
ವಿನಯ್ ರಾಜ್‌ಕುಮಾರ್ (Vinay Rajkumar) ಹಾಗೂ ಅದಿತಿ ಪ್ರಭುದೇವ (Aditi Prabhudeva) ನಟನೆಯ 'ಅಂದೊಂದಿತ್ತು ಕಾಲ' ಸಿನಿಮಾ ಇದೇ ತಿಂಗಳು 29ರಂದು (29 August 2025) ಕರ್ನಾಟಕದಾದ್ಯಂತ ರಿಲೀಸ್ ಆಗಲಿದೆ. ಈ (Andondittu Kaala) ಚಿತ್ರವನ್ನು ಕೀರ್ತಿ ಕೃಷ್ಣಪ್ಪ ನಿರ್ದೇಶನವನ್ನು ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ ಎನ್ನಲಾಗಿದೆ. ಸದ್ಯ 'ಅಂದೊಂದಿತ್ತು ಕಾಲ' ಚಿತ್ರತಂಡವು ಕರ್ನಾಟಕದ ಬೇರೆಬೇರೆ ಕಡೆಗಳಲ್ಲಿ ಪ್ರಚಾರಕಾರ್ಯವನ್ನು ಕೈಗೊಂಡಿದೆ. ಈ ವೇಳೆ ನಡೆದ ಸಂದರ್ಶನವೊಂದರಲ್ಲಿ ನಟಿ ಅದಿತಿ ಹಾಗೂ ನಟ ವಿನಯ್ ಮಧ್ಯೆ ನಡೆದ ಸಂಭಾಷಣೆಗಳು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸಂದರ್ಶಕರು ವಿನಯ್ ಜೊತೆ ಮಾತನಾಡುತ್ತ 'ನೀವು ಓಂ ಸಿನಿಮಾದಲ್ಲಿ ಒಂದು ಸೀನ್‌ನಲ್ಲಿ ನಟನೆ ಮಾಡಿದೀರಾ' ಎನ್ನುತ್ತಿದ್ದಂತೆ ಅಚ್ಚರಿಗೆ ಒಳಗಾದ ನಟಿ ಅದಿತಿ ಪ್ರಭುದೇವ ಅವರು ವಿನಯ್ ನೋಡಿ 'ಹೌದಾ ಸರ್, ನಿಜ್ವಾ?' ಎನ್ನಲು ವಿನಯ್ ಅವರು 'ಹೌದು, ಲಾಸ್ಟ್ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ನಟಿಸಿದ್ದೆ ಅಷ್ಟೇ' ಎನ್ನುತ್ತಾರೆ. ಅದಕ್ಕೆ ಅದಿತಿಯವರು 'ಹೌದಾ, ಹಾಗಿದ್ರೆ ಇವ್ರ ಫಸ್ಟ್ ಸಿನಿಮಾನೇ ಸೂಪರ್ ಡೂಪರ್ ಹಿಟ್' ಎನ್ನುತ್ತಾರೆ.
ಆಗ ನಟ ವಿನಯ್ ರಾಜ್‌ಕುಮಾರ್ 'ನಾನು ಚಿಕ್ಕವನಿದ್ದಾಗ ಒಟ್ಟೂ 5 ಸಿನಿಮಾಗಳಲ್ಲಿ ನಟಿಸಿದ್ದೇನೆ' ಎಂದು ಹೇಳುತ್ತಾರೆ. ಜೊತೆಗೆ, ಅವರು ಯಾವೆಲ್ಲಾ ಸಿನಿಮಾಗಳಲ್ಲಿ ಚಿಕ್ಕವರಿದ್ದಾಗ ನಟಿಸಿದ್ರು ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಅನುರಾಗದ ಅಲೆಗಳು, ಓಂ, ಒಡಹುಟ್ಟಿದವರು, ಆಕಸ್ಮಿಕ ಹಾಗು ಹೃದಯಾ ಹೃದಯಾ ಚಿತ್ರಗಳಲ್ಲಿ ನಟಿಸಿದ್ದನ್ನು ಹೇಳಿಕೊಂಡಿದ್ದಾರೆ. ಅದಿತಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ವಿನಯ್ ಅವರು ಆಕಸ್ಮಿಕ ಚಿತ್ರದಲ್ಲಿ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಲ್ಲಿ ಎತ್ತಿನ ಬಂಡಿಯ ಮೇಲೆ ಕುಳಿತ ಆ ಇಬ್ಬರು ಮಕ್ಕಳಲ್ಲಿ ತಾವು ಒಬ್ಬರು ಎಂದಿದ್ದಾರೆ.
ಅಲ್ಲಿಗೆ, ಡಾ ರಾಜ್‌ಕುಮಾರ್ ಕುಟುಂಬದ ಕುಡಿ ವಿನಯ್ ಅವರು ಚಿಕ್ಕವರಿದ್ದಾಗಲೇ 5 ಸಿನಿಮಾಗಳಲ್ಲಿ ನಟಿಸಿರುವ ಬಾಲಕಲಾವಿದ ಎಂಬುದು ಜಗಜ್ಜಾಹೀರಾಗಿದೆ. ಬಳಿಕ ಅವರು ಕನ್ನಡ ಚಿತ್ರರಂಗಕ್ಕೆ 2014 ಸಿದ್ದಾರ್ಥ ಸಿನಿಮಾ ಮೂಲಕ ಬಂದವರು. ಬಳಿಕ, ರನ್ ಆಂಟನಿ, ಪೆಪೆ, ಗ್ರಾಮಾಯಣ, ಅನಂತು ವರ್ಸಸ್ ನುಸ್ರತ್ ಹಾಗೂ ಒಂದು ಸರಳ ಪ್ರೇಮಕಥೆ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ 'ಅಂದೊಂದಿತ್ತು ಕಾಲ' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಮುಂದಿನ ಶುಕ್ರವಾರ (ಆಗಸ್ಟ್ 29) ಬರಲಿದ್ದಾರೆ.
ಇನ್ನು ನಟಿ ಅದಿತಿ ಪ್ರಭುದೇವ ಅವರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ರಂಗನಾಯಕಿ, ಬ್ರಹ್ಮಚಾರಿ, ತೋತಾಪುರಿ-1, ತ್ರಿಬಲ್ ರೈಡಿಂಗ್ ಹಾಗೂ ಛೂ ಮಂತರ್ ಸಿನಿಮಾಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ವಿನಯ್ ರಾಜ್‌ಕುಮಾರ್ ಜೊತೆ 'ಅಂದೊಂದಿತ್ತು ಕಾಲ' ಚಿತ್ರದ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ಮತ್ತೆ ದರ್ಶನ ಕೊಡಲಿದ್ದಾರೆ. ಈ ನಡುವೆ ಯಶಸ್ ಜೊತೆ ಮದುವೆಯಾಗಿ ಮುದ್ದು ಮಗುವೊಂದರ ತಾಯಿಯಾಗಿ ಸುಖ-ಸಂಸಾರ ಸಾಗಿಸುತ್ತ ಮಾದರಿ ನಟಿ ಎನ್ನಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.