ಮುಸ್ಲಿಂ ಜೊತೆ ಮದುವೆ, ಡುಮ್ಮಿ, ಕೊಳಕು ಟ್ರೋಲ್‌ಗೆ ಪ್ರತಿಕ್ರಿಯಿಸಿದ ಸ್ವರಾ ಭಾಸ್ಕರ್

Published : Aug 13, 2026, 11:35 AM IST
Swara Bhasker

ಸಾರಾಂಶ

ನಟಿ ಸ್ವರಾ ಭಾಸ್ಕರ್ ಅವರು ಮದುವೆ ಮತ್ತು ಹೆರಿಗೆಯ ನಂತರದ ತೂಕ ಏರಿಕೆಗೆ ಸಂಬಂಧಿಸಿದಂತೆ ತಮ್ಮನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ್ದಾರೆ. ತಾಯಿಯಾದ ನಂತರ ದೇಹದಲ್ಲಿ ಆಗುವ ಬದಲಾವಣೆಗಳು ಸಹಜವಾಗಿದ್ದು, ಟೀಕೆಗಳಿಗೆ ಹೆದರಿ ತೂಕ ಇಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Bollywood Actress Swara Bhasker) ಅವರು ಫಹಾದ್ ಅಹ್ಮದ್ ಜೊತೆ ಮದುವೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್‌ಗೆ ಒಳಗಾದವರು. ಇದಕ್ಕೆ ಕಾರಣ ಇಸ್ಲಾಂ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದು. ಇದಾದ ಬಳಿಕ ಹೆಣ್ಣು ಮಗುವಿಗೆ ತಾಯಿಯಾದ ಬಳಿಕ ಸ್ವರಾ ಭಾಸ್ಕರ್ ತೂಕದಲ್ಲಿ ಏರಿಕೆಯಾಗಿತ್ತು. ತೂಕ ಏರಿಕೆಯ ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಟ್ರೋಲ್‌ ಹೆಸರಿನಲ್ಲಿ ವಿವಿಧ ಶೀರ್ಷಿಕೆಯಡಿ ಸ್ವರಾ ಭಾಸ್ಕರ್ ವಿರುದ್ಧ ಕ್ಯಾಂಪೇನ್ ಶುರುವಾಗಿತ್ತು. ಕೆಲ ಟ್ರೋಲಿಗರು ಎಲ್ಲಾ ಎಲ್ಲೆಗಳನ್ನು ಮೀರಿ, ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದರಿಂದ ಡುಮ್ಮಿ ಮತ್ತು ಕೊಳಕಾಗಿ ಕಾಣಿಸ್ತಿದ್ದಾರೆ ಎಂದು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಇದೀಗ ಈ ಎಲ್ಲಾ ಟ್ರೋಲ್‌ಗಳಿಗೆ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

ಪಾಡ್‌ಕಾಸ್ಟ್‌ಕ್ಕೆ ಸಂದರ್ಶನ ನೀಡಿರುವ ಸ್ವರಾ ಭಾಸ್ಕರ್, ಮದುವೆಯಿಂದ ಬಾಡಿ ಶೇಮಿಂಗ್‌ ಕುರಿತ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನೀವು ಇಷ್ಟೊಂದು ಖಾಲಿಯಾಗಿ ಕುಳಿತಿದ್ದೀರಾ? ಬೇರೆಯವರ ತೂಕದ ನಿಮಗ್ಯಾಕೆ ಚಿಂತೆ? ನಿಮ್ಮಿಂದ ನನ್ನ ಜೀವನ ನಡೆಯುತ್ತಿಲ್ಲ? ನಿಮಗೆ ಸೆ*ಕ್ಸಿ ಹುಡುಗಿಯನ್ನು ನೋಡಬೇಕೆನಿಸಿದ್ರೆ ಬೇರೆ ಪೇಜ್‌ಗಳಿಗೆ ಹೋಗಿ. ನಿಮಗೆ ನನ್ನ ಪೇಜ್‌ಗೆ ಬರುವಂತೆ ಹೇಳಿದ್ಯಾರು ಎಂದು ಸ್ವರಾ ಭಾಸ್ಕರ್ ಪ್ರಶ್ನೆ ಮಾಡಿದ್ದಾರೆ.

ಜೀವನ ಬದಲಾಗುತ್ತೆ ಮತ್ತು ಬದಲಾಗಲೇಬೇಕು

ಎರಡೂವರೆ ವರ್ಷದ ಹಿಂದೆ ನನಗೆ ಮಗು ಆಯ್ತು. ತಾಯಿಯಾದ ಬಳಿಕ ಮಹಿಳೆ ದೇಹದಲ್ಲಿ ಹಲವು ಬದಲಾವಣೆ ಆಗುತ್ತದೆ. ಸದಾ ಯೌವನವನ್ನು ಕಾಪಾಡಿಕೊಳ್ಳುವ ಉದ್ಯಮದಿಂದ ನಾನು ಬಂದಿದ್ದೇನೆ. ಇಲ್ಲಿ ಸುಂದರವಾಗಿ ಕಾಣಿಸಿಕೊಳ್ಳಲು ಬೊಟೊಕ್ಸ್, ಇಂಜೆಕ್ಷನ್, ಪ್ಲಾಸ್ಟಿಕ್ ಸರ್ಜರಿ ಸಹಜ ಅನ್ನೋದು ನನಗೆ ಗೊತ್ತಿದ. ಆದ್ರೆ ಸತ್ಯ ಇದು ಅಲ್ಲ. ಕಾಲ ಕಳೆದಂತೆ ಜೀವನ ಬದಲಾಗುತ್ತೆ ಮತ್ತು ಬದಲಾಗಲೇಬೇಕು ಎಂದು ಸ್ವರಾ ಭಾಸ್ಕರ್ ಹೇಳುತ್ತಾರೆ.

ತಾಯಿಯಾದ ಬಳಿಕ ಮಹಿಳೆ ಸೂಕ್ಷ್ಮವಾಗ್ತಾಳೆ!

45ನೇ ವಯಸ್ಸಿನಲ್ಲಿ 16 ವರ್ಷದಂತೆ ನಡೆದುಕೊಂಡ್ರೆ ನಿಮಗೆ ಹೇಗೆ ಅನ್ನಿಸುತ್ತೆ ಎಂದು ಒಮ್ಮೆ ಯೋಚಿಸಿ. ಚಿಕ್ಕ ಹುಡುಗಿಯಂತೆ ನಡೆದುಕೊಂಡ್ರೆ ನೀವೇ ಆಗ ಅಜ್ಜಿಯ ಎಂದು ಕರೆಯುತ್ತೀರಿ. ಹಾಗೆಯೇ ವಯಸ್ಸಾದ್ರೂ ಇಷ್ಟೊಂದು ಶೋಕಿ ಯಾಕೆ ಎಂದು ಪ್ರಶ್ನೆ ಮಾಡಿ ಟ್ರೋಲ್ ಮಾಡಲಾರಂಭಿಸುತ್ತಾರೆ. ಇನ್ನು ನಾನಂತು ಕೆಟ್ಟ ಪದಗಳನ್ನು ಕೇಳಿಸಿಕೊಂಡಿದ್ದೇನೆ. ಮಗುವಾದ ನಂತರ ಮಹಿಳೆ ತುಂಬಾ ಸೂಕ್ಷ್ಮವಾಗುತ್ತಾಳೆ ಎಂದು ಸ್ವರಾ ಭಾಸ್ಕರ್ ಹೇಳುತ್ತಾರೆ.

ಪತಿ ಜೊತೆ ಚುನಾವಣಾ ಪ್ರಚಾರ ನಡೆಸುವಾಗ ತುಂಬಾನೇ ಅವಮಾನಕ್ಕೊಳಗಾದೆ. ಆ ಸಂದರ್ಭದಲ್ಲಿ ಮೇಕಪ್ ಮಾಡಿಕೊಳ್ಳದೇ ಹೋಗುತ್ತಿದ್ದೆ. ಆ ವೇಳೆ ಕ್ಲಿಕ್ಕಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವು. ನಂತರ ನಡೆದಿದ್ದು ಎಲ್ಲರಿಗೂ ಗೊತ್ತಿದೆ.

ಟೀಕೆಗಳಿಗೆ ಹೆದರಿ ತೂಕ ಇಳಿಸಿಕೊಳ್ಳಲ್ಲ

ಜನರು ನನ್ನ ಹಳೆ ಮತ್ತು ಹೊಸ ಫೋಟೋ ಸೇರಿಸಿ ಹೋಲಿಕೆ ಮಾಡಲು ಆರಂಭಿಸಿದರು. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ನಾನು ದಪ್ಪ ಮತ್ತು ಕೊಳಕಾದೆ ಎಂದು ಹೇಳಲು ಆರಂಭಿಸಿದರು. ಇದರಿಂದ ಗಂಡ ಫಹಾದ್ ಸಹ ಟೆನ್ಷನ್‌ಗೆ ಒಳಗಾಗಿದ್ದರು. ಮುಂದುವರಿದು ಮಾತನಾಡಿದ ಸ್ವರಾ ಭಾಸ್ಕರ್, ನಾನು ಸಹ ಹಠವಂತೆ, ನಿಮ್ಮಗಳ ಟೀಕೆಯಿಂದ ತೂಕ ಕಡಿಮೆ ಮಾಡಿಕೊಳ್ಳಲು ಹೋಗಲ್ಲ. ಇನ್‌ಸ್ಟಾಗ್ರಾಂನಲ್ಲಿ ಚಬ್ಬಿ ಚಬ್ಬಿಯಾಗಿರೋ ಫೋಟೋ ಶೇರ್ ಮಾಡಿಕೊಳ್ಳುವೆ. ನಮ್ಮ ಉದ್ಯಮ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲೆ ಹಲವು ರೀತಿಯ ಒತ್ತಡಗಳಿರುತ್ತವೆ ಎಂಬುವುದು ಸತ್ಯ.

ಇದನ್ನೂ ಓದಿ: 'ಹೆಂಡ್ತಿಗೆ ಹೊಡೆಯಿರಿ.. ಆದ್ರೆ ಮೂಳೆ ಮುರೀಬೇಡಿ..' ಈ ದೇಶದ ಹೊಸ ಕಾನೂನಿಗೆ ಸ್ವರಾ ಭಾಸ್ಕರ್‌ ಕಿಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಿನಿಮಾ ಚಾನ್ಸ್ ಸಿಗದೇ ಮೊಬೈಲ್ ಗೀಳಿಗೆ ಬಲಿಯಾದ ಶಕೀಲಾ; ಆಸ್ಪತ್ರೆಯಿಂದಲೇ ಅಭಿಮಾನಿಗಳಿಗೆ ಮನವಿ ಮಾಡಿದ ನಟಿ!
₹23 ಲಕ್ಷದ ಕಾರು ಖರೀದಿಸಿದ ಕನ್ನಡ ಯೂಟ್ಯೂಬರ್ ಜೋಡಿ: “ಕ್ಯಾಶ್ ಕೊಟ್ಟು ತಗೊಂಡಿದ್ದೇವೆ ಅಂತಾರೆ, ನಮ್ಮ ಕಷ್ಟ ನಮಗೆ ಗೊತ್ತು” ಎಂದ ತಾರೇಶ್