
ಈಗಾಗಲೇ ತೆಲುಗು ಮತ್ತು ತಮಿಳಿಗೆ ಇದರ ಡಬ್ಬಿಂಗ್ ರೈಟ್ಸ್ ಮಾರಾಟ ಆಗಿದೆ. ಇದರ ಹಿಂದಿ ರಿಮೇಕ್ ವರ್ಷನ್‌ಗೆ ಬಾಲಿವುಡ್‌ನ ಜನಪ್ರಿಯ ನಟ ಅಜಯ್ ದೇವಗನ್ ಅಭಿನಯಿಸುತ್ತಿದ್ದಾರೆ ಎನ್ನುವ ಮಾಹಿತಿ ಚಿತ್ರ ತಂಡದಿಂದಲೇ ರಿವೀಲ್ ಆಗಿದೆ.
ಕಿಶೋರ್, ಪ್ರಿಯಾಮಣಿ ಹಾಗೂ ಮಯೂರಿ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ವಿನಯ್ ಬಾಲಾಜಿ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರ ತೆರೆ ಕಂಡು ಈಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ತೆಲುಗಿನ ‘ಸಾಹೋ’ ಚಿತ್ರದ ಆಗಮನದಿಂದ ಚಿತ್ರಮಂದಿರಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದ ಚಿತ್ರತಂಡ ಈಗ ನಿರಾಳವಾಗಿದೆ.
ಟ್ರೇಲರ್ ಹಾಗೂ ಟೀಸರ್ ನಿಂದ ಕುತೂಹಲ ಮೂಡಿಸಿತ್ತು 'ನನ್ನ ಪ್ರಕಾರ'!
ಎರಡು ದಿನಗಳ ಏರಿಳಿತದ ನಂತರ ಮತ್ತೆ ಎಲ್ಲಾ ಕಡೆ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆಯಂತೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗುತ್ತಿದೆ. ‘‘ಸಾಹೋ’ ಚಿತ್ರಕ್ಕೆ ಸಾಕಷ್ಟು ಚಿತ್ರಮಂದಿರಗಳು ಮುಕ್ತ ಅವಕಾಶ ನೀಡಿದ ಕಾರಣಕ್ಕೆ, ನಮ್ಮ ಚಿತ್ರದ ಪ್ರದರ್ಶನವೇ ಅಲ್ಲಿ ಇಲ್ಲದಂತಾಗಿತ್ತು. ಈಗ ಪರಿಸ್ಥಿತಿ ತಿಳಿ ಆಗಿದೆ. ಆತಂಕ ದೂರವಾಗಿದೆ. ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ನಡುವೆಯೇ ಚಿತ್ರದ ಹಿಂದಿ ರಿಮೇಕ್ ಹಕ್ಕುಗಳ ಖರೀದಿಗೆ ಅಲ್ಲಿನ ಒಂದು ಸಂಸ್ಥೆ ಮುಂದೆ ಬಂದಿದೆ. ಮಾತುಕತೆ ಬಹುತೇಕ ಫೈನಲ್ ಹಂತಕ್ಕೆ ಬಂದಿದೆ’ ಎನ್ನುತ್ತಾರೆ ನಿರ್ದೇಶಕ ವಿನಯ್ ಬಾಲಾಜಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.