ಸಿಂಪಲ್ ಸುನಿ "ಬಜಾರ್" ಚಿತ್ರದಲ್ಲಿ ಅದಿತಿ ಪಾತ್ರವೇನು ಗೊತ್ತಾ?

By Web Desk  |  First Published Jan 25, 2019, 8:53 AM IST

ಕಿರುತೆರೆಯಲ್ಲಿ ನಾಗಕನ್ನಿಕೆ ಅಂತೊಂದು ಧಾರಾವಾಹಿ ಬರುತ್ತಿತ್ತಲ್ಲಾ? ಅದರಲ್ಲಿ ನಾಗಿಣಿಯಾಗಿ ಬುಸುಗುಡುತ್ತಲೇ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದವ್ರು ಅದಿತಿಪ್ರಭುದೇವ. ಒಂದೇ ನೋಟದಲ್ಲಿ ಹೀರೋಯಿನ್ ಲುಕ್ಕು ರವಾನಿಸುವ ಅದಿತಿ ಧಾರಾವಾಹಿಗಳಲ್ಲಿ ನಟಿಸಿದರೂ ಅವರ ಪ್ರಧಾನ ಕನಸಾಗಿದ್ದದ್ದು ಹಿರಿತೆರೆ ನಾಯಕಿಯಾಗೋ ಬಯಕೆ. ಅದಕ್ಕೆ ಪಕ್ಕಾ ಸಾಥ್ ನೀಡುವತೆ ಅವರೀಗ ಬಜಾರ್ ಚಿತ್ರದ ನಾಯಕಿಯಾಗಿ, ಭಿನ್ನ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ಎದುರಾಗಲು ತಯಾರಾಗಿದ್ದಾರೆ.


ಅದಿತಿ ಪ್ರಭುದೇವ ಈ ಹಿಂದೆ ಅಜಯ್‌ ರಾವ್ ನಟಿಸಿದ್ದ ಧೈರ್ಯಂ ಚಿತ್ರದಲ್ಲಿ ನಾಯಕಿಯಾಗಿದ್ದರು. ಅದು ಅವರ ಮೊದಲ ಚಿತ್ರ. ಅದಾದ ನಂತರದಲ್ಲಿ ಬಹು ಕಾಲದ ಬಳಿಕ ಅವರ ಮುಂದೆ ಬಂದಿದ್ದ ಬಜಾರ್ ಚಿತ್ರಕ್ಕೆ ನಾಯಕಿಯಾಗಿ ಅವಕಾಶ. ಸಿಂಪಲ್ ಸುನಿ ಈ ಕಥೆ ಹೇಳಿದಾಗ ಮರು ಮಾತಾಡದೆ ಅದಿತಿ ಒಂದೇ ಸಲಕ್ಕೆ ಒಪ್ಪಿಕೊಂಡು ಬಿಟ್ಟಿದ್ದರಂತೆ.

 

Tap to resize

Latest Videos

ಹೀಗೆ ಅದಿತಿ ಒಪ್ಪಿಕೊಂಡಿದ್ದರಲ್ಲೇನು ವಿಶೇಷ ಅನ್ನಿಸೋದು ಸಹಜವೇ. ಆದರೆ ಅವರ ಸಂಪೂರ್ಣ ಹಿಸ್ಟರಿಯನ್ನೇನಾದ್ರೂ ಕೇಳಿದರೆ ಅದಿತಿ ಒಂದೇ ಸಲಕ್ಕೆ ಬಜಾರ್ ಕಥೆಗೆ ಓಕೆ ಅಂದಿದ್ದೊಂದು ಪವಾಡವೇ ಅನ್ನಿಸೋದರಲ್ಲಿ ಸಂದೇಹವೇನಿಲ್ಲ. ಅದಿತಿ ಯಾವುದೇ ಕಥೆಯನ್ನು ಬಡಪೆಟ್ಟಿಗೆ ಒಪ್ಪಿಕೊಳ್ಳುವವರಲ್ಲ. ಆದ್ದರಿಂದಲೇ ಅವರು ಬಜಾರ್‌ಗೂ ಮೊದಲು ಇಪ್ಪತ್ತಕ್ಕು ಹೆಚ್ಚು ಕಥೆಗಳನ್ನು ಕೇಳಿ ಬೇಡ ಅಂದಿದ್ದರಂತೆ.

 

ತನ್ನ ಪಾತ್ರ, ಒಟ್ಟಾರೆ ಕಥೆ ಸೇರಿದಂತೆ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ಅದಿತಿ ಒಪ್ಪಿಕೊಳ್ತಾರೆ. ಅಂಥಾ ಅದಿತಿ ಒಂದೇ ಸಲಕ್ಕೆ ಒಪ್ಪಿಕೊಂಡಿದ್ದಾರೆಂಬುದೇ ಬಜಾರ್ ಕಥೆಯ ಖದರಿಗೆ ಸಾಕ್ಷಿ. ಹಾಗಿದ್ದ ಮೇಲೆ ಈ ಸಿನಿಮಾದಲ್ಲಿ ಅದಿತಿ ಪಾತ್ರವೂ ಮಜಬೂತಾಗಿದೆ ಎಂದೇ ಅರ್ಥ. ಇದರಲ್ಲಿ ಅದಿತಿ ಪಾರಿಜಾತ ಎಂಬ ಪಾತ್ರಕ್ಕೆ ಜೀವತುಂಬಿದ್ದಾರೆ.  ಪಾರಿವಾಳದ ರೇಸಿನ ಹುಚ್ಚು ಹತ್ತಿಸಿಕೊಂಡವನ ಜೊತೆ ಲವ್ವಲ್ಲಿ ಬೀಳೋ ಈ ಪಾತ್ರವೇ ಬಜಾರ್‌ರಿನ ಆಕರ್ಷಣೆಯಂತಿದೆಯಂತೆ!

 

click me!