ಚೀನಾ ದಾಳಿ: ಗಲ್ವಾನ್ ಕಣಿವೆಯಲ್ಲಿ ಯೋಧರ ತ್ಯಾಗದ ಬಗ್ಗೆ ಅಜಯ್ ದೇವಗನ್ ಸಿನಿಮಾ..!

By Suvarna NewsFirst Published Jul 4, 2020, 2:07 PM IST
Highlights

ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಯೋಧರಿಗೆ ಗೌರವಪೂರ್ವಕವಾಗಿ ಸಿನಿಮಾವೊಂದು ಬಾಲಿವುಡ್‌ನಲ್ಲಿ ತಯಾರಾಗಲಿದೆ. ಇಲ್ಲಿದೆ ಡೀಟೇಲ್ಸ್

ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಯೋಧರಿಗೆ ಗೌರವಪೂರ್ವಕವಾಗಿ ಸಿನಿಮಾವೊಂದು ಬಾಲಿವುಡ್‌ನಲ್ಲಿ ತಯಾರಾಗಲಿದೆ. ನಟ ಅಜಯ್ ದೇವಗನ್ ಅವರು ಈ ಘಟನೆ ಬಗ್ಗೆ ಸಿನಿಮಾ ಮಾಡುವುದಕ್ಕೆ ಸಿದ್ಧರಾಗಿದ್ದಾರೆ.

ಗಲ್ವಾನ್ ಕಣಿವೆ ದಾಳಿ ಕುರಿತ ಸಿನಿಮಾಗೆ ಇನ್ನೂ ಹೆಸರು ಅಂತಿಮಗೊಳಿಸಿಲ್ಲ. ಈ ಪ್ರಾಜೆಕ್ಟ್‌ನ್ನು ಅಜಯ್ ದೇವಗನ್ ಎಫ್ ಫಿಲ್ಮ್ಸ್ ನಿರ್ಮಿಸಲಿದ್ದಾರೆ. ಸಿನಿಮಾದಲ್ಲಿ ನಟಿಸುವವರ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನವಾಗದ ಹಿನ್ನೆಲೆಯಲ್ಲಿ ಅಜಯ್ ನಟಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.

ವೃತ್ತಿ ಮತ್ಸರ, ಸರೋಜ್‌ ಖಾನ್‌ ಜೊತೆ ಮಾತು ಬಿಟ್ಟಿದ್ದ ಶ್ರೀದೇವಿ

ಚಲನಚಿತ್ರ ಉದ್ಯಮ ವಿಶ್ಲೇಷಕ ತರನ್ ಆದರ್ಶ್ ಈ ಸಿನಿಮಾ ಬಗ್ಗೆ ಟ್ವಿಟರ್ ಮೂಲಕ ಸುಳಿವು ಕೊಟ್ಟಿದ್ದಾರೆ. ಇದು ಅಧಿಕೃತ, ಗಲ್ವಾನ್ ಕಣಿವೆ ದಾಳಿ ಬಗ್ಗೆ ಅಜಯ್ ಸಿನಿಮಾ ಮಾಡುತ್ತಿದ್ದಾರೆ, ಸಿನಿಮಾಗೆ ಇನ್ನೂ ಟೈಟಲ್ ಫಯನಲ್ ಆಗಿಲ್ಲ, ಈ ಸಿನಿಮಾ 20 ಯೋಧರ ತ್ಯಾಗವನ್ನು ತೋರಿಸಲಿದೆ, ನಟರ ಬಗ್ಗೆಯೂ ಅಂತಿಮ ತೀರ್ಮಾನವಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಜೂನ್ 15ರಂದು ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಜೊತೆಗಿನ ದಾಳಿಯಲ್ಲಿ 20 ಯೋಧರು ಹುತಾತ್ಮರಾಗಿದ್ದರು.ಕೆಲವರನ್ನು ನದಿಗೂ ತಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು. ಕೆಲವು ಯೋಧರ ಪಾರ್ಥಿವ ಶರೀರ ನದಿಯಿಂದ ಸಿಕ್ಕಿತ್ತು.

ಚೀನಾಕ್ಕೆ ಭಾರತ ಸಡ್ಡು: ಗಲ್ವಾನ್‌ಗೆ ಭೀಷ್ಮ ಟ್ಯಾಂಕರ್!

ಈ ಸಿನಿಮಾ ಅಲ್ಲದೆ ಸಂಜಯ್, ಭುಜ್: ಪ್ರೈಡ್ ಆಫ್ ಇಂಡಿಯಾ ಸಿನಿಮಾವನ್ನು ಮಾಡುತ್ತಿದ್ದಾರೆ. ಇದರಲ್ಲಿ ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ಅಮ್ಮಿ ವಿರಾಕ್, ಶರದ್ ಕೆಲ್ಕಾರ್ ನಟಿಸುತ್ತಿದ್ದಾರೆ.

click me!