ನಟ- ನಿರ್ದೇಶಕ ಲಿಪ್‌ಪಾಕ್‌; ಗಂಡಸರು ಚುಂಬಿಸೋದ ನೋಡಿ ನೆಟ್ಟಿಗರು ಶಾಕ್!

Suvarna News   | Asianet News
Published : Jul 04, 2020, 12:12 PM ISTUpdated : Jul 04, 2020, 12:14 PM IST
ನಟ- ನಿರ್ದೇಶಕ ಲಿಪ್‌ಪಾಕ್‌; ಗಂಡಸರು ಚುಂಬಿಸೋದ ನೋಡಿ ನೆಟ್ಟಿಗರು ಶಾಕ್!

ಸಾರಾಂಶ

ಸಿನಿಮಾದಲ್ಲಿ ಹೀರೋ-ಹೀರೋಯಿನ್ ಲಿಪ್‌ಲಾಕ್ ಮಾಡುವುದು ತುಂಬಾ ಕಾಮನ್. ಆದರೆ ಇಲ್ಲಿ ಹೀರೋ - ನಿರ್ದೇಶಕ ಇಂಥದ್ದೊಂದು ಕೆಲಸ ಮಾಡಿದ್ದಕ್ಕೆ ವಿವಾದ ಸೃಷ್ಟಿಯಾಗಿದೆ. ಸಮರ್ಥಿಸಿಕೊಳ್ಳಲು ನಿರ್ಮಾಪಕರು ಕೊಟ್ಟ ಹೇಳಿಕೆಗೆ ನೆಟ್ಟಿಗರು ಶಾಕ್ ಆಗಿದ್ದಾರೆ.

ಇತ್ತೀಚಿಗೆ ಒಟಿಟಿಯಲ್ಲಿ ಬಿಡುಗಡೆಯಾದ 'ಕೃಷ್ಣ ಆ್ಯಂಡ್ ಹಿಸ್ ಲೀಲಾ' ಸಿನಿಮಾ ದಿನೆ ದಿನೇ ವಿವಾದದ ಸುಳಿಯಲ್ಲಿದೆ. ಯು-ಟರ್ನ್ ಚಿತ್ರದ ನಟಿ ಶ್ರದ್ಧಾ ಶ್ರೀನಾಥ್‌ ನಾಯಕಿಯಾಗಿ ಮಿಂಚಿರುವ ಈ ಸಿನಿಮಾದಲ್ಲಿ, ಅನೇಕ ದೃಶ್ಯಗಳು ಧಾರ್ಮಿಕ ವಿಚಾರಕ್ಕೆ ಧಕ್ಕೆ ತರುವಂತಿದ್ದು, ಚರ್ಚೆ ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ ನಟ- ನಿರ್ದೇಶಕನ ಲಿಪ್‌ಲಾಕ್‌ ಫೋಟೋ ಕೂಡ ವೈರಲ್ ಆಗುತ್ತಿದೆ. 

ಏನಿದು ಫೋಟೋ?:
2017ರಿಂದ ಸಿಧು ಮತ್ತು ರೆವಿಕಾಂತ್ ಒಟ್ಟಾಗಿ ಕೆಲಸ ಮಾಡುತ್ತಿದ್ದ ಕಾರಣ ಆತ್ಮೀಯ ಬಾಂಧವ್ಯ ಹೊಂದಿದ್ದಾರೆ. ಒಟಿಟಿಯಲ್ಲಿ ತಮ್ಮ ಸಿನಿಮಾ ಯಶಸ್ಸನ್ನು ಕಂಡ ಸಿಧು ನಿರ್ಮಾಪಕರ ಜೊತೆ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ಪೋಟೋದಲ್ಲಿ ಇಬ್ಬರು ಲಿಪ್‌ಲಾಕ್‌ ಮಾಡಿರುವುದು ವೈರಲ್ ಅಗುತ್ತಿದೆ.

'ಇದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಫೋಟೋನಾ? ಗಂಡಸರೇ ಹೀಗೆ ಮುತ್ತು ಕೊಟ್ಟರೆ ಏನು ಕಥೆ?' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ದಿನೆ ದಿನೇ ಚರ್ಚೆ ಹೆಚ್ಚಾಗಿ ಇವರನ್ನು ಸಲಿಂಗಿಗಳು ಎಂದು ಜನರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಆಗ ನಿರ್ಮಾಪಕ ರವಿಕಾಂತ್ ಗರಂ ಆಗಿದ್ದಾರೆ. ಗಾಸಿಪ್ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಿಂದೂ ಭಾವನೆಗೆ ಧಕ್ಕೆ,  'ಕೃಷ್ಣಾ ಎಂಡ್ ಹಿಸ್ ಲೀಲಾ'ದಲ್ಲಿ ಇರುವ  ಅಂಥ ದೃಶ್ಯ ಏನು?

ರವಿಕಾಂತ್ ಕ್ಲಾರಿಟಿ:
ತಮ್ಮ ಚಿತ್ರದ ಬಗ್ಗೆ ಹುಟ್ಟಿಕೊಂಡಿರುವ ವಿವಾದಗಳಿಂದ ಬೇಸತ್ತ ನಿರ್ದೇಶಕ ರವಿಕಾಂತ್ ಸ್ಪಷ್ಟನೆ ನೀಡಿದ್ದಾರೆ. 'ನಮ್ಮ ಸಿನಿಮಾ ಪಬ್ಲಿಸಿಟಿಗೆ ನಾವು ಇದನ್ನು ಮಾಡಬೇಕಿಲ್ಲ. ಇದು ಪಬ್ಲಿಸಿಟಿ ಫೋಟೋ ಅಲ್ಲವೇ ಅಲ್ಲ. ಮೂರು ವರ್ಷಗಳ ಕಠಿಣ ಶ್ರಮಕ್ಕೆ ಸಂಭ್ರಮವಷ್ಟೇ. ಇಷ್ಟೆಲ್ಲಾ ಕಷ್ಟ ಪಟ್ಟಿದ್ದ ಇಬ್ಬರೂ ಭಾವುಕರಾದೆವು. ಈ ಸಮಯದಲ್ಲಿ ಈ ರೀತಿ ಚುಂಬಿಸಿದ್ದು. ಇದನ್ನು ವೈಭವೀಕರಿಸುವ ಅಗತ್ಯವೇ ಇಲ್ಲ' ಎಂದು ಉತ್ತರ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!