’ಬಜಾರ್‌’ನಲ್ಲಿ ಪಾರಿಜಾತವಾಗಿ ಹಾರಲು ಬರುತ್ತಿದ್ದಾಳೆ ಅದಿತಿ ಪ್ರಭುದೇವ್

By Web Desk  |  First Published Jan 24, 2019, 5:58 PM IST

ಕಿರುತೆರೆಯಲ್ಲಿ ನಾಗಿಣಿಯಾಗಿ ಬುಸುಗುಡುತ್ತಲೇ ಅಪಾರ ಅಭಿಮಾನಿ ಬಳಗವನ್ನ ಹೊಂದಿದ ಪ್ರತಿಭಾವಂತ ನಟಿ ಅದಿತಿ ಪ್ರಭುದೇವ.  ಒಂದೇ ನೋಟದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವ ಅದಿತಿ ಧಾರಾವಾಹಿಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕಿರುತೆರೆಯಿಂದ ಹಿರಿತೆರೆಗೆ ಹಾರಲು ರೆಡಿಯಾಗಿದ್ದಾರೆ. 


ಬೆಂಗಳೂರು (ಜ.24): ಕಿರುತೆರೆಯಲ್ಲಿ ನಾಗಿಣಿಯಾಗಿ ಬುಸುಗುಡುತ್ತಲೇ ಅಪಾರ ಅಭಿಮಾನಿ ಬಳಗವನ್ನ ಹೊಂದಿದ ಪ್ರತಿಭಾವಂತ ನಟಿ ಅದಿತಿ ಪ್ರಭುದೇವ. 

ಒಂದೇ ನೋಟದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವ ಅದಿತಿ ಧಾರಾವಾಹಿಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕಿರುತೆರೆಯಿಂದ ಹಿರಿತೆರೆಗೆ ಹಾರಲು ರೆಡಿಯಾಗಿದ್ದಾರೆ. ’ಬಜಾರ್’ ಚಿತ್ರದ ನಾಯಕಿಯಾಗಿ, ಭಿನ್ನ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ಎದುರಾಗಲು ತಯಾರಾಗಿದ್ದಾರೆ.

Tap to resize

Latest Videos

ಅದಿತಿ ಪ್ರಭುದೇವ ಈ ಹಿಂದೆ ಅಜಯ್ ರಾವ್ ನಟಿಸಿದ್ದ ಧೈರ್ಯಂ ಚಿತ್ರದಲ್ಲಿ ನಾಯಕಿಯಾಗಿದ್ದರು. ಅದು ಅವರ ಮೊದಲ ಚಿತ್ರ. ಅದಾದ ನಂತರ ಬಹು ಕಾಲದ ಬಳಿಕ ಬಜಾರ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಸಿಂಪಲ್ ಸುನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

ಈ ಚಿತ್ರದಲ್ಲಿ ಅದಿತಿ ಪಾತ್ರ ತುಂಬಾ ಭಿನ್ನವಾಗಿದೆ.  ಅದಿತಿ ಪಾರಿಜಾತ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪಾರಿವಾಳದ ರೇಸಿನ ಹುಚ್ಚು ಹತ್ತಿಸಿಕೊಂಡವನ ಜೊತೆ ಲವ್ವಲ್ಲಿ ಬೀಳೋ ಈ ಪಾತ್ರವೇ ಬಜಾರಿನ ಆಕರ್ಷಣೆ. 

click me!