ತಾಪ್ಸಿ ಪನ್ನುಗೆ ಈ ನಟಿಯರೇ ಗುರುಗಳು!

Published : Aug 22, 2019, 10:10 AM IST
ತಾಪ್ಸಿ ಪನ್ನುಗೆ ಈ ನಟಿಯರೇ ಗುರುಗಳು!

ಸಾರಾಂಶ

ಜೀವನದಲ್ಲಿ ಎಲ್ಲರಿಗೂ ಅಲ್ಲದೇ ಇದ್ದರೂ ತುಂಬಾ ಮಂದಿಗೆ ಸಾಕಷ್ಟುಗುರಿಗಳಿರುತ್ತವೆ. ಜೊತೆಗೆ ಎಲ್ಲಾ ಹಂತಗಳಲ್ಲಿ ಅಲ್ಲದೇ ಇದ್ದರೂ ಕೆಲವು ಹಂತಗಳಲ್ಲಿ ಗುರುಗಳು ಇದ್ದೇ ಇರುತ್ತಾರೆ. ಹಾಗೆಯೇ ಬಾಲಿವುಡ್‌ನ ಕ್ಯೂಟ್‌ ಬ್ಯೂಟಿ ತಾಪ್ಸಿ ಪನ್ನುಗೆ ಮೂವರು ಗುರುಗಳಿದ್ದಾರೆ. 

 ಆ ಮೂವರು ಯಾರೆಂದರೆ ಕಂಗನಾ ರಾಣಾವತ್‌, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ. ಈ ಮೂವರೂ ತಾಪ್ಸಿಗೆ ಒಂದೊಂದು ಕಾರಣಕ್ಕೆ ಇಷ್ಟ. ಅದು ಯಾಕೆಂದು ಅವರೇ ಹೇಳಿದ್ದಾರೆ. ಜೊತೆಗೆ ಸ್ತ್ರೀವಾದಕ್ಕೆ ತಮ್ಮದೇ ಅರ್ಥವನ್ನೂ ಕೊಟ್ಟಿದ್ದಾರೆ.

600 ರೂ. ಸೀರೆಯಲ್ಲಿ ಮಿಂಚಿದ ಕಂಗನಾರ ಹ್ಯಾಂಡ್‌ಬ್ಯಾಗ್‌ ಹಿಡಿದು ಜಗ್ಗಿದ್ರು!

ಖಾಸಗಿ ಸಂದರ್ಶನವೊಂದರಲ್ಲಿ ಸ್ತ್ರೀವಾದದ ಬಗ್ಗೆ ಹಾಗೂ ಭಾರತೀಯ ಚಿತ್ರರಂಗದಲ್ಲಿನ ನಟಿಯರಲ್ಲಿ ಪ್ರಭಾವ ಬೀರುವವರು ಯಾರು ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ತಾಪ್ಸಿ ‘ಸ್ತ್ರೀವಾದ ಎನ್ನುವುದು ನನ್ನ ಪಾಲಿಗೆ ಎಲ್ಲರಿಗೂ ಸಮಾನ ಅವಕಾಶ ತಂದುಕೊಡುವುದೇ ಆಗಿದೆ. ಅದಕ್ಕೆ ಪೂರಕವಾಗಿ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ಹಾಗೆ, ಅವರಲ್ಲಿನ ಪ್ರತಿಭೆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪೂರಕ ಕೆಲಸ ಮಾಡಬೇಕೆಂದು ನನಗೂ ಆಸೆ ಇದೆ’ ಎಂದಿದ್ದಾರೆ ತಾಪ್ಸಿ.

No way,48 ಕೋಟಿ ಬೇಡ; ಸಂಸಾರ ಮಾಡೋಕೆ 140 ಕೋಟಿನೇ ಬೇಕು!

ಚಿತ್ರರಂಗದಲ್ಲಿ ಪ್ರಭಾವ ಬೀರಿದ ನಟಿಯರ ಬಗ್ಗೆ ತಾಪ್ಸಿ ಮೂವರ ಹೆಸರನ್ನು ಉಲ್ಲೇಖಿಸಿದ್ದು ಅದರಲ್ಲಿ ಕಂಗನಾ ಸಹ ಒಬ್ಬರು. ‘ಕಂಗನಾ ರಾಣಾವತ್‌ ಅವರ ನೇರ ನುಡಿ ನನಗೆ ಬಹಳ ಇಷ್ಟವಾಗುತ್ತೆ. ಅವರಿಗೆ ಬೇಕು ಅನಿಸಿದ್ದನ್ನು, ತಪ್ಪು ಸರಿಯನ್ನು ನೇರವಾಗಿ ಹೇಳುತ್ತಾರೆ. ಅವರ ಸ್ಟೆ್ರೖಟ್‌ ಫಾರ್ವರ್ಡ್‌ ಬಹಳ ಇಷ್ಟ’ ಎಂದಿದ್ದಾರೆ. ಜೊತೆಗೆ ‘ಪ್ರಿಯಾಂಕ ಚೋಪ್ರಾ ತಮ್ಮ ಏಳಿಗೆಗಾಗಿ ಜೀವನದಲ್ಲಿ ನಡೆದುಬಂದ ಹಾದಿ ಹಾಗೂ ಅನುಷ್ಕಾ ಶರ್ಮಾ ಅವರ ಪ್ರಾಮಾಣಿಕತೆ ನನಗೆ ಬಹಳ ಪ್ರೇರಣೆ ನೀಡುತ್ತೆ’ ಎಂದಿದ್ದಾರೆ. ಈ ಮೂವರು ನಟಿಯರು ತಾಪ್ಸಿ ಪನ್ನು ಮೇಲೆ ಬಹಳ ಪ್ರಭಾವ ಬೀರಿದ್ದಾರಂತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?