
ದರ್ಶನ್‌ಗೆ ಇನ್ನೂ ಕೆಲವೇ ತಿಂಗಳಲ್ಲಿ ಬೇಲ್ ಸಿಕ್ಕುತ್ತೆ ಅನ್ನೋ ಸುದ್ದಿ ಒಂದು ಕಡೆ ಹರಿದಾಡ್ತಾ ಇದೆ. ಇನ್ನೊಂದು ಕಡೆ ಕೋರ್ಟ್ ವಿಚಾರಣೆ ಸಾಗ್ತಾ ಇರೋ ವೇಗ ನೋಡಿದ್ರೆ, ವರ್ಷಗಟ್ಟಳೇ ದಾಸ ಹೊರಬರೋದು ಡೌಟ್ ಅನ್ನೋದಾಗಿ ಕೂಡ ಕೋರ್ಟ್ ಅಂಗಳದಲ್ಲಿ ಚರ್ಚೆಯಾಗ್ತಾ ಇದೆ. ಈ ಎರಡರ ಪೈಕಿ ಯಾವುದು ಸತ್ಯ? ದಾಸ ಹೊರಬರೋದು ಯಾವಾಗ ಈ ಸ್ಟೋರಿ ನೋಡಿ.
ಯೆಸ್ ಇತ್ತೀಚಿಗೆ ದರ್ಶನ್ ರಿಲೀಸ್ ಆಗೋದು ಯಾವಾಗ ಅಂತ ಜೋರು ಚರ್ಚೆಯಾಗ್ತಾ ಇದೆ. ಕ್ರೇಜಿಸ್ಟಾರ್ ರವಿಚಂದ್ರನ್ , ಇನ್ನೆರಡು ತಿಂಗಳಲ್ಲಿ ದಾಸ ಹೊರಬರ್ತಾನೆ ನೋಡ್ತಾಯಿರಿ ಅಂದಿದ್ರು. ಚಿತ್ರರಂಗದಲ್ಲಿ ಒಬ್ಬೊಬ್ರೇ ದರ್ಶನ್ ರಿಲೀಸ್ ಆಗೋದ್ರ ಬಗ್ಗೆ ಮಾತನಾಡ್ತಾ ಇದ್ದಾರೆ. ಅತೀ ಶೀಘ್ರದಲ್ಲಿ ದರ್ಶನ್‌ಗೆ ಮತ್ತೆ ಬೇಲ್ ಸಿಕ್ಕುತ್ತೆ ಅಂತಿದ್ದಾರೆ.
ದರ್ಶನ್ ಪರ ವಕೀಲರು ಸಾಕ್ಷಿಗಳ ವಿಚಾರಣೆ ಮುಗೀತಾನೆ ಮತ್ತೆ ಬೇಲ್‌ಗೆ ಅರ್ಜಿ ಸಲ್ಲಿಸೋ ಅವಕಾಶ ಇದೆ ಅನ್ನೋ ಮಾತು ಹೇಳಿದ್ರು. ಆದ್ರೆ ರಿಯಾಲಿಟಿ ಏನಂದ್ರೆ ಈ ಕೇಸ್‌ನಲ್ಲಿ ಬರೊಬ್ಬರಿ 272 ಸಾಕ್ಷಿಗಳಿವೆ. ಇದೂವರೆಗೂ ಟ್ರಯಲ್ ಆರಂಭವಾದ ಒಂದು ತಿಂಗಳಲ್ಲಿ ಬರೀ 2 ಸಾಕ್ಷಿಗಳ ವಿಚಾರಣೆ ಮುಗಿದಿದೆ. ಹಾಗಾದ್ರೆ ಇನ್ನುಳಿದ 270 ಸಾಕ್ಷಿಗಳ ವಿಚಾರಣೆ ಯಾವಾಗ? ಮತ್ತೆ ಬೇಲ್‌ಗೆ ಅರ್ಜಿ ಸಲ್ಲಿಸೋದು ಯಾವಾಗ ಅನ್ನೋ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.
ಹೌದು ದರ್ಶನ್ ಮೊದಲ ಸಾರಿ ಬೇಲ್ ರದ್ದಾದ ಮೇಲೆ ಜೈಲ್ ಸೇರಿನೇ ಆರು ತಿಂಗಳಾಗ್ತಾ ಬಂತು. ಇನ್ನೂ ಎರಡೇ ಎರಡು ಸಾಕ್ಷಿಗಳ ವಿಚಾರಣೆ, ಪಾಟಿ ಸವಾಲು ಮುಗಿದಿದ್ದು, ಈ ಕೇಸ್ ಇನ್ನೆಷ್ಟು ಕಾಲ ನಡೀಬಹುದು ಅನ್ನೋ ಭೀತಿ ದರ್ಶನ್ ಬಳಗವನ್ನ ಕಾಡ್ತಾ ಇದೆ. ಈ ನಡುವೆ ದರ್ಶನ್ ಪರ ವಕೀಲರು ತ್ವರಿತವಾಗಿ ವಿಚಾರಣೆ ನಡೆಸುವಂತೆ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದಾರೆ. ಅದೆಷ್ಟೇ ತ್ವರಿತವಾಗಿ ವಿಚಾರಣೆ ಮಾಡಿದ್ರೂ ಇದು ವರ್ಷಗಳ ಕಾಲ ಮುಗಿಯೋ ಕೇಸ್ ಅಲ್ಲ ಅಂತಿದ್ದಾರೆ ಕಾನೂನು ಪಂಡಿತರು.
ಒಟ್ನಲ್ಲಿ ದರ್ಶನ್ ಬೇಲ್ ಭವಿಷ್ಯ ಬಗೆಹರಿಯದ ಪ್ರಶ್ನೆಯಾಗಿಬಿಟ್ಟಿದೆ. ದಾಸ ಹೊರಬರೋದು ಯಾವಾಗ ಮತ್ತೆ ಬಣ್ಣ ಹಚ್ಚೋದ್ಯಾವಾಗ ಅನ್ನೋದು ಉತ್ತರವಿರದ ಪ್ರಶ್ನೆಯಾಗಿಬಿಟ್ಟಿದೆ.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.