ಯ ವಿವರಗಳು ಹೀಗಿವೆ-
ಜೋನರ್: ಸಸ್ಪೆನ್ಸ್ ಥ್ರಿಲ್ಲರ್
ನಿರ್ದೇಶನ: ಪ್ರಿಯದರ್ಶನ್
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಥೆಸ್ಪಿಯನ್ ಫಿಲ್ಮ್ಸ್
ತಾರಾಗಣ: ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್, ಶ್ರಿಯಾ ಪಿಲ್ಗಾಂವ್ಕರ್, ಸೈಯಾಮಿ ಖೇರ್, ಬೊಮನ್ ಇರಾನಿ
ಒಟ್ಟಿನಲ್ಲಿ, ಕೆವಿಎನ್ ಸಂಸ್ಥೆಯ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರ ಟಾಕ್ಸಿಕ್ ಸಿನಿಮಾ 26 ಆಗಸ್ಟ್ 2026ರಂದು ಬಿಡುಗಡೆ ಆಗುತ್ತಿದೆ. ಜೊತೆಗೆ, 2 ವಾರಗಳ ಬಳಿಕ, ಅಂದರೆ 11 ಸೆಪ್ಟೆಂಬರ್ 2026ರಂದು ಅಕ್ಷಯ್ ಕುಮಾರ್ ನಟನೆಯ 'ಹೈವಾನ್' ತೆರೆಗೆ ಬರಲಿದೆ, ಈ ಎರಡೂ ಸಿನಿಮಾಗಳೂ ಬಿಗ್ ಬಜೆಟ್ ಸಿನಿಮಾಗಳೇ ಎಂಬುದು ವಿಶೇಷ. ಹೈವಾನ್ ಬಜೆಟ್ 110 ರಿಂದ 115 ಕೋಟಿ ಬಜೆಟ್ ಸಿನಿಮಾ. ಆದರೆ, ಯಶ್ ನಟನೆಯ ಟಾಕ್ಸಿಕ್ ಸಿನಿಮಾ 600 ಕೋಟಿ ಬಜೆಟ್ ಹೊಂದಿರುವ ಪ್ಯಾನ್ ವರ್ಲ್ಡ್ ಸಿನಿಮಾ ಎಂಬುದು ಕನ್ನಡಿಗರ ಪಾಲಿಗೆ ಇನ್ನೂ ವಿಶೇಷ ಸಂಗತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.