ರಶ್ಮಿಕಾ ಮದುವೆ: ನ್ಯಾಷನಲ್‌ ಕ್ರಶ್‌ ರೇಸ್‌ನಲ್ಲಿ ಇಬ್ಬರು ಕನ್ನಡತಿಯರ ಎಂಟ್ರಿ! ಯಾರಾಗ್ತಾರೆ ಮುಂದಿನ ನ್ಯಾಷನಲ್ ಕ್ರಶ್?

Published : Feb 20, 2026, 06:40 PM IST
Rukmini Vasanth

ಸಾರಾಂಶ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮದುವೆಯ ನಂತರ, ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ರೇಸ್‌ನಲ್ಲಿ 'ಕಾಂತಾರ' ಖ್ಯಾತಿಯ ರುಕ್ಮಿಣಿ ವಸಂತ್ ಮತ್ತು ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಶ್ರೀಲೀಲಾ ಮುಂಚೂಣಿಯಲ್ಲಿದ್ದಾರೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಇದೇ 26ನೇ ತಾರೀಖು ಹಸೆಮಣೆ ಏರ್ತಾ ಇರೋದು, ಗೃಹಿಣಿಯಾಗಿ ಬಡ್ತಿ ಪಡೀತಿರೋದು ಗೊತ್ತೇ ಇದೆ. ರಶ್ಮಿಕಾ ಮದುವೆಯಾಗಿ ಹೋದ ಬಳಿಕ ಆ ಸ್ಥಾನ ತುಂಬೋದು ಯಾರು ಅನ್ನೋ ಚರ್ಚೆ ಈಗಾಗ್ಲೇ ಶುರುವಾಗಿದೆ. ಮತ್ತು ಆ ಸ್ಥಾನಕ್ಕೆ ಇಬ್ಬರು ಕನ್ನಡತಿಯರೇ ರೇಸ್​ನಲ್ಲಿರೋದು ವಿಶೇಷ.

ರಶ್ಮಿಕಾ ಸ್ಥಾನ ತುಂಬಲಿರೋ ನಟಿಮಣಿ ಯಾರು..?

ಯೆಸ್, ಫೆಬ್ರುವರಿ 26ನೇ ತಾರೀಖು ನ್ಯಾಷನಲ್ ಕ್ರಶ್ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಹಸೆಮಣೆ ಏರ್ತಾ ಇದ್ದಾರೆ. ಮದುವೆ ಬಳಿಕ ನಟನೆ ಮುಂದುವರೆಸಲಿದ್ದಾರಾದ್ರೂ, ಮೊದಲಿನಷ್ಟು ಆಕ್ಟಿವ್ ಆಗಿರೋದಕ್ಕೆ ಸಾಧ್ಯವಿಲ್ಲ ಅನ್ನೋದು ಗೊತ್ತೇ ಇದೆ. ಇವತ್ತಿನ ಮಟ್ಟಿಗೆ ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಮತ್ತು ಅತಿ ಹೆಚ್ಚು ಬಿಗ್ ಸಿನಿಮಾಗಳ ಆಫರ್​ಗಳಿರೋ ನಟಿ ಅಂದ್ರೆ ಅದು ರಶ್ಮಿಕಾನೇ. ಸೋ ರಶ್ಮಿಕಾ ಮದುವೆಯಾದ ಮೇಲೆ ಈ ಸ್ಥಾನ ತುಂಬೋರು ಯಾರು ಅನ್ನೋದೇ ಸದ್ಯ ಅಭಿಮಾನಿಗಳಲ್ಲಿರೋ ಕುತೂಹಲ.

ರುಕ್ಕು / ಲೀಲಾ. ರಶ್ಮಿಕಾ ಸ್ಥಾನ ತುಂಬೋದ್ಯಾರು?

ಹೌದು ಸದ್ಯ ಇಂಡಿಯನ್ ಸಿನಿದುನಿಯಾದಲ್ಲಿ ಕನ್ನಡತಿಯರದ್ದೇ ಹವಾ. ಬೆಂಗಳೂರು ಬೆಡಗಿ ದೀಪಿಕಾ ನಂ.1 ನಟಿಯಾಗಿದ್ದಾಗಲೇ ಹಸೆಮಣೆ ಏರಿದ್ರು. ಆ ಬಳಿಕ ಸ್ಥಾನ ತುಂಬಿದ್ದು ಕೊಡಗಿನ ಬೆಡಗಿ, ಕಿರಿಕ್ ಬ್ಯೂಟಿ ರಶ್ಮಿಕಾ. ಮತ್ತೀಗ ರಶ್ಮಿಕಾ ನಂತರ ಆ ಸ್ಥಾನ ತುಂಬೋ ರೇಸ್​ನಲ್ಲಿರೋದು ಕೂಡ ಇಬ್ಬರು ಕನ್ನಡತಿಯರೇ ಒಬ್ರು ಕಾಂತಾರದ ಮನಮೋಹಿನಿ ರುಕ್ಮಿಣಿ ವಸಂತ್ ಇನ್ನೊಬ್ರು ಕಿಸ್ ಬ್ಯೂಟಿ ಶ್ರೀಲೀಲಾ.

ಕನ್ನಡ ಸಿನಿರಂಗದಿಂದ ಕರೀಯರ್ ಶುರುಮಾಡಿದ ಶ್ರೀಲೀಲಾ ಈಗಾಗ್ಲೇ ಟಾಲಿವುಡ್ ನಲ್ಲಿ ವಿಜಯಪತಾಕೆ ಹಾರಿಸಿ ಬಾಲಿವುಡ್​ಗೂ ಕಾಲಿಟ್ಟಿದ್ದಾರೆ. ಇನ್ನೂ ರುಕ್ಮಿಣಿ ವಂಸತ್ ಕಾಂತಾರ ಚಾಪ್ಟರ್-1 ಮೂಲಕ ಪ್ಯಾನ್ ಇಂಡಿಯಾ ತನ್ನದೇ ಹವಾ ಸೃಷ್ಟಿಸಿಕೊಂಡಿದ್ದಾರೆ. ಯಶ್ ನಟನೆಯ ಟಾಕ್ಸಿಕ್, ಎನ್.ಟಿ.ಆರ್ ನಟನೆಯ ಡ್ರ್ಯಾಗನ್ ಸೇರಿದಂತೆ ರುಕ್ಕು ಕೈಯಲ್ಲಿ ಬಿಗ್ ಪ್ರಾಜೆಕ್ಟ್​ಗಳಿವೆ.

ಈ ಇಬ್ಬರಿಗೂ ದೊಡ್ಡ ದೊಡ್ಡ ಸಿನಿಮಾಗಳ ಆಫರ್ಸ್ ಹರಿದು ಬರ್ತಾ ಇವೆ. ಈ ಇಬ್ಬರೂ ಹೋಗ್ತಿರೋ ಸ್ಪೀಡ್ ನೋಡಿದ್ರೆ ರಶ್ಮಿಕಾ ಸ್ಥಾನ ತುಂಬೋದಕ್ಕೆ ಪೈಪೋಟಿಗೆ ಬಿದ್ದಂತೆ ಕಾಣ್ತಾ ಇದೆ.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್ ಶೆಟ್ಟಿ ಕಾರಣಕ್ಕೆ ಪ್ರಭಾಸ್ ಸಿನಿಮಾನೇ ಕೈಬಿಟ್ರಾ ಈ ಖ್ಯಾತ ನಿರ್ದೇಶಕ? ಈ ಘಟನೆಗೆ ಅಸಲಿ ಕಾರಣವೇನು?
Toxic Teaser: ಯಶ್ 'ಟಾಕ್ಸಿಕ್' ಟೀಸರ್‌ ನೋಡಿ ರಿಷಬ್ ಶೆಟ್ಟಿ ಫುಲ್ ಫಿದಾ; ಯೋಗರಾಜ್ ಭಟ್ ಹೇಳಿದ್ದೇನು?