ಮಿಲಿಂದ್ ಸೋಮನ್ ಎನ್ನುವ ಫಿಟ್’ನೆಸ್ ಐಕಾನ್

First Published Apr 30, 2018, 6:01 PM IST
Highlights

‘ತಾಳ್ಮೆ ಬಹಳ ಮುಖ್ಯ. ಮೊದಲು ಆರೋಗ್ಯಕರ ಆಹಾರಪದ್ದತಿ ನಮ್ಮದಾಗಿಸಬೇಕು, ನಂತರ ಸಹಜವಾದ ವ್ಯಾಯಾಮ ಮಾಡಬೇಕು. ನಿಧಾನಕ್ಕೆ ದೇಹ ಫಿಟ್ ಆಗಿ ಆರೋಗ್ಯಕರವಾಗಿ ಬದಲಾಗುತ್ತದೆ. ಆದರೆ ಇದಕ್ಕೆ ಒಂದಿಷ್ಟು ಸಮಯ ಬೇಕು. ಅಲ್ಲಿಯವರೆಗೆ ಇದನ್ನೆಲ್ಲ ಪಾಲಿಸುವ ಸಹನೆ ನಮ್ಮಲ್ಲಿರಬೇಕು’ ಅಂತ ಸಹಜ ಫಿಟ್‌ನೆಸ್‌ನ ಗುಟ್ಟು  ಹೇಳ್ತಾರೆ ಮಿಲಿಂದ್.

‘ತಾಳ್ಮೆ ಬಹಳ ಮುಖ್ಯ. ಮೊದಲು ಆರೋಗ್ಯಕರ ಆಹಾರಪದ್ದತಿ ನಮ್ಮದಾಗಿಸಬೇಕು, ನಂತರ ಸಹಜವಾದ ವ್ಯಾಯಾಮ ಮಾಡಬೇಕು. ನಿಧಾನಕ್ಕೆ ದೇಹ ಫಿಟ್ ಆಗಿ ಆರೋಗ್ಯಕರವಾಗಿ ಬದಲಾಗುತ್ತದೆ. ಆದರೆ ಇದಕ್ಕೆ ಒಂದಿಷ್ಟು ಸಮಯ ಬೇಕು. ಅಲ್ಲಿಯವರೆಗೆ ಇದನ್ನೆಲ್ಲ ಪಾಲಿಸುವ ಸಹನೆ ನಮ್ಮಲ್ಲಿರಬೇಕು’ ಅಂತ ಸಹಜ ಫಿಟ್‌ನೆಸ್‌ನ ಗುಟ್ಟು  ಹೇಳ್ತಾರೆ ಮಿಲಿಂದ್.
 

ಜಿಮ್‌ಗೆ ಹೋಗಲ್ಲ, ಆದರೂ ಇಷ್ಟೆಲ್ಲ ಮಾಡ್ತಾರೆ!
1 ಅದು ಜುಲೈ 19 2015 ಅಷ್ಟರಲ್ಲಾಗಲೇ ಮಿಲಿಂದ್ ಕಠಿಣ ಟಾಸ್ಕ್‌ಗಳನ್ನು ಪೂರೈಸಿ ಐರನ್ ಮ್ಯಾನ್ ಅನಿಸಿಕೊಂಡಿದ್ದರು. ಝೂರಿಚ್‌ನಲ್ಲಿ ತ್ರೈಥಲಾನ್ ಸ್ಪರ್ಧೆ ಇತ್ತು. ವಿಶ್ವಾದ್ಯಂತದ ಜನ  ಬಂದಿದ್ದರು. 3.8 ಕಿಲೋಮೀಟರ್ ಈಜು, 180.2 ಕಿಲೋ ಮೀಟರ್ ಸೈಕ್ಲಿಂಗ್ ಹಾಗೂ 42.2 ಕಿಮೀ ಓಟವನ್ನು 16 ಗಂಟೆಗಳಲ್ಲಿ ಬ್ರೇಕ್ ತೆಗೆದುಕೊಳ್ಳದೇ ಪೂರೈಸಬೇಕಿತ್ತು. ಆಗ 50 ರ ಹರೆಯದಲ್ಲಿದ್ದ ಮಿಲಿಂದ್ 15 ಗಂಟೆ 19 ನಿಮಿಷದಲ್ಲಿ ಟಾಸ್ಕ್ ಪೂರೈಸಿ ದಾಖಲೆ ಮಾಡಿದ್ರು.

2.. 2017 ರಲ್ಲಿ ಫ್ಲೋರಿಡದಲ್ಲಿ ‘ಅಲ್ಟ್ರಾ ಎಂಡ್ಯುರೆನ್ಸ್ ಇವೆಂಟ್’ ಇತ್ತು. ಮೊದಲ ಭಾಗವಾಗಿ 517.5 ಕಿಮೀ ರನ್ನಿಂಗ್ ಇತ್ತು. ಇದನ್ನು ಪೂರೈಸಿದವರು ಮೊದಲ ದಿನ 10 ಕಿಮೀ ಈಜು, 148 ಕಿಮೀ ಬೈಕ್ ರೈಡ್, ಎರಡನೇ ದಿನ 276 ಕಿಮೀ ಬೈಕ್ ರೈಡ್, ಮೂರನೇ ದಿನ 84 ಕಿಮೀ ಓಟ ಪೂರೈಸಬೇಕಿತ್ತು. ಬರಿಗಾಲಲ್ಲೇ 34 ಗಂಟೆ 46 ನಿಮಿಷಗಳಲ್ಲಿ 84 ಕಿಮೀ ಓಡಿದ ಮಿಲಿಂದ್ ‘ ಅಲ್ಟ್ರಾ ಮ್ಯಾನ್’ ಅನಿಸಿಕೊಂಡರು.

3.  30 ದಿನಗಳಲ್ಲಿ 1500 ಕಿಮೀ ಓಡಿ ಲಿಮ್ಕಾ ದಾಖಲೆ ನಿರ್ಮಿಸಿದವರು ಮಿಲಿಂದ್.ಇಷ್ಟೆಲ್ಲ ಸಾಧನೆ ಮಾಡಿದ್ರೂ ಇವರು ಜಿಮ್‌ಗೆ ಹೋಗಲ್ಲ. ಸಿಕ್ಕಿಸಿಕ್ಕಿದ ಎಕ್ಸರ್‌ಸೈಸ್ ಮಾಡಿ ಮೈ
ಕರಗಿಸಲಿಕ್ಕೆ ಹರಸಾಹಸ ಪಡಲ್ಲ. ವಾರದಲ್ಲಿ ಮೂರ್ನಾಲು ದಿನವಷ್ಟೇ ರನ್ನಿಂಗ್ ಮಾಡ್ತಾರೆ. ಊಟ, ತಿಂಡಿ ಬಿಟ್ಟು ಡಯೆಟ್ ಮಾಡಲ್ಲ. ಆದರೆ 19 ವರ್ಷದವರಿದ್ದಾಗ ಎಷ್ಟು ತೂಕ ಇತ್ತೋ ಈಗಲೂ ಅಷ್ಟೇ ಇದೆ. ದೈಹಿಕ ಕ್ಷಮತೆಯೂ ಹಾಗೇ ಇದೆ ಅಂತಾರೆ
 

ಈ ಐರನ್ ಮ್ಯಾನ್. ಡಯೆಟ್ ಮಾಡಲ್ಲ, ಆದರೆ ..
ಮಿಲಿಂದ್ ಡಯೆಟ್ ಅಂತ ಊಟ, ತಿಂಡಿಗೆ ರಿಸ್ಟ್ರಿಕ್ಟ್ ಮಾಡ್ಕೊಂಡಿಲ್ಲ. ಆದರೆ ಸಂಸ್ಕರಿಸಿ ಬಿಳಿ ಸಕ್ಕರೆಯನ್ನು ತಿನ್ನೋದಿಲ್ಲ. ಸ್ವೀಟ್ ತಿನ್ಬೇಕು ಅನಿಸಿದ್ರೆ ಬೆಲ್ಲ ಮತ್ತು ಜೇನುತುಪ್ಪ ಹಾಕಿದ ಸ್ವೀಟ್ಸ್ ತಿನ್ನುತ್ತಾರೆ. ಪ್ಯಾಕಿಂಗ್‌ನಲ್ಲಿರುವ ಆಹಾರ, ಸಂಸ್ಕರಿಸಿದ ಆಹಾರ ಪದಾರ್ಥ ಮುಟ್ಟಲ್ಲ. ಬಿಸ್ಕೆಟ್‌ಅನ್ನೂ ತಿನ್ನಲ್ಲ. ಇನ್ನೊಂದು ಆಸಕ್ತಿಕರ ವಿಷಯ ಅಂದರೆ ಇವರು ಚೈನೀಸ್ ಥರ ಕೆಲವು ಕೀಟಗಳನ್ನು ತಿನ್ನುತ್ತಾರೆ. ಆದರೆ ಅಪರೂಪಕ್ಕೆ. ಸುಲಭವಾಗಿ ಸಿಗುವಂತಿದ್ದರೆ ದಿನಾ ತಿನ್ನಲಿಕ್ಕೂ ರೆಡಿ ಅಂತ ಧೈರ್ಯವಾಗಿ ಹೇಳ್ತಾರೆ.

ಬೆಳಗ್ಗೆ ಹೇರಳವಾಗಿ ಹಣ್ಣುಗಳನ್ನು ತಿನ್ನುವುದು ರೂಢಿ. ಹಾಗಾಗಿ ಇವರಿಗೆ ಅದ್ಭುತ ಸ್ಟೆಮಿನ ಇದೆ. ಪಪ್ಪಾಯಿ, ಬಾಳೆ ಹಣ್ಣು, ಮೆಲನ್ ಅಥವಾ ಸೀಸನಲ್ ಹಣ್ಣುಗಳನ್ನು ಸೂರ್ಯಾಸ್ತದ  ಮೊದಲು ತಿನ್ನೋ ರೂಢಿ. ಇದು ಆರೋಗ್ಯಕ್ಕೆ ಒಳ್ಳೆಯದು. ಹಣ್ಣುಗಳನ್ನು ಬೇರೆ ತಿಂಡಿಗಳ ಜೊತೆಗೆ ಸೇರಿಸಬಾರದು. ಹಾಗೆ  ಸೇರಿಸಿದರೆ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತೆ ಅಂತಾರೆ ಮಿಲಿಂದ್.  ಅಮ್ಮ ಮಾಡುವ ಖಿಚಡಿ ಅಂದರೆ ಪ್ರಾಣ. ಮೂರನೇ ಒಂದು ಭಾಗ ಅನ್ನ. ಉಳಿದದ್ದು ತರಕಾರಿ. ಸಾವಯವ ವಿಧಾನದಲ್ಲಿ ಬೆಳೆದ ಹೆಚ್ಚಿನ ತರಕಾರಿಗಳನ್ನು ಸಿಪ್ಪೆ ತೆಗೆಯದೇ ತಿನ್ನಬೇಕು. ಸಿಹಿ ಗೆಣಸು, ಪಾಲಿಶ್ ಮಾಡದ ರಾಗಿ, ಸಜ್ಜೆ  ಆಹಾರದಲ್ಲಿರುತ್ತದೆ. ಮೊಸರು, ಮಜ್ಜಿಗೆ ಮತ್ತು ಆಡಿನ ಹಾಲಿಂದ ತಯಾರಿಸಿದ ಚೀಸ್ ತಿನ್ನೋದರಿಂದ ಶಕ್ತಿ ಬರುತ್ತೆ  ಅನ್ನೋದು ಮಿಲಿಂದ್ ಅನುಭವದ ನುಡಿ. ಮಿಲಿಂದ್ ಸಸ್ಯಾಹಾರವನ್ನು ಬಹಳ ಇಷ್ಟಪಡುತ್ತಾರೆ. ಮಾಂಸಾಹಾರ ಸೇವನೆ ಬಹಳ ಕಡಿಮೆ. 5 ದೊಡ್ಡ ಲೋಟ ಜ್ಯೂಸ್ ಮಿಸ್ ಮಾಡಲ್ಲ.
ಬೇಗ ಮಲಗಿ, ಬೇಗ ಏಳಿ ಪಾಲಿಸಿ.  ರಾತ್ರಿ ಹತ್ತೂವರೆ ಹನ್ನೊಂದಕ್ಕೆಲ್ಲ ಮಲಗಿ ಬೆಳಗ್ಗೆ ಐದು ಗಂಟೆಗೆ  ಏಳೋದನ್ನು ಮೊದಲಿನಿಂದಲೂ ರೂಢಿಸಿಕೊಂಡಿದ್ದಾರೆ. ಇದು ಆರೋಗ್ಯದ ಮುಖ್ಯ ಗುಟ್ಟೂ ಹೌದು.

ಮಿಲಿಂದ್ ಫಿಟ್‌ನೆಸ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು

1.  ಮಿಲಿಂದ್‌ಗೆ ಮುಂಬೈನಲ್ಲಿ ‘ಬ್ರೀಥ್’ ಎಂಬ ಹೆಸರಿನ ಎರಡು ಜಿಮ್‌ಗಳಿವೆ. ‘ನೀವು ಜಿಮ್‌ಗೆ ಹೋಗ್ತೀರಾ’ ಅಂದ ಕೇಳಿದ್ರೆ, ‘ಹೌದು’ ಅನ್ನುವ ಮಿಲಿಂದ್, ‘ನನ್ನ  ಜಿಮ್‌ಗಳಿಗೆ ಹೋಗಲೇ ಬೇಕಲ್ಲ, ಆದರೆ ಅಲ್ಲಿ ವರ್ಕೌಟ್ ಮಾಡಲ್ಲ’ ಅಂತ ನಗ್ತಾರೆ. ಜಿಮ್‌ನಲ್ಲಿ ಕೃತಕವಾಗಿ ಯಂತ್ರಗಳ ಸಹಾಯದಿಂದ ವ್ಯಾಯಾಮ  ಮಾಡಲಾಗುತ್ತೆ. ದೇಹದ ಪ್ರತಿಯೊಂದು ಭಾಗಕ್ಕೂ ಎಕ್ಸರ್‌ಸೈಸ್ ಸಿಗಲ್ಲ. ಸಹಜವಾಗಿರಲು ಬಯಸುವ ಇವರಿಗೆ ಇದು ಇಷ್ಟವಿಲ್ಲ.

2. 19 ನೇ ವಯಸ್ಸಿನಿಂದ 38 ನೇ ವರ್ಷದವರೆಗೆ ಇವರು ಜಿಮ್, ವರ್ಕೌಟ್, ವ್ಯಾಯಾಮ ಏನೂ ಮಾಡಿಲ್ಲ. 19 ನೇ ವಯಸ್ಸಿನಲ್ಲಿ ಎಷ್ಟಿತ್ತೋ ಇವತ್ತಿಗೂ ಅಷ್ಟೇ ಇದೆ ಇವರ ತೂಕ. ಒಂದು ಕೆಜಿನೂ ಹೆಚ್ಚು ಕಡಿಮೆ ಆಗಿಲ್ಲ.

3.  ಇವರ 79 ರ ಹರೆಯದ ತಾಯಿ 90 ಸೆಕೆಂಡ್ ಪುಶ್‌ಅಪ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದರು.
4.  ಓಟ, ಮ್ಯಾರಥಾನ್‌ನಲ್ಲಿ ಅಷ್ಟೆಲ್ಲ ಜನಪ್ರಿಯರಾದರೂ ಪ್ರತಿದಿನವೂ ಅವರು ರನ್ನಿಂಗ್ ಮಾಡಲ್ಲ. ವಾರದಲ್ಲಿ 3-4 ಬಾರಿ ಮಾತ್ರ ಓಡುತ್ತಾರೆ.
5.  ಚೈನ್ ಸ್ಮೋಕರ್ ಆಗಿದ್ದವರು ದಿನಕ್ಕೆ 37 ಸಿಗರೇಟು ಸೇದುತ್ತಿದ್ದರು. ಈ ದುರಭ್ಯಾಸ ಬಿಡಲು 3 ವರ್ಷ ಬೇಕಾಯ್ತು.
6.  ಕೀಟಗಳನ್ನು ತಿನ್ನೋ ಅಭ್ಯಾಸ ಇದೆ. ಜಗತ್ತಿನಲ್ಲಿ ಕೆಲವೊಂದು ಭಾಗದ ಜನ ಕೀಟಗಳನ್ನು ತಿನ್ನುತ್ತಾರೆ. ನಾನೂ ತಿನ್ತೀನಿ ಅಂತಾರೆ ಮಿಲಿಂದ್.
7.  ಗ್ಯಾಜೆಟ್, ಯಂತ್ರಗಳಿಂದ ದೂರವೇ ಇರುತ್ತಾರೆ. ಅವರ ಫೇವರೆಟ್ ಮೆಶಿನ್ ಅಂದರೆ ಜ್ಯೂಸರ್. ದಿನದಲ್ಲಿ ದೊಡ್ಡ ಲೋಟದಲ್ಲಿ ಐದು ಲೋಟ ಜ್ಯೂಸ್ ಕುಡಿತಾರೆ.  

click me!