
ಕಾಸ್ಟಿಂಗ್ ಕೌಚ್ ಬಗ್ಗೆ ಬಾರಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅದಿತಿ ರಾವ್ ಇದೆಲ್ಲವನ್ನೂ ಬಿಟ್ಟು ಬಾಲಿವುಡ್‌ನ ಬೆಚ್ಚನೆಯ ಸ್ವಾಗತವನ್ನು ನೆನೆದು ಭಾವುಕರಾಗಿರುವುದು ಈಗ ಸಖತ್ ಸುದ್ದಿಯಾಗಿದೆ.
ಬಹುತೇಕರು ಸಿನಿಮಾ ರಂಗದಲ್ಲಿ ಹಾಗಿದೆ ಹೀಗಿದೆ. ನಟಿಯರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಹೊತ್ತಿನಲ್ಲಿ ‘ಪದ್ಮಾವತ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಪಡೆದುಕೊಂಡ ದಕ್ಷಿಣದ ಬೆಡಗಿಗೆ ಅಲ್ಲಿ ಉತ್ತಮ ಸ್ವಾಗತ ದೊರೆತಿದೆ. ಅದಕ್ಕಾಗಿಯೇ ಈಗ ಅದಿತಿ ಫುಲ್ ಖುಷ್ ಆಗಿ ನಾನು ಮುಂದೆ ಬಾಲಿವುಡ್‌ನಲ್ಲಿಯೇ ಸಾಕಷ್ಟು ಒಳ್ಳೆಯ ಸಿನಿಮಾ ಮಾಡಬೇಕು ಎಂದುಕೊಂಡಿರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ.
‘ಬಾಲಿವುಡ್‌ನಲ್ಲಿ ಹೇಗೋ ಏನೋ ಎಂದುಕೊಂಡ ನನಗೆ ಅಲ್ಲಿ ನನ್ನ ಅಭಿನಯ, ಪ್ರತಿಭೆಗೆ ಒಳ್ಳೆಯ ಪ್ರೋತ್ಸಾಹ ಸಿಕ್ಕಿದೆ. ಹಿರಿಯರನೇಕರು ನನ್ನನ್ನು ಗುರುತಿಸುತ್ತಿದ್ದಾರೆ. ಇದರಿಂದ ನನಗಂತೂ ತುಂಬಾ ಖುಷಿಯಾಗಿದೆ. ಕೆಲವರು ಏನೇನೋ ಹೇಳುತ್ತಾರೆ. ಅದೆಲ್ಲವೂ ಸತ್ಯ ಅಲ್ಲ. ಪ್ರತಿಭೆ ಇದ್ದರೆ ಎಲ್ಲರೂ ಪ್ರೋತ್ಸಾಹ ನೀಡಿಯೇ ನೀಡುತ್ತಾರೆ. ನನಗೆ ಈಗ ಸಿಕ್ಕಿರುವ ಅವಕಾಶದಿಂದ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇಲ್ಲಿಯೇ ಉಳಿಯುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. ಇದರಿಂದ ಕಾಸ್ಟಿಂಗ್ ಕೌಚ್ ಬಗ್ಗೆಯೇ ಚರ್ಚೆಯಾಗುತ್ತಿದ್ದ ಅಂಗಳದಲ್ಲಿ ಈಗ ಭಿನ್ನ ದನಿಯೊಂದು ಅದಿತಿ ಮೂಲಕ ಮೂಡಿದಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.